ಕೇವಲ 1 ಲಕ್ಷ ರೂ ಬಂಡವಾಳ ಹೂಡಿ ಪ್ರತಿ ತಿಂಗಳು 30 ಸಾವಿರ ರೂ ಆದಾಯ ಗಳಿಸಿ!
ನಗರೀಕರಣ ಮತ್ತು ಉದ್ಯೋಗೀಕರಣದಿಂದಾಗಿ ಪ್ಯಾಕರ್ಸ್ ಮತ್ತು ಮೂವರ್ಸ್ ಗೆ ಸಿಕ್ಕಾಪಟ್ಟೆ ಬೇಡಿಕೆ ಉಂಟಾಗಿದೆ.
ನವದೆಹಲಿ: ಅತಿ ಕಡಿಮೆ ಬಂಡವಾಳ ಹೂಡಿ ಅತಿ ಹೆಚ್ಚು ಆದಾಯ ಗಳಿಸುವ ಆಲೋಚನೆಯಲ್ಲಿ ನೀವಿದ್ದರೆ ಈ ಸುದ್ದಿ ನಿಮಗೆ ನಿಜಕ್ಕೂ ಸಹಾಯವಾಗಲಿದೆ. ಈ ಬಿಸಿನೆಸ್ ಮಾಡಲು ನಿಮ್ಮ ಬಳಿ ಒಂದಷ್ಟು ಜಾಗ ಮತ್ತು ಉತ್ತಮ ಸಂವಹನ ಕೌಶಲ್ಯವಿದ್ದರೆ ಸಾಕು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಈ ಬಿಸಿನೆಸ್ ಆರಂಭಿಸಿ ಕ್ರಮೇಣ ವಿಸ್ತರಿಸಬಹುದು. ಇದರಲ್ಲಿನ ಲಾಭದ ಶೇಕಡಾವಾರು ಸಹಾ ಉತ್ತಮವಾಗಿರುತ್ತದೆ. ಆರಂಭದಲ್ಲಿ, ನೀವು ತಿಂಗಳಿಗೆ 30 ಸಾವಿರ ರೂ.ಗಳಿಸಿದರೆ ಕ್ರಮೇಣ ಆದಾಯದ ಮೊತ್ತವೂ ಹೆಚ್ಚಾಗುತ್ತದೆ. ಈ ವ್ಯವಹಾರವನ್ನು 1 ಲಕ್ಷ ರೂ.ಗಳ ಬಂಡವಾಳ ಹೂಡಿ ಪ್ರಾರಂಭಿಸಬಹುದು.
ನಗರೀಕರಣ ಮತ್ತು ಉದ್ಯೋಗೀಕರಣದಿಂದಾಗಿ ಪ್ಯಾಕರ್ಸ್ ಮತ್ತು ಮೂವರ್ಸ್ ಗೆ ಸಿಕ್ಕಾಪಟ್ಟೆ ಬೇಡಿಕೆ ಉಂಟಾಗಿದೆ. ಯಾರೇ ಆಗಲಿ ತಮ್ಮ ವಸ್ತುಗಳ ಸುರಕ್ಷತೆಗೆ ಹೆಚ್ಚು ಮಹತ್ವ ನೀಡುತ್ತಾರೆ. ಅದಕ್ಕಾಗಿ ಉತ್ತಮ ಪ್ಯಾಕರ್ಸ್ ಮತ್ತು ಮೂವರ್ಸ್ ಗಳನ್ನೂ ಹುಡುಕುತ್ತಾರೆ. ಒಂದು ಕಂಪನಿಯಾಗಲೀ, ಮನೆಯಯನ್ನಾಗಲೀ ಮತ್ತೊಂದೆಡೆ ಶಿಫ್ಟ್ ಮಾಡಬೇಕೆಂದರೆ ಅಲ್ಲಿನ ವಸ್ತುಗಳನ್ನು ಸುರಕ್ಷಿತವಾಗಿ ಸಾಗಿಸುವುದು ಅಗತ್ಯವಾಗಿರುತ್ತದೆ.
ಈ ಬಗ್ಗೆ ಮಾಹಿತಿ ನೀಡಿರುವ ನೋಯ್ಡಾದ ಪ್ಯಾಕಾರ್ಸ್ ಮತ್ತು ಮೂವರ್ಸ್ ಕಂಪನಿಯ ಮಾಲೀಕ ಮನೋಜ್ ಕುಮಾರ್ "ದುಬಾರಿ ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವಾಗ ಯಾವುದೇ ಡ್ಯಾಮೇಜ್ ಆಗದಂತೆ ಕಾಪಾಡಬೇಕಾಗುತ್ತದೆ. ಆದರೆ ಪ್ಯಾಕರ್ಸ್ ಮತ್ತು ಮೂವರ್ಸ್ ಕಂಪನಿಗಳು ಇಂತಹ ಸಾಮಾನುಗಳನ್ನು ಸಾಗಿಸುವ ಮೊದಲೇ ಅವುಗಳಿಗೆ ಇನ್ಸ್ಯೂರೆನ್ಸ್ ಮಾಡಿಸಿ ಸಾಗಿಸುತ್ತವೆ. ಹಾಗಾಗಿ ಗ್ರಾಹಕರೂ ಸಹ ವಸ್ತುಗಳ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ಈ ಬಿಸಿನೆಸ್ ಆರಂಭಿಸುವ ಮೊದಲು ಉತ್ತಮ ಯೋಜನೆ ರೂಪಿಸಿಕೊಳ್ಳಬೇಕು. ಆದರೆ, ನೀವು ಅಲ್ಪ ಪ್ರಮಾಣದಲ್ಲಿ ಆರಂಭಿಸುತ್ತೀರೆಂದಾದರೆ ಹೆಚ್ಚು ಸ್ಥಳದ ಅಗತ್ಯವೂ ಇರುವುದಿಲ್ಲ" ಎಂದಿದ್ದಾರೆ.
- ಈ ಬಿಸಿನೆಸ್ ಅನ್ನು ನೀವು ಒಬ್ಬರೇ ಅಥವಾ ಪಾಲುದಾರಿಕೆಯಲ್ಲಿ ಆರಂಭಿಸಬಹುದು. ಎಲ್ಲಕ್ಕೂ ಮೊದಲು ನಿಮ್ಮ ಬಿಸಿನೆಸ್ ಅನ್ನು ರಿಜಿಸ್ಟರ್ ಮಾಡಿಸಿ.
- ನಂತರ ಕಂಪನಿಯ ಪ್ಯಾನ್ ಕಾರ್ಡ್ ಮಾಡಿಸಿ ಹತ್ತಿರದ ಬ್ಯಾಂಕಿನಲ್ಲಿ ಕರೆಂಟ್ ಅಕೌಂಟ್ ತೆರೆಯಿರಿ.
- ಬಳಿಕ ಎರಡನೇ ಹಂತದಲ್ಲಿ ರಿಜಿಸ್ಟ್ರೇಶನ್ ಪ್ರಕ್ರಿಯೆ ಪೂರ್ಣಗೊಳಿಸಿ ನಿಮ್ಮ ಬಿಸಿನೆಸ್ ಹೆಸರು ಮತ್ತು ಲೋಗೋ ಆಯ್ಕೆ ಮಾಡಿ.
- ನಂತರ ನಿಮ್ಮ ಡೊಮೇನ್ ಹೆಸರು ಸಿದ್ಧಪಡಿಸಿ ವೆಬ್ ಸೈಟ್ ಓಪನ್ ಮಾಡಿ. ಬಳಿಕ MSME ನೋಂದಣಿ ಪಡೆಯಿರಿ.
- ಇದು ಸೇವೆಯ ಆಧಾರಿತ ವ್ಯಾಪಾರವಾಗಿರುವುದರಿಂದ ಸೇವಾ ತೆರಿಗೆಯನ್ನು ನೋಂದಾಯಿಸಿಕೊಳ್ಳಿ. ಹೀಗಾಗಿ ನೀವು GST ಅಡಿಯಲ್ಲಿ ಟ್ಯಾಕ್ಸ್ ಫೈಲ್ ಮಾಡಬಹುದು.
- ಬಳಿಕ ನಿಮ್ಮ ಬಿಸಿನೆಸ್ ಗೆ ಒಂದು ಸಣ್ಣ ಕಚೇರಿಯನ್ನು ಆರಂಭಿಸಿ. ನಿಮ್ಮ ಮನೆಯಲ್ಲೇ ಸ್ಥಳವಿದ್ದರೆ ಅಲ್ಲೇ ಕಚೇರಿ ಆರಂಭಿಸಿ.
- ಇವೆಲ್ಲಾ ಆದ ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಜೊತೆ ಡಿಜಿಟಲ್ ಬಿಸಿನೆಸ್ ವೆಬ್ಸೈಟ್ ಗಳಾದ justdial, Sulekha.com ನಲ್ಲಿ ನೊಂದಾಯಿಸಿಕೊಳ್ಳಿ. ಈ ವೆಬ್ಸೈಟ್ ಗಳಲ್ಲಿ ನೋಂದಣಿ ಮಾಡಿಕೊಳ್ಳುವುದೂ ಸಹ ನಿಮ್ಮ ಬಿಸಿನೆಸ್ ಗೆ ಹೆಚ್ಚು ಉಪಯೋಗವಾಗುತ್ತದೆ.
ಗ್ರಾಹಕರನ್ನು ಪಡೆಯುವುದು ಹೇಗೆ?
ಡಿಜಿಟಲ್ ಬಿಸಿನೆಸ್ ವೆಬ್ಸೈಟ್ ಗಳಲ್ಲಿ ರಿಜಿಸ್ಟರ್ ಮಾಡಿಕೊಳ್ಳಲು ನಿಮಗೆ 3 ರಿಂದ 4 ಸಾವಿರ ರೂ. ಪಾವತಿಸಬೇಕಾಗುತ್ತದೆ. ಯಾರಿಗೆ ಪ್ಯಾಕರ್ಸ್ ಮತ್ತು ಮೂವರ್ಸ್ ಗಳ ಅಗತ್ಯವಿರುತ್ತದೋ ಅವರು ಇಂಟರ್ನೆಟ್ ನಲ್ಲಿ ಸರ್ಚ್ ಮಾಡಿ ಕರೆ ಮಾಡುತ್ತಾರೆ ಅಥವಾ ಅವರ ಅಗತ್ಯತೆಯನ್ನು, ಮಾಹಿತಿಯನ್ನು ಅಲ್ಲಿಯೇ ನಮುದಿಸುತ್ತಾರೆ. ನಂತರ ನೀವು ಗ್ರಾಹಕರ ವಿವರಗಳನ್ನು ಪಡೆದು ಕರೆ ಮಾಡಿ ಅವರೊಂದಿಗೆ ಮಾತುಕತೆ ನಡೆಸಬಹುದು.
ಈ ವಸ್ತುಗಳು ಬಹು ಅಗತ್ಯ
ಈ ಬಿಸಿನೆಸ್ ಆರಂಭಿಸಲು ಹತ್ತಿ, ಪೇಪರ್, ಹಗ್ಗ, ಸೇರಿದಂತೆ ಪ್ಯಾಕಿಂಗ್ ಗೆ ಅಗತ್ಯವಾದ ಅಸ್ತುಗಳ ಸ್ಟಾಕ್ ಹೊಂದಿರಬೇಕು. ಹಾಗೆಯೇ ನೀವು ಸಣ್ಣ ಪ್ರಮಾಣದಲ್ಲಿ ಬಿಸಿನೆಸ್ ಆರಂಭಿಸಿದ್ದರೆ ನಾಲ್ಕು ಚಕ್ರಗಳ ವಾಹನ ಮತ್ತು ದೊಡ್ಡ ಪ್ರಮಾಣದಲ್ಲಿ ಆರಂಭಿಸುತ್ತಿದ್ದರೆ ದೊಡ್ಡ ಸರಕು ಸಾಗಾಣಿಕಾ ವಾಹನದ ಅಗತ್ಯವಿದೆ. ಇದಕ್ಕಾಗಿ ನೀವು ಟ್ರಾನ್ಸ್ ಪೋರ್ಟ್ ಕಂಪನಿಯನ್ನು ಸಂಪರ್ಕಿಸಬಹುದು. ಅವರು ನಿಮ್ಮಿಂದ ಹಣ ಪಡೆದು ವಾಹನ ಅಗತ್ಯತೆ ಪೂರೈಸುತ್ತಾರೆ.