ನವದೆಹಲಿ: ಬುಲಂದ್ ಶಹರ್ ಹಿಂಸಾಚಾರದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಮೃತಪಟ್ಟಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಘಟನೆಯನ್ನು ಅವರು ಆಕಸ್ಮಿಕ ಎಂದು ಕರೆದಿದ್ದಾರೆ.ಅಲ್ಲದೆ ಈ ಘಟನೆಯಲ್ಲಿ ಯಾರೇ ಭಾಗಿಯಾಗಿದ್ದರು ಸಹಿತ ಅಂತವರ ಮೇಲೆ ಶಿಸ್ತು ಕ್ರಮ ತಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಅಲ್ಲದೆ ಈ ಘಟನೆ ಜನ ಸಮೂಹ ಹತ್ಯೆಗೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದರು.


COMMERCIAL BREAK
SCROLL TO CONTINUE READING

ಶುಕ್ರವಾರದಂದು ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಸಿಎಂ ಯೋಗಿ ಆದಿತ್ಯನಾಥ್  ತಿಳಿಸಿದ್ದಾರೆ.ಅವರ ಹೇಳಿಕೆಗೂ ಮೊದಲು ಇನ್ಸ್ಪೆಕ್ಟರ್ ಕುಟುಂಬವು ಸಿಎಂ ಅವರನ್ನು ಅವರ ಲಕ್ನೋ ನಿವಾಸದಲ್ಲಿ ಭೇಟಿಯಾಗಿತ್ತು. ಆ ಸಂದರ್ಭದಲ್ಲಿ ಸಿಎಂ ಇನ್ಸ್ಪೆಕ್ಟರ್ ಪತ್ನಿಗೆ 40 ಲಕ್ಷ ,10 ಲಕ್ಷ ರೂ ಪೋಷಕರಿಗೆ ಹಾಗೂ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿಯನ್ನು ನೀಡುವುದಾಗಿ ಹೇಳಿದ್ದಾರೆ.


ಬಲಂದ್ ಶಹರ್ ಹಿಂಸಾಚಾರದಲ್ಲಿ ಮೃತಪಟ್ಟಿರುವ ಇನ್ಸ್ಪೆಕ್ಟರ್ 2015ರ ಅಖ್ಲಾಕ್ ಹತ್ಯೆ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.ಇಲ್ಲಿಯವರೆಗೆ ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಟ್ಟು ಒಂಬತ್ತು ಜನರನ್ನು ಬಂಧಿಸಲಾಗಿದೆ.ಡಿಸೆಂಬರ್ 3 ರಂದು ಬುಲಂದ್ ಶಹರ್ ಜಿಲ್ಲೆಯ ಸಿಯಾನಾ ಪ್ರದೇಶ ಅರಣ್ಯವೊಂದರಲ್ಲಿ ಗೋವನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಪೊಲೀಸರೊಂದಿಗೆ ಘರ್ಷಣೆಗೆ ಇಳಿದಿದ್ದರು. ಇಂತಹ ಸಂದರ್ಭದಲ್ಲಿ ಅವರು ಪೋಲಿಸರ ಮೇಲೆ ಕಲ್ಲು ತೂರಾಟ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಿದ್ದರು.ಈ ಹಿಂಸಾಚಾರದಲ್ಲಿ ಇನ್ಸ್ಪೆಕ್ಟರ್ ರೊಬ್ಬರು ಮೃತಪಟ್ಟಿದ್ದರು.