ಆಗಸ್ಟ್ 15 ರಂದು ಕೆಂಪು ಕೋಟೆಯಲ್ಲಿ ನಡೆಯಲಿರುವ ಕಾರ್ಯಕ್ರಮದ ಬಗ್ಗೆ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಪಾಕಿಸ್ತಾನದ ಗಡಿ ಪಂಜಾಬ್ ನಿಂದ ಡ್ರೋನ್‌ಗಳ ಮೂಲಕ ಬಹಳಷ್ಟು ಐಇಡಿಗಳು ಭಾರತದ ವಿವಿಧ ನಗರಗಳನ್ನು ತಲುಪಿವೆ ಎಂದು ಏಜೆನ್ಸಿಗಳು ಇನ್‌ಪುಟ್ ಮಾಹಿತಿ ನೀಡಿವೆ. ಇತ್ತೀಚೆಗೆ, ಪಂಜಾಬ್ ಮತ್ತು ವಿವಿಧ ರಾಜ್ಯಗಳಲ್ಲಿ ಬಂಧಿತ ಭಯೋತ್ಪಾದಕರು ವಿಚಾರಣೆಯ ಸಮಯದಲ್ಲಿ ಸಾಕಷ್ಟು ಐಇಡಿಗಳನ್ನು ಡ್ರೋನ್‌ಗಳ ಮೂಲಕ ಭಾರತಕ್ಕೆ ರವಾನಿಸಲಾಗಿತ್ತು ಎಂದು ಹೇಳಿಕೆ ನೀಡಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Independence Day 2022 : ದೆಹಲಿಯ ಕೆಂಪು ಕೋಟೆ ಬಳಿ 'ಸ್ವಾತಂತ್ರ್ಯ ದಿನಾಚರಣೆ'ಯ ತಯಾರಿ ಹೇಗಿದೆ ನೋಡಿ!


ಗುಪ್ತಚರ ಸಂಸ್ಥೆಗಳು ಎಚ್ಚರಿಕೆಯನ್ನು ನೀಡಿದ್ದು, ಪಾಕಿಸ್ತಾನದಿಂದ ಡ್ರೋನ್‌ಗಳ ಮೂಲಕ ಪಿಸ್ತೂಲ್, ಹ್ಯಾಂಡ್ ಗ್ರೆನೇಡ್ ಮತ್ತು ಎಕೆ 47 ನಂತಹ ಶಸ್ತ್ರಾಸ್ತ್ರಗಳು ಸೇರಿದಂತೆ ಮಾರಕ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಕಳುಹಿಸಲಾಗಿದೆ ಎಂದು ಭದ್ರತಾ ಸಂಸ್ಥೆಗಳಿಗೆ ತಿಳಿಸಿವೆ. ಕೆಲವು ಶಸ್ತ್ರಾಸ್ತ್ರಗಳನ್ನು ಬಿಎಸ್‌ಎಫ್ ಪತ್ತೆಹಚ್ಚಿದೆ. ಆದರೆ ಇದರ ಹೊರತಾಗಿಯೂ, ಅನೇಕ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.


ಆಗಸ್ಟ್ 15 ರಂದು ದೇಶದ ಹಲವೆಡೆ ಉಗ್ರರು ದಾಳಿ ನಡೆಸಬಹುದು ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.


ಬದಲಾಗುತ್ತಿರುವ ಕಾಲದಲ್ಲಿ, ಉಗ್ರರು ಕೆಂಪು ಕೋಟೆಯ ಮೇಲೆ ದಾಳಿ ಮಾಡಲು ಗಾಳಿಪಟದಂತಹ ಹಾರುವ ವಸ್ತುವನ್ನು ಬಳಸಬಹುದು. ಹೀಗಾಗಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಸಂಪೂರ್ಣ ನಿಷೇಧ ಹೇರುವ ಮೂಲಕ ಕೆಂಪುಕೋಟೆ ಸುತ್ತಮುತ್ತ ಗಾಳಿಪಟಗಳ ಮೇಲೆ ನಿಗಾ ಇಡುವಂತೆ ಆದೇಶ ಹೊರಡಿಸಲಾಗಿದೆ. 


ಇದನ್ನೂ ಓದಿ: ಆಂಧ್ರದಲ್ಲಿ ಹೆಚ್ಚಾಗುತ್ತಿರುವ ತಾಯಿ-ಮಗು ಮರಣ ಪ್ರಮಾಣ: ನಿಯಂತ್ರಣಕ್ಕೆ ತರು NRI ವೈದ್ಯರ ಪ್ಲ್ಯಾನ್


ಸ್ವಾತಂತ್ರ್ಯೋತ್ಸವ ಪರೇಡ್ ವೀಕ್ಷಿಸಲು ಆಗಮಿಸುವ ಜನರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಕ್ರೀನಿಂಗ್ ತುಂಬಾ ಬಲವಾಗಿರಬೇಕು. ಎಸ್‌ಎಫ್‌ಜೆ, ಜೈಶ್-ಎ-ಮೊಹಮ್ಮದ್, ಐಎಸ್‌ಐಎಸ್ ಖೊರಾಸನ್ ಮಾಡ್ಯೂಲ್ ಹೆಸರಿನ ಭಯೋತ್ಪಾದಕ ಸಂಘಟನೆಗಳು ಆಗಸ್ಟ್ 15 ರಂದು ದೊಡ್ಡ ದಾಳಿ ನಡೆಸಲು ಯೋಜನೆ ರೂಪಿಸಿವೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.