ನವದೆಹಲಿ: ವಿಕಾಸ್ ದುಬೆ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಹತ್ವದ ಹೇಳಿಕೆಯೊಂದನ್ನು ನೀಡಿದೆ. ಎನ್ಕೌಂಟರ್ ಬಗ್ಗೆ ತನಿಖೆ ನಡೆಸಲು ರಚಿಸಲಾದ ಆಯೋಗದ ಸದಸ್ಯರ ಹೆಸರನ್ನು ಉತ್ತರ ಪ್ರದೇಶ ಸರ್ಕಾರ ಸರ್ವೋಚ್ಛ ನ್ಯಾಯಾಲಯಕ್ಕೆ ಹಸ್ತಾಂತರಿಸಿದೆ. ಈ ವಿಚಾರಣಾ ಆಯೋಗದಲ್ಲಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಬಿ.ಎಲ್.ಚೌಹಾನ್ ಮತ್ತು ಯು.ಪಿ.ಯ ಮಾಜಿ ಡಿಜಿ ಕೆ.ಎಲ್.ಗುಪ್ತಾ ಅವರ ಹೆಸರನ್ನು ಪ್ರಸ್ತಾಪಿಸಲಾಗಿದೆ.


COMMERCIAL BREAK
SCROLL TO CONTINUE READING

ಆಯೋಗವು ಒಂದು ವಾರದೊಳಗೆ ಕೆಲಸ ಪ್ರಾರಂಭಿಸಬೇಕು ಮತ್ತು ಎರಡು ತಿಂಗಳಲ್ಲಿ ಯುಪಿ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆಯೋಗದ ಕಚೇರಿ ಕಾನ್ಪುರನಲ್ಲಿ ಇರಲಿದ್ದು, ಈ ಕಚೇರಿಗೆ ಸಿಬ್ಬಂದಿ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡಬೇಕು ಹೊರತು ಉತ್ತರ ಪ್ರದೇಶ ಸರ್ಕಾರವಲ್ಲ ಎಂದು ನ್ಯಾಯಾಲಯ ಹೇಳಿದೆ.


ವಿಚಾರಣೆಯ ವೇಳೆ, ಯುಪಿ ಸರ್ಕಾರ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅಲಹಾಬಾದ್‌ನಲ್ಲಿ ಮೂಲದ ಮಾಜಿ SC ನ್ಯಾಯಮೂರ್ತಿ ಬಿ.ಎಸ್. ಚೌಹಾಣ್ ಅವರನ್ನು ಸಮಿತಿಗೆ ಸೇರಲು ಕೋರಲಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಇದಕ್ಕೆ ಅವರು ಸಹಮತಿ ಕೂಡ ಸೂಚಿಸಿದ್ದಾರೆ ಎಂದಿದ್ದಾರೆ. ಯುಪಿ ಸರ್ಕಾರ ಮಾಜಿ ಡಿಜಿಪಿ ಕೆ.ಎಲ್ ಗುಪ್ತಾ ಅವರ ಹೆಸರನ್ನು ಸಹ ಪ್ರಸ್ತಾಪಿಸಲಾಗಿದೆ.


"ವಿಕಾಸ್ ದುಬೆ ಅವರ ಎನ್ಕೌಂಟರ್ ಸೇರಿದಂತೆ ಸಮಿತಿ ಇಡೀ ಪ್ರಕರಣವನ್ನೇ ಪರಿಶೀಲಿಸಲಿದೆ. ದುಬೆಗೆ ಯಾರು ಪ್ರೋತ್ಸಾಹ ನೀಡಿದ್ದರು ಎಂಬುದನ್ನೂ ಸಹ ಸಮೀತಿ ಪರಿಶೀಲಿಸಬಹುದು" ಎಂದು ಮೆಹ್ತಾ ನ್ಯಾಯಪೀಠಕ್ಕೆ ಹೇಳಿದ್ದಾರೆ. ಈ ಸಂದರ್ಭದಲ್ಲಿ "ಹಲವು ಗಂಭೀರ ಪ್ರಕರಣಗಳ ಹಿನ್ನೆಲೆ ಇದ್ದರೂ ಕೂಡ ವಿಕಾಸ್ ದುಬೆ ಜೈಲಿನಿಂದ ಹೇಗೆ ಹೊರಗುಳಿದಿದ್ದ ಎಂಬುದು ಇಲ್ಲಿ ಅತ್ಯಂತ ಮಹತ್ವದ ಅಂಶವಾಗಿದೆ" ಎಂದಿದ್ದಾರೆ.


ವಿಚಾರಣೆಯ ವೇಳೆ ಅರ್ಜಿದಾರರು ಆಯೋಗದ ಸದಸ್ಯರ ಹೆಸರನ್ನು ಯುಪಿ ಸರ್ಕಾರ ನಿರ್ಧರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸಿಜೆಐ ನಾನು ನ್ಯಾಯಮೂರ್ತಿ ಚೌಹಾನ್ ಅವರೊಂದಿಗೆ ಕೆಲಸ ಮಾಡಿದ್ದೇನೆ. ಬಹುಶಃ ತಾವೂ ಕೂಡ ಅವರ  ಹೆಸರನ್ನೇ ಸೂಚಿಸುತ್ತಿರುವುದಾಗಿ ಹೇಳಿದ್ದಾರೆ. ಆಯೋಗದ ಕಚೇರಿಯನ್ನು ದೆಹಲಿಯಲ್ಲಿ ಇರಿಸಬೇಕೆಂಬ ಬೇಡಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಆಯೋಗವು ಕಾನ್ಪುರದಿಂದ ಕೆಲಸ ಮಾಡುತ್ತದೆ. ಆಯೋಗಕ್ಕೆ ಕೇಂದ್ರ ಸರ್ಕಾರ ಸಿಬ್ಬಂದಿಗಳನ್ನು ಒದಗಿಸುತ್ತಿದ್ದು, ರಾಜ್ಯ ಸರ್ಕಾರ ಸಿಬ್ಬಂದಿ ಒದಗಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.