ನವದೆಹಲಿ: ಉತ್ತರ ಪ್ರದೇಶದ ಹಿರಿಯ ಪೋಲಿಸ್ ಅಧಿಕಾರಿ ತಮ್ಮ ನಿವೃತ್ತಿಯ ನಂತರ  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡುವುದಾಗಿ ಎಂದು ಸಿಎಂ ಆದಿತ್ಯನಾಥ್ ನಿಗೆ ಪತ್ರ ಬರೆದಿದ್ದಾರೆ.


COMMERCIAL BREAK
SCROLL TO CONTINUE READING

 ಹಿರಿಯ ಐಪಿಎಸ್ ಅಧಿಕಾರಿ ಸೂರ್ಯ ಕುಮಾರ್ ಶುಕ್ಲಾ  ಅವರು ಈಗ ಈ ರೀತಿ ಪತ್ರ ಬರೆದಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಪತ್ರದಲ್ಲಿ ತಾವು ಪಟ್ಟಿ ಮಾಡಿರುವ ನಾಲ್ಕು ಹುದ್ದೆಗಳಲ್ಲಿ ಒಂದು ಬೇಕು ಎಂದು ಅವರು ತಿಳಿಸಿದ್ದಾರೆ. ಶುಕ್ಲಾ ಶುಕ್ರವಾರದಂದು ನಿವೃತ್ತಿಹೊಂದುತ್ತಿದ್ದು ಅಧಿಕಾರದಲ್ಲಿದ್ದಾಗಲೇ ಬಹಿರಂಗವಾಗಿ ಈ ರೀತಿ ಪತ್ರ ಬರೆದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.


ಈ ಹಿಂದೆ ಈ ಪೋಲಿಸ ಅಧಿಕಾರಿ ಜನೆವರಿ 28 ರಂದು ರಾಮ ಮಂದಿರ್ ಕಟ್ಟುವ ವಿಚಾರದಲ್ಲಿನ ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಕೂಡ ಭಾರಿ ವಿವಾದಕ್ಕೆ ಕಾರಣವಾಗಿತ್ತು. 


ಸಿಎಂ ಯೋಗಿ ಬರೆದಿರುವ ಪತ್ರದಲ್ಲಿ ಶುಕ್ಲಾ " ನನಗೆ ನಿಮ್ಮ ಸಂಘಟನೆ ಮತ್ತು ಸಿದ್ದಾಂತದಲ್ಲಿ ಸಂಪೂರ್ಣ ನಂಬಿಕೆ ಇದ್ದು ,ನಾನು ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಿದ್ದು ಆದ್ದರಿಂದ ನಾನು ನಿಮ್ಮ ಕಾರ್ಯ ಚಟುವಟಿಕೆಗಳಲ್ಲಿ ಇನ್ನು ಹೆಚ್ಹಿನ ರೀತಿಯಲ್ಲಿ ನೆರವಾಗಲು ಸಹಕರಿಸುತ್ತೇನೆ "ಎಂದು  ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಸ್ಕ್ರೋಲ್ ವರದಿ ಮಾಡಿದೆ