ನವದೆಹಲಿ: ಕೇಂದ್ರ ಸರ್ಕಾರ ಇದೀಗ ಪ್ಯಾನ್ ಕಾರ್ಡ್‌ಗಳನ್ನು ಪಡೆಯುವ ನಿಯಮಗಳನ್ನು ಸರಳೀಕರಿಸಿದೆ. ಹೀಗಾಗಿ ಇನ್ಮುಂದೆ ನೀವು ಕೇವಲ ಒಂದೇ ಕ್ಲಿಕ್‌ನಲ್ಲಿ ಪ್ಯಾನ್ ಕಾರ್ಡ್ ಪಡೆಯಬಹುದು. ಗುರುವಾರ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಸೌಲಭ್ಯವನ್ನು ಔಪಚಾರಿಕವಾಗಿ ಬಿಡುಗಡೆಗೊಳಿಸಿದ್ದಾರೆ. ಹೀಗಾಗಿ ಇನ್ಮುಂದೆ ಪ್ಯಾನ್ ಸಂಖ್ಯೆಯನ್ನು ಪಡೆಯಲು, ಕೇವಲ ನಿಮ್ಮ ಆಧಾರ್ ಕಾರ್ಡ್  ಮಾತ್ರ ಅಗತ್ಯವಿರುತ್ತದೆ ಮತ್ತು ಕೇವಲ ನಿಮಿಷಗಳಲ್ಲಿ ನಿಮ್ಮ ಪ್ಯಾನ್ ಕಾರ್ಡ್ ನಿಮ್ಮ ಬಳಿ ಇರಲಿದೆ.


COMMERCIAL BREAK
SCROLL TO CONTINUE READING

ಹೀಗಾಗಿ ಇನ್ಮುಂದೆ ಪ್ಯಾನ್ ಕಾರ್ಡ್ ಪಡೆಯಲು ನೀವು ಯಾವುದೇ ಕಚೇರಿಯ ಚಕ್ಕರ್ ಹೊಡೆಯುವ ಅವಶ್ಯಕತೆ ಇಲ್ಲ ಹಾಗೂ ದೊಡ್ಡ ದೊಡ್ಡ ಅರ್ಜಿ ಸಲ್ಲಿಸುವ ಅವಶ್ಯಕತೆ ಕೂಡ ಇಲ್ಲ. ಏಕೆಂದರೆ ಇನ್ದಿಂದಿಂದ ಪ್ಯಾನ್ ಕಾರ್ಡ್ ಪಡೆಯುವುದು ತುಂಬಾ ಸುಲಭವಾಗಿದ್ದು, ಕೇವಲ ಹತ್ತೇ ನಿಮಿಷಗಳಲ್ಲಿ ಒಂದು ರೂಪಾಯಿ ಕೂಡ ಖರ್ಚು ಮಾಡದೆ ನೀವು ನಿಮ್ಮ ಪ್ಯಾನ್ ಕಾರ್ಡ್ ಅನ್ನು ಪಡೆಯಬಹುದು. ಇದಕ್ಕಾಗಿ ಆದಾಯ ತೆರಿಗೆ ಇಲಾಖೆ e-PAN ತತ್ಕಾಲ್ ಜಾರಿಗೊಳಿಸಲು ಸಿಸ್ಟಮ್ ಆರಂಭಿಸಿದೆ. ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ಇದರ ಲಾಭ ಪಡೆಯಬಹುದು.


ಈ ಕುರಿತು ವರ್ಷ 2020-21ರ ಬಜೆಟ್ ಭಾಷಣದಲ್ಲಿ ಘೋಷಣೆ ಮಾಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ತತ್ಕಾಲ್ ಪ್ಯಾನ್ ಕಾರ್ಡ್ ವಿತರಿಸುವ ಸೇವೆ ಆರಂಭಿಸಲಾಗುವುದು ಎಂದು ಹೇಳಿದ್ದರು . ಈ ಸೌಲಭ್ಯದ ಪ್ರಕಾರ ಯಾವ ವ್ಯಕ್ತಿಯ ಆಧಾರ್ ಸಂಖ್ಯೆ ಮೊಬೈಲ್ ನಂಬರ್ ಜೊತೆಗೆ ಲಿಂಕ್ ಆಗಿದೆಯೋ ಅವರು ಆದಾಯ ತೆರಿಗೆ ಇಲಾಖೆಯ ವೆಬ್ ಸೈಟ್ ಘೆ ಭೇಟಿ ನೆಇದ್ e-PANಗೆ ಅರ್ಜಿ ಸಲ್ಲಿಸಬಹುದು ಎನ್ನಲಾಗಿದೆ. ಬಳಿಕ ನಿಮಗೆ ಶೀಘ್ರದಲ್ಲಿಯೇ ನಿಮ್ಮ ಪ್ಯಾನ್ ನಂಬರ್ ಹಂಚಿಕೆಯಾಗಲಿದೆ. ಈ ಹಂಚಿಕೆ ರಿಯಲ್ ಟೈಮ್ ಆಧರಿಸಿ ಇರಲಿದೆ.


ಆಧಾರ್ ಕಾರ್ಡ್ ಅನಿವಾರ್ಯ
ಇ-ಪ್ಯಾನ್ ಪಡೆಯಲು, ನೀವು ಆಧಾರ್ ಸಂಖ್ಯೆಯನ್ನು ಮಾತ್ರ ಒದಗಿಸಬೇಕು. ಅದರ ನಂತರ ನೀವು ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಈ ಪ್ರಕ್ರಿಯೆಯನ್ನು ಮಾಡಿದ ನಂತರ, ಅರ್ಜಿದಾರರಿಗೆ ಕೇವಲ 10 ನಿಮಿಷಗಳಲ್ಲಿ ಪಿಡಿಎಫ್ ರೂಪದಲ್ಲಿ ಪ್ಯಾನ್ ಕಾರ್ಡ್ ನೀಡಲಾಗುತ್ತದೆ.


ಇ-ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?
- ಮೊದಲನೆಯದಾಗಿ, ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ incometaxindiaefiling.gov.in ಗೆ ಭೇಟಿ ನೀಡಿ 
- ಇಲ್ಲಿ ಆಧಾರ್ ವಿಭಾಗದ ಮೂಲಕ ತತ್ಕಾಲ್ ಪ್ಯಾನ್ ಮೇಲೆ ಕ್ಲಿಕ್ ಮಾಡಿ.
- ಹೊಸ ಪುಟ ತೆರೆಯುತ್ತದೆ, ಇಲ್ಲಿ ನೀವು "Get New PAN" ಮೇಲೆ ಕ್ಲಿಕ್ ಮಾಡಬೇಕು.
- ಮತ್ತೊಂದು ಹೊಸ ಪುಟ ತೆರೆಯುತ್ತದೆ. ಆಧಾರ್ ವಿವರಗಳನ್ನು ಇಲ್ಲಿ ಭರ್ತಿ ಮಾಡಬೇಕಾಗುತ್ತದೆ.
- ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕಾಗಿದೆ.
- ಅದರ ನಂತರ ಒಟಿಪಿ ರಚಿಸಿ. ಒಟಿಪಿ ನಮೂದಿಸಬೇಕಾಗಿದೆ.
- ಆಧಾರ್ ವಿವರಗಳನ್ನು ದೃಢಪಡಿಸಿ.
- ಪ್ಯಾನ್ ಕಾರ್ಡ್‌ಗಾಗಿ ಇಮೇಲ್ ಐಡಿ ನಮೂದಿಸಿ. ಆಧಾರ್ ಇ-ಕೆವೈಸಿ ಡೇಟಾವನ್ನು ಇ-ಪ್ಯಾನ್‌ಗೆ ವರ್ಗಾಯಿಸಲಾಗುತ್ತದೆ.
- ಈ ಸಂಪೂರ್ಣ ಪ್ರಕ್ರಿಯೆಯನ್ನು ಮಾಡಲು ನಿಮಗೆ ಕೇವಲ 10 ನಿಮಿಷಗಳು ಬೇಕಾಗುತ್ತದೆ.
- ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಇ-ಪ್ಯಾನ್ ಪಿಡಿಎಫ್ ರೂಪದಲ್ಲಿ ಕಂಡುಬರುತ್ತದೆ. ಅದನ್ನು ಡೌನ್‌ಲೋಡ್ ಮಾಡಲು ಆಧಾರ್ ಸಂಖ್ಯೆಯನ್ನು ನಮೂದಿಸಬೇಕು.ಇದನ್ನು ನೀವು ಇ-ಮೇಲ್ ಮೂಲಕ ಕೂಡ ಪಡೆಯಬಹುದು.