ನವದೆಹಲಿ: ಹಿಂಡೆನ್‌ ಬರ್ಗ್‌ ನ ಸ್ಪೋಟಕ ತನಿಖಾ ವರದಿ ನಂತರ ಅದಾನಿ ಗ್ರೂಪ್ ನ ಶೇರ್ ಗಳು ಪಾತಾಳಕ್ಕೆ ಇಳಿದಿದ್ದು, ಕೇವಲ ಕೆಲವೇ ತಿಂಗಳುಗಳ ಹಿಂದಷ್ಟೇ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದ ಗೌತಮ್ ಅದಾನಿ ಈಗ ಏಕಾಏಕಿ 15ನೇ ಸ್ಥಾನಕ್ಕೆ ಕುಸಿದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Team India : ಟೀಂನಿಂದ ಈ ಆಟಗಾರನನ್ನು ಹೊರಗಿಟ್ಟು ವಿವಾದ ಸೃಷ್ಟಿಸಿದ ಪಾಂಡ್ಯ!


ಈಗ ಹೂಡಿಕೆದಾರರ ವಿಶ್ವಾಸವನ್ನು ಉಳಿಸಿಕೊಳ್ಳಲು ಮುಂದಾಗಿರುವ ಅದಾನಿ ಗ್ರೂಪ್ ಮಾರುಕಟ್ಟೆಯಲ್ಲಿ ಸ್ಟಾಕ್ ಬೆಲೆ ತೀವ್ರವಾಗಿ ಕುಸಿತ ಕಂಡ ನಂತರ ತನ್ನ 20000 ಕೋಟಿ ಫಾಲೋ-ಆನ್‌ ಸಾರ್ವಜನಿಕ ಕೊಡುಗೆಯನ್ನ ಹಿಂತೆಗೆದುಕೊಳ್ಳಲು ಹಾಗೂ ಹೂಡಿಕೆದಾರರಿಗೆ ಹಣವನ್ನು ಹಿಂತಿರುಗಿ ನೀಡುವುದಾಗಿ ಇಂದು ನಡೆದ ಕಂಪನಿಯ ನಿರ್ದೇಶಕರ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಯಿತು.


ಈ ಕುರಿತಾಗಿ ಪ್ರತಿಕ್ರಿಯಿಸಿರುವ ಗೌತಮ್ ಅದಾನಿ "ಇಂದು ಮಾರುಕಟ್ಟೆಯು ಅಭೂತಪೂರ್ವವಾಗಿದೆ ಮತ್ತು ನಮ್ಮ ಸ್ಟಾಕ್ ಬೆಲೆಯು ದಿನದ ಅವಧಿಯಲ್ಲಿ ಏರಿಳಿತಗೊಂಡಿದೆ. ಈ ಅಸಾಧಾರಣ ಸನ್ನಿವೇಶಗಳನ್ನು ಗಮನಿಸಿದರೆ, ಸಮಸ್ಯೆಯನ್ನು ಮುಂದುವರಿಸುವುದು ನೈತಿಕವಾಗಿ ಸರಿಯಾಗಿಲ್ಲ ಎಂದು ಕಂಪನಿಯ ಮಂಡಳಿಯು ಭಾವಿಸಿದೆ, ”ಎಂದು ಹೇಳಿದ್ದಾರೆ.


ಇದನ್ನೂ ಓದಿ: Shubman Gill: ಮತ್ತೆ ‘ದಿಲ್ ಗೆದ್ದ ಗಿಲ್’: ಅಬ್ಬರದ ಬ್ಯಾಟಿಂಗ್-T20Iನಲ್ಲಿ ಮೊದಲ ಶತಕ ಬಾರಿಸಿದ ಶುಭ್ಮನ್


ಅಮೇರಿಕಾ ಮೂಲದ ಸಂಶೋಧನಾ ಸಂಸ್ಥೆಯಾದ ಹಿಂಡೆನ್‌ ಬರ್ಗ್‌ ನ ಇತ್ತೀಚ್ಚಿನ ವರದಿಯ ಪ್ರಕಾರ ಸ್ಟಾಕ್‌ ಬೆಲೆ ಮತ್ತು ಪ್ರಶ್ನಾರ್ಹ ಲೆಕ್ಕಪತ್ರ ಆರೋಪದ ಪ್ರಭಾವದಿಂದ ಕಂಪನಿಯು ಹೂಡಿಕೆ ಹಿಂತೆಗೆತದ ಜೊತೆಗೆ ವಹಿವಾಟುಗಳನ್ನ ಕಡಿತಗೊಳಿಸುವುದಾಗಿ ಅಹಮದಾಬಾದ್‌ ನಲ್ಲಿ ನಡೆದ ಕಂಪನಿ ಸಭೆಯಲ್ಲಿ ತಿಳಿಸಿದೆ.


ಬುಧವಾರದಂದು ಅದಾನಿ ಸಮೂಹದ ಷೇರುಗಳು ಮತ್ತು ಬಾಂಡ್‌ ಗಳ ಮಾರಾಟವು ಪುನರಾರಂಭವಾಯಿತು. ಅದಾನಿ ಎಂಟಪ್ರೈಸಸ್‌ನಲ್ಲಿನ ಷೇರುಗಳು ಶೇ 28 ರಷ್ಟು ಮತ್ತು ಆರ್ಥಿಕ ವಲಯಗಳು ಕುಸಿತ ಕಂಡಿದ್ದರಿಂದ ಅದಾನಿ ಗ್ರೂಪ್‌ ಮಾರುಕಟ್ಟೆ ಬೆಲೆಯ ಪರಿಸ್ಥಿತಿ ಮತ್ತು ಬದಲಾವಣೆಗಳನ್ನ ಗಮನದಲ್ಲಿಟ್ಟುಕೊಂಡು  FPO ಆದಾಯವನ್ನು ಮರಳಿ ನೀಡುವುದರ ಜೊತೆಗೆ ವಹಿವಾಟುಗಳನ್ನ ಕಡಿತಗೊಳಿಸುವುದಾಗಿ ನಿರ್ಧರಿದೆ. ಅಲ್ಲದೇ ಕಂಪನಿಯು ಸಮುದಾಯದ ಹಿತಾಸಕ್ತಿಗಳನ್ನು ಕಾಪಾಡುವ ಗುರಿಯೊಂದಿಗೆ ಈ ನಿರ್ಧಾರ ಕೈಗೊಂಡಿದೆ ಎಂದು ಸಭೆಯಲ್ಲಿ ತಿಳಿಸಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.