ನಾಗಪುರ: ಭಾರತದ ಮಾಜಿ ರಾಷ್ಟ್ರಪತಿ ಇಲ್ಲಿನ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಸಹಿಷ್ಣುತೆಯು ಭಾರತದ ಅಸ್ಮಿತೆಯನ್ನು ವಿನಾಶಗೊಳಿಸುತ್ತದೆ ಎಂದು ತಿಳಿಸಿದರು.


COMMERCIAL BREAK
SCROLL TO CONTINUE READING

ಪ್ರಣಬ್ ಮುಖರ್ಜೀ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರ ಕುರಿತಾಗಿ ಮಾತನಾಡುತ್ತಾ" ಭಾರತದಲ್ಲಿನ  ರಾಷ್ಟ್ರ, ರಾಷ್ಟ್ರೀಯತೆ ಮತ್ತು ದೇಶಭಕ್ತಿಗಳ ಪರಿಕಲ್ಪನೆಗಳ ನನ್ನ ತಿಳುವಳಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ.. ನಮ್ಮ ರಾಷ್ಟ್ರದ ಪರಿ ಕಲ್ಪನೆಯನ್ನು ಯಾವುದೇ  ನಿರ್ಧಿಷ್ಟ ಧರ್ಮ, ಪ್ರದೇಶ, ದ್ವೇಷ ಮತ್ತು ಅಸಹಿಷ್ಣುತೆಗಳ ಮೂಲಕ ವ್ಯಾಖ್ಯಾನಿಸುತ್ತಾ ಸಾಗಿದರೆ  ಅದು ನಮ್ಮ ಅಸ್ಮಿತೆಯನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.



ಇನ್ನು ಮುಂದುವರೆದು "ಭಾರತದಲ್ಲಿ, ನಮ್ಮ ಶಕ್ತಿ ಅಡಗಿರುವುದು ಸಹಿಷ್ಣುತೆಯಲ್ಲಿ, ನಾವು ನಮ್ಮ ಬಹುತ್ವವನ್ನು ಗೌರವಿಸುತ್ತೇವೆ. ನಮ್ಮ ವೈವಿಧ್ಯತೆಯನ್ನು ಆಚರಿಸುತ್ತೇವೆ. ಆದ್ದರಿಂದ  ನಾವು ಎಲ್ಲಾ ರೀತಿಯ ಭಯ ಮತ್ತು ಹಿಂಸೆಯನ್ನು ನಮ್ಮ ಸಾರ್ವಜನಿಕವಾಗಿ ಮುಕ್ತಗೊಳಿಸಬೇಕು. ಗಾಂಧಿಜಿಯವರು ಹೇಳುವಂತೆ ಭಾರತದ ರಾಷ್ಟ್ರೀಯತೆ  ಹೊರಗೊಳ್ಳುವಂತದ್ದಲ್ಲ ಅಥವಾ ಆಕ್ರಮಣಕಾರಿ ಅಥವಾವಿನಾಶಕಾರಿಯು ಅಲ್ಲ" ಎಂದು  ಮುಖರ್ಜೀ ಅಭಿಪ್ರಾಯಪಟ್ಟರು.  



ಇದೇ ವೇಳೆ ಸಂವಿಧಾನದ ಪ್ರಾಮುಖ್ಯತೆಯನ್ನು ಕೊಂಡಾಡಿದ ಅವರು " ನಮಗೆ ಪ್ರಜಾಪ್ರಭುತ್ವದ ಎನ್ನುವುದು ಕೇವಲ ಉಡುಗೊರೆಯಲ್ಲ ಅದೊಂದು ಪವಿತ್ರ ನಂಬಿಕೆ. ಭಾರತ ಸಂವಿಧಾನ ಎನ್ನುವುದು ಕೇವಲ ಆಡಳಿತ ನಡೆಸುವ ಉಪಕರಣವಲ್ಲ ಬದಲಾಗಿ ಅದೊಂದು ಸಾಮಾಜಿಕ ಪರಿವರ್ತನೆಯನ್ನು ತರುವಂತಹ ಮಾಗ್ನಾ ಕಾರ್ಟಾ: ನಮ್ಮ ರಾಷ್ಟ್ರೀಯತೆಯು ಸಾಗುತ್ತಿರುವುದೇ ನಮ್ಮ ಸಂವಿಧಾನದ ಮೇಲೆ ಅದ್ದರಿಂದ ಅದು ಯಾವಾಗಲು ಸಹಿತ ತಪ್ಪು ತಿದ್ದಿಕೊಳ್ಳುವ ಅವಕಾಶವನ್ನು ನೀಡುತ್ತದೆ" ಎಂದು ಮುಖರ್ಜೀ ತಿಳಿಸಿದರು