ನವದೆಹಲಿ: ನೂತನವಾಗಿ ನೇಮಕಗೊಂಡ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವು ಶುಕ್ರವಾರದಂದು ಬೆಳಿಗ್ಗೆ ಸುಪ್ರೀಂ ಕೋರ್ಟ್ ನಲ್ಲಿ  ನಡೆಯಲಿದೆ.


COMMERCIAL BREAK
SCROLL TO CONTINUE READING

ಹಿರಿಯ ವಕೀಲೆ ಇಂಧು ಮಲ್ಹೋತ್ರಾ ಬಾರ್ ನಿಂದ ನೇರವಾಗಿ ಸುಪ್ರೀಂ ಕೋರ್ಟ್ ಗೆ ಆಯ್ಕೆಯಾದ ಮೊದಲ ಮಹಿಳಾ ವಕೀಲರಾಗಿದ್ದಾರೆ.


ಜನವರಿಯಲ್ಲಿ ಸುಪ್ರೀಂಕೋರ್ಟ್ ಕೊಲಿಜಿಯಂ ಪದ್ದತಿಯ ಮೂಲಕ  ಅವರ ಹೆಸರನ್ನು ಶಿಫಾರಸ್ಸು ಮಾಡಿತ್ತು  ಅದಕ್ಕೆ ಬುಧವಾರದಂದು ಕೇಂದ್ರ ಸರ್ಕಾರವು ಅನುಮೋದನೆ ನೀಡಿತ್ತು. 


ಉತ್ತರಾಖಂಡ್ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ರನ್ನು ಕೂಡ ಕೊಲಿಜಿಯಂ ಸುಪ್ರೀಂ ಕೋರ್ಟ್ ಗೆ ಶಿಫಾರಸು ಮಾಡಿತ್ತು, ಆದರೆ ಕೇಂದ್ರ ಸರ್ಕಾರವು ಅದನ್ನು ಮರು ಪರಿಶೀಲಿಸುವಂತೆ ಹೇಳಿದೆ.