Sudha Murthy: ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಸುಧಾ ಮೂರ್ತಿ ಅವರು ತಮ್ಮ ಸರಳತೆ ಮತ್ತು ಸಮಾಜ ಸೇವೆಗೆ ಹೆಸರಾದವರು. ಇತ್ತೀಚೆಗೆ ಸುಧಾ ಮೂರ್ತಿ ಸಂದರ್ಶನವೊಂದರಲ್ಲಿ ಒಂದು ಮಾತು ಹೇಳಿದ್ದಾರೆ. ಇದೀಗ ಆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಸುಧಾ ಮೂರ್ತಿ ಕಳೆದ 30 ವರ್ಷಗಳಿಂದ ಸೀರೆ ಖರೀದಿಸಿಲ್ಲ. ಇದನ್ನು ಸ್ವತಃ ಅವರೇ ಹೇಳಿದ್ದಾರೆ. ಅಷ್ಟೇ ಅಲ್ಲ, ಅದಕ್ಕೆ ಕಾರಣವೇನು?


ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಧಾ ಮೂರ್ತಿ ಕೇವಲ ಶಿಕ್ಷಣತಜ್ಞೆ ಮತ್ತು ಬರಹಗಾರ್ತಿಯಲ್ಲ. ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆಯೂ ಹೌದು.. ಅಲ್ಲದೇ 150 ಕ್ಕೂ ಹೆಚ್ಚು ಪ್ರಕಟಿತ ಪುಸ್ತಕಗಳ ಲೇಖಕಿ ಸುಧಾ ಮೂರ್ತಿ ಅವರು ಅನೇಕ ಹೆಣ್ಣುಮಕ್ಕಳನ್ನು ಎಂಜಿನಿಯರಿಂಗ್‌ನಲ್ಲಿ ಉತ್ತಮ ಸಾಧನೆ ಮಾಡಲು ಪ್ರೇರೇಪಿಸಿದ್ದಾರೆ. ಅವರು ಮಾಹಿತಿ ಮತ್ತು ತಂತ್ರಜ್ಞಾನದ ದೈತ್ಯ ಇನ್ಫೋಸಿಸ್‌ನ ಸಹವರ್ತಿಯಾಗಿದ್ದರೂ, ಸಾಮಾಜಿಕ ಸೇವೆಯಲ್ಲಿ, ಬರಹಗಾರರಾಗಿ ಅವರ ಸಾಧನೆಗಳು ಅಪ್ರತಿಮವಾಗಿವೆ.


ಇದನ್ನೂ ಓದಿ-ಧೋನಿ ಹುಟ್ಟುಹಬ್ಬದ ಆಚರಣೆಯಲ್ಲಿ ಸ್ಟಾರ್‌ ನಟ ಹಾಜರ್‌..!


ಹಣವೇ ಸರ್ವಸ್ವವಲ್ಲ, ಆದರ್ಶ, ಸರಳತೆ, ಸಹಾಯ ಜೀವನದಲ್ಲಿ ಶಾಶ್ವತ ಎಂದು ನಂಬಿದವರು ಸುಧಾಮೂರ್ತಿ. ಈ ಸರಳತೆಯಿಂದಾಗಿಯೇ ಇಂದಿಗೂ ಜನ ಸುಧಾ ಮೂರ್ತಿ ಅವರನ್ನು ವಿಶೇಷವಾಗಿ ಚರ್ಚಿಸುತ್ತಾರೆ.


ಇನ್ನು ಸುಧಾ ಮೂರ್ತಿ ಅವರಿಗೆ ಶಾಪಿಂಗ್ ಎಂದರೆ ತುಂಬಾ ಇಷ್ಟ. ನಾನು ಸೀರೆಯನ್ನು ಪ್ರೀತಿಸುತ್ತೇನೆ. ಆದರೆ ಈಗ ಸೀರೆ ಕೊಳ್ಳದೇ ಸುಮಾರು 3 ದಶಕ ಕಳೆದಿದೆ ಅಂದರೆ 30 ವರ್ಷ ಕಳೆದಿದೆ ಎಂದು ಇತ್ತೀಚೆಗೆ ಅವರೇ ಹೇಳಿಕೊಂಡಿದ್ದರು.. ಕೋಟಿಗಟ್ಟಲೆ ಆಸ್ತಿ ಹೊಂದಿದ್ದರೂ ಸುಧಾ ಮೂರ್ತಿ ಸದ್ಯ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ. ಸುಧಾ ಮೂರ್ತಿ ಅವರಿಗೆ ಸನಾತನ ಧರ್ಮದಲ್ಲಿ ಹೆಚ್ಚು ನಂಬಿಕೆ. ಇಂದಿಗೂ ಸುಧಾ ಮೂರ್ತಿ ಸೀರೆ ಕೊಳ್ಳದಿರಲು ಈ ನಂಬಿಕೆಯೇ ಕಾರಣ. 


ಸುಧಾ ಮೂರ್ತಿ ಒಮ್ಮೆ ಪವಿತ್ರ ಕಾಶಿಗೆ ಭೇಟಿ ನೀಡಿದ್ದರು. ನಂಬಿಕೆಗಳ ಪ್ರಕಾರ, ಅಲ್ಲಿಗೆ ಹೋಗುವವರು ನೆಚ್ಚಿನ ವಸ್ತುವನ್ನು ಬಿಟ್ಟು ಹೋಗಬೇಕು. ಹಾಗೆಯೇ ಸುಧಾ ಮೂರ್ತಿ ಅವರಿಗೆ ಸೀರೆ ಎಂದರೆ ಇಷ್ಟ. ಇವತ್ತಿಗೂ ಸುಧಾ ಮೂರ್ತಿ ಸೀರೆ ಖರೀದಿ ಮಾಡಿಲ್ಲವಂತೆ..


ಇದನ್ನೂ ಓದಿ-ನೀತಾ ಅಂಬಾನಿ ತೊಡುವ ಬಟ್ಟೆ, ಪರ್ಸ್ ಖರೀದಿಸೋದು ಇದೇ ಅಂಗಡಿಯಲ್ಲಂತೆ.!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.