ಕುನಾಲ್ ಕಮ್ರಾಗೆ ವಿಮಾನಯಾನ ನಿಷೇಧ, ಇಂಡಿಗೊ ಪೈಲೆಟ್ ಆಕ್ಷೇಪ
ಕುನಾಲ್ ಕಮ್ರಾ ಹಾರಾಟ ನಡೆಸಿದ ಇಂಡಿಗೊ ಪೈಲಟ್ ಮಂಗಳವಾರ ಇಂಡಿಗೊ ವಿಮಾನದಲ್ಲಿ ಹಿರಿಯ ಟಿವಿ ಸಂಪಾದಕನ ಜೊತೆಗಿನ ವಿಚಾರವಾಗಿ ಹಾಸ್ಯನಟನನ್ನು ನಿಷೇಧಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. ಕುನಾಲ್ ಕಮ್ರಾ ಅವರಿಗೆ ನಿಷೇಧ ಹೇರುವ ಮೊದಲು ತಮ್ಮ ಜೊತೆ ಏಕೆ ಸಮಾಲೋಚಿಸಿಲ್ಲ ಎಂದು ವಿಮಾನಯಾನ ಸಂಸ್ಥೆಗೆ ಪತ್ರ ಬರೆದಿದ್ದಾರೆ.
ನವದೆಹಲಿ: ಕುನಾಲ್ ಕಮ್ರಾ ಹಾರಾಟ ನಡೆಸಿದ ಇಂಡಿಗೊ ಪೈಲಟ್ ಮಂಗಳವಾರ ಇಂಡಿಗೊ ವಿಮಾನದಲ್ಲಿ ಹಿರಿಯ ಟಿವಿ ಸಂಪಾದಕನ ಜೊತೆಗಿನ ವಿಚಾರವಾಗಿ ಹಾಸ್ಯನಟನನ್ನು ನಿಷೇಧಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. ಕುನಾಲ್ ಕಮ್ರಾ ಅವರಿಗೆ ನಿಷೇಧ ಹೇರುವ ಮೊದಲು ತಮ್ಮ ಜೊತೆ ಏಕೆ ಸಮಾಲೋಚಿಸಿಲ್ಲ ಎಂದು ವಿಮಾನಯಾನ ಸಂಸ್ಥೆಗೆ ಪತ್ರ ಬರೆದಿದ್ದಾರೆ.
'ಪೈಲಟ್-ಇನ್-ಕಮಾಂಡ್‌ನೊಂದಿಗೆ ಯಾವುದೇ ಸಮಾಲೋಚನೆಯಿಲ್ಲದೆ, ಈ ಸಂದರ್ಭದಲ್ಲಿ ನನ್ನ ವಿಮಾನಯಾನ ಸಂಸ್ಥೆಯು ಕೇವಲ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಆಧಾರದ ಮೇಲೆ ಕ್ರಮ ಕೈಗೊಂಡಿದೆ ಎನ್ನುವುದನ್ನು ತಿಳಿದು ನನಗೆ ನಿರಾಶೆಯಾಗಿದೆ. ಇದು ನನ್ನ ಒಂಬತ್ತು ವರ್ಷಗಳ ವಿಮಾನಯಾನ ಹಾರಾಟದಲ್ಲಿ ಮೊದಲನೆಯದು 'ಎಂದು ಕ್ಯಾಪ್ಟನ್ ಹೇಳಿದ್ದಾರೆ.
ಕುನಾಲ್ ಕಮ್ರಾ ಅವರ ನಡವಳಿಕೆಯು ಅಹಿತಕರವಾಗಿದ್ದರೂ,1 ನೇ ಲೇವಲ್ ಅಶಿಸ್ತಿನ ಪ್ರಯಾಣಿಕರಿಗೆ ಅರ್ಹತೆ ಹೊಂದಿಲ್ಲ" ಮತ್ತು ಘಟನೆಗಳನ್ನು ಯಾವುದೇ ರೀತಿಯಲ್ಲಿ ವರದಿ ಮಾಡಲಾಗುವುದಿಲ್ಲ ಎಂದು ಕ್ಯಾಪ್ಟನ್ ಹೇಳಿದ್ದಾರೆ. ಇಂಡಿಗೊದಿಂದ ಪೈಲಟ್ ಸ್ಪಷ್ಟೀಕರಣವನ್ನು ಕೋರಿ ಪತ್ರ ಬರೆದಿದ್ದಾರೆ. ಸಂಬಂಧಿತ ಹೇಳಿಕೆಗಳನ್ನು ಸ್ವೀಕರಿಸಿದ್ದೇವೆ ಮತ್ತು ಆಂತರಿಕ ಸಮಿತಿಯು ಈ ಘಟನೆಗೆ ಸಂಬಂಧಿಸಿದಂತೆ ತನಿಖೆಯನ್ನು ಪ್ರಾರಂಭಿಸಿದೆ" ಎಂದು ಇಂಡಿಗೋ ಪಿಟಿಐಗೆ ತಿಳಿಸಿದೆ.
ಕುನಾಲ್ ಕಮ್ರಾ ಅವರನ್ನು ಇಂಡಿಗೊ ಬುಧವಾರ ಆರು ತಿಂಗಳ ಕಾಲ ನಿಷೇಧಿಸಿತ್ತು. ಇದಾದ ನಂತರ ಏರ್ ಇಂಡಿಯಾ, ಸ್ಪೈಸ್ ಜೆಟ್ ಮತ್ತು ಗೋಏರ್ ಸಹ "ಮುಂದಿನ ಸೂಚನೆ ಬರುವವರೆಗೂ" ಅವರನ್ನು ನಿಷೇಧಿಸಿತು.