Indigo Plane Tail Strike: ಗುರುವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ಇಂಡಿಗೋ ವಿಮಾನ ಲ್ಯಾಂಡಿಂಗ್ ವೇಳೆ ಬಾಲ ಭೂಸ್ಪರ್ಶ ಅನುಭವಿಸಿದೆ. ವಿಮಾನ ಬೆಂಗಳೂರಿನಿಂದ ಅಹಮದಾಬಾದ್‌ಗೆ ಪ್ರಯಾಣ ಬೆಳೆಸಿತ್ತು. ಪ್ರಸ್ತುತ  ಈ ವಿಮಾನವು ಸುರಕ್ಷಿತವಾಗಿ ಇಳಿದಿದ್ದು ಮತ್ತು ಅದನ್ನು ಲ್ಯಾಂಡ್ ಮಾಡಲಾಗಿದೆ ಎಂದು ಘೋಷಿಸಲಾಗಿದೆ. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಇಂಡಿಗೋ ಈ ಬಗ್ಗೆ ವಿವರವಾದ ತನಿಖೆಗೆ ಆದೇಶಿಸಿದೆ.


COMMERCIAL BREAK
SCROLL TO CONTINUE READING

ಬೆಂಗಳೂರಿನಿಂದ ಅಹಮದಾಬಾದ್‌ಗೆ ಹೋಗುತ್ತಿದ್ದ ಇಂಡಿಗೋ 6E6595 ವಿಮಾನವು ಅಹಮದಾಬಾದ್‌ನಲ್ಲಿ ಇಳಿಯುವಾಗ ಬಾಲ ಭೂಸ್ಪರ್ಷಕ್ಕೆ ಗುರಿಯಾಗಿದೆ ಎಂದು ಇಂಡಿಗೋ ಹೇಳಿಕೆ ನೀಡಿದೆ. ಅಗತ್ಯ ಮೌಲ್ಯಮಾಪನ ಮತ್ತು ದುರಸ್ತಿಗಾಗಿ ವಿಮಾನವನ್ನು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಗ್ರೌಂಡ್ ಮಾಡಲಾಗಿದೆ ಎಂದು ನಂತರ ಘೋಷಿಸಲಾಗಿದೆ. ಘಟನೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.


ಇದನ್ನೂ ಓದಿ-Biparjoy Latest News: ಭೂಸ್ಪರ್ಷಕ್ಕೆ ಹತ್ತಿರವಾಗುತ್ತಿದೆ ಮಹಾಚಂಡಮಾರುತ ಬಿಪರ್ಜಾಯ್, ದೃಶ್ಯ ಭಯಹುಟ್ಟಿಸುವಂತಿದೆ!


ದೆಹಲಿ ವಿಮಾನ ನಿಲ್ದಾಣದಲ್ಲೂ ಇಂತಹ ಘಟನೆ ನಡೆದಿದೆ
ಇತ್ತೀಚೆಗಷ್ಟೇ ಇಂಡಿಗೋ ವಿಮಾನದಲ್ಲಿ ಇಂತಹದ್ದೇ ಮತ್ತೊಂದು ಘಟನೆ ನಡೆದಿತ್ತು. ಜೂನ್ 11ರಂದು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಇಂಡಿಗೋ ವಿಮಾನದ ಹಿಂಬದಿ ನೆಲಕ್ಕೆ ಅಪ್ಪಳಿಸಿತ್ತು. ಇದಾದ ಬಳಿಕ ವಿಮಾನ ಸುರಕ್ಷತಾ ನಿಯಂತ್ರಕ ಡಿಜಿಸಿಎ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ. ಈ ಕುರಿತು ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ, ಡಿಜಿಸಿಎ ಆದೇಶದ ಮೇರೆಗೆ ವಿಮಾನಯಾನ ಸಂಸ್ಥೆಯು ಸಿಬ್ಬಂದಿ ಸದಸ್ಯರಿಗೆ ಹಾರಾಟ ನಡೆಸುವುದನ್ನು ನಿರ್ಬಂಧಿಸಿದೆ. ಇಂಡಿಗೋ ಹೇಳಿಕೆಯಲ್ಲಿ ಘಟನೆಯನ್ನು ಖಚಿತಪಡಿಸಿದೆ.


ಇದನ್ನೂ ಓದಿ-Biparjoy Update: ಗುಜರಾತ್ ನಲ್ಲಿ 94,427 ಜನರು ಶಿಫ್ಟ್, 1521 ಹೋಮ್ ಶೇಲ್ಟರ್ ಗಳ ನಿರ್ಮಾಣ


ನೆಲಕ್ಕೆ ಅಪ್ಪಳಿಸಿದ ಬಳಿಕ ವಿಮಾನದ ಹಿಂಭಾಗಕ್ಕೆ ಹಾನಿಗೊಳಗಾಗಿದೆ.
ಜೂನ್ 11 ರಂದು ಇಂಡಿಗೋ ವಿಮಾನ A321 ನಿಯೋ ಕೋಲ್ಕತ್ತಾದಿಂದ ದೆಹಲಿಗೆ 6E-6183 ಫ್ಲೈಟ್ ಅನ್ನು ನಿರ್ವಹಿಸುತ್ತಿತ್ತು ಮತ್ತು ದೆಹಲಿಯಲ್ಲಿ ಇಳಿಯುವಾಗ ಅದರ ಹಿಂಭಾಗ ಬಲವಾಗಿ ನೆಲಕ್ಕೆ ಅಪ್ಪಳಿಸಿತ್ತು. ದೆಹಲಿಯಲ್ಲಿ ಇಳಿಯುವವರೆಗೂ ವಿಮಾನವು ಸಾಮಾನ್ಯವಾಗಿತ್ತು ಎಂದು ಡಿಜಿಸಿಎ ಅಧಿಕಾರಿ ಹೇಳಿದ್ದಾರೆ  ಮತ್ತು ಸಿಬ್ಬಂದಿ, ಅದರ ರನ್‌ವೇ 27 ಅನ್ನು ಸಮೀಪಿಸುತ್ತಿರುವಾಗ, ಅದು ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದೆ ಎಂದು ಅವರು ತಿಳಿದುಕೊಂಡಿದ್ದಾರೆ. ನೆಲಕ್ಕೆ ಅಪ್ಪಳಿಸಿದ್ದರಿಂದ ವಿಮಾನದ ಹಿಂಭಾಗಕ್ಕೆ ಹಾನಿಯಾಗಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.