ನವದೆಹಲಿ: ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ದೆಹಲಿ ಹೈಕೋರ್ಟ್ ಇಂದು(ಮಾರ್ಚ್ 23) ಷರತ್ತುಬದ್ಧ ಜಾಮೀನು ನೀಡಿದೆ. 10 ಲಕ್ಷ ಮೌಲ್ಯದ ಬಾಂಡ್ ನೀಡುವಂತೆ ಹಾಗೂ ದೇಶ ಬಿಟ್ಟು ತೆರಳದಂತೆ ಕಾರ್ತಿಗೆ ಸೂಚನೆ ನೀಡಲಾಗಿದೆ.



COMMERCIAL BREAK
SCROLL TO CONTINUE READING

ಕಾರ್ತಿ ಮತ್ತು ಸಿಬಿಐ ವಾದಗಳನ್ನು ಕೇಳಿದ ನಂತರ, ಮಾರ್ಚ್ 16 ರಂದು ನ್ಯಾಯಮೂರ್ತಿ ಎಸ್.ಪಿ.ಗಾರ್ಗ್ ಅವರ ನಿರ್ಧಾರವನ್ನು ಕಾಯ್ದಿರಿಸಿದ್ದರು. ಕಾರ್ತಿ ಅವರ ಜಾಮೀನನ್ನು ಸಿಬಿಐ ವಿರೋಧಿಸಿದ್ದು, ಕಾರ್ತಿಗೆ ಜಾಮೀನು ನೀಡಬಾರದು, ಏಕೆಂದರೆ ಅವರು ಪ್ರಭಾವಿ ವ್ಯಕ್ತಿಯಾಗಿದ್ದು, ಈಗಾಗಲೇ ಈ ವಿಷಯದಲ್ಲಿ ಪುರಾವೆಗಳನ್ನು ನಾಶಪಡಿಸಿದ್ದಾರೆ ಎಂದು ಸಿಬಿಐ ತನ್ನ ವಾದ ಮಂಡಿಸಿತ್ತು.


ಫೆ. 28ರಂದು ಲಂಡನ್ ನಿಂದ ವಾಪಸ್ ಆಗುತ್ತಿದ್ದ ವೇಳೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾರ್ತಿ ಅವರನ್ನು ಬಂಧಿಸಿ ವಿಚಾರಣೆಗಾಗಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.