ನವದೆಹಲಿ: ಸಮುದದಲ್ಲಿ ಫೋಟೊ ಶೂಟ್'ಗೆ ಮುಂದಾಗಿದ್ದ ಇನ್ಸ್ಟಾಗ್ರಾಂ ಮಾಡೆಲ್ ಕತರಿನಾ ಜರುತ್ಸಕಿ ಎಂಬಾಕೆಗೆ ಶಾರ್ಕೊಂದು ದಾಳಿ ಮಾಡಿದ ಆತಂಕಕಾರಿ ಘಟನೆ ಇತ್ತೀಚೆಗೆ ನಡೆದಿದೆ. 19 ವರ್ಷ ವಯಸ್ಸಿನ ಈ ಮಾಡೆಲ್ ಬಹಮಾಸ್ ಬೀಚ್'ನಲ್ಲಿ ತನ್ನ ಸುಂದರವಾದ ಫೋಟೋಗಾಗಿ ಈಜುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. 


COMMERCIAL BREAK
SCROLL TO CONTINUE READING

ಎನ್ಬಿಸಿ ನ್ಯೂಸ್ ವರದಿ ಪ್ರಕಾರ, ನರ್ಸಿನ್ ವಿದ್ಯಾರ್ಥಿಯಾದ ಕತರಿನಾ ಜರುತ್ಸಕಿ ಬಹಮಾಸ್'ನ ಸ್ಟಾನಿಯಲ್ ಕೇ ನಲ್ಲಿ ಈಜುತ್ತಿದ್ದಾಗ ಶಾರ್ಕ್ ದಾಳಿ ನಡೆಸಿ ಆಕೆಯ ಒಂದು ಕೈಯನ್ನು ಕಚ್ಚಿದೆ. ಈ ಘಟನೆಯನ್ನು ಆಕೆಯ ಗೆಳೆಯನ ತಂದೆ ಫೋಟೊ ತೆಗೆದಿದ್ದಾರೆ. 


"ನಾನು ಈಜುತ್ತಿದ್ದಾಗ ಶಾರ್ಕ್ ಬಂದು ನನ್ನ ಕೈಯನ್ನು ಕಚ್ಚಿ, ಒಂದು ಕ್ಷಣ ನೀರಿನೊಳಗೆ ಎಲೆದುಕೊಂಡಿತು. ಆದರೆ ಆದಷ್ಟು ಕೂಡಲೇ ನಾನು ಅದರ ಬಾಯಿಂದ ಕೈ ಎಳೆದುಕೊಂಡು ತಪ್ಪಿಸಿಕೊಂಡೆ" ಎಂದು ಕತರಿನಾ ಎನ್ಬಿಸಿ ನ್ಯೂಸ್'ಗೆ ಹೇಳಿದ್ದಾರೆ. 5-ಅಡಿ ಉದ್ದದ ಶಾರ್ಕ್ ಆಕೆಯ ಕೈ ಕಚ್ಚಿಕೊಂಡಿರುವ ಚಿತ್ರಗಳನ್ನು ಅವರು ಇನ್ಸ್ಟಾಗ್ರಾಂ'ನಲ್ಲಿ ಪೋಸ್ಟ್ ಮಾಡಿದ್ದು, ಸದ್ಯ ಆ ಚಿತ್ರಗಳು ಅಂತರ್ಜಾಲದಲ್ಲಿ ಸಾಕಷ್ಟು ವೈರಲ್ ಆಗಿದೆ.