ಯಾವುದೇ ಪೇಮೆಂಟ್ ಇಲ್ಲದೆ ನೀವು ನಿಮ್ಮ ರೇಲ್ವೆ ಟಿಕೆಟ್ ಕಾಯ್ದಿರಿಸಬಹುದು... ಹೇಗೆ ಅಂತೀರಾ?
ಟ್ರೈನ್ ನಲ್ಲಿ ಪ್ರಯಾಣ ಬೆಳೆಸುವವರಿಗಾಗಿ IRCTCಯ ಒಂದು ಜಬರ್ದಸ್ತ್ ಯೋಜನೆ ಇದೆ. ಈ ಯೋಜನೆಯನ್ನು ಬಳಸಿ ಯಾತ್ರಿಗಳು ಯಾವುದೇ ಹಣ ನೀಡದೆ ತಮ್ಮ ಟಿಕೆಟ್ ಬುಕ್ ಮಾಡಬಹುದು. ಆದರೆ, IRCTCಯಲ್ಲಿ ನೀವು ಅಧಿಕೃತ ಖಾತೆ ಹೊಂದಿದ್ದರೆ ಮಾತ್ರ ನೀವು ಟಿಕೆಟ್ ಅನ್ನು ಬುಕ್ ಮಾಡಬಹುದು.
ನವದೆಹಲಿ: ಟ್ರೈನ್ ನಲ್ಲಿ ಪ್ರಯಾಣ ಬೆಳೆಸುವವರಿಗಾಗಿ IRCTCಯ ಒಂದು ಜಬರ್ದಸ್ತ್ ಯೋಜನೆ ಇದೆ. ಈ ಯೋಜನೆಯನ್ನು ಬಳಸಿ ಯಾತ್ರಿಗಳು ಯಾವುದೇ ಹಣ ನೀಡದೆ ತಮ್ಮ ಟಿಕೆಟ್ ಬುಕ್ ಮಾಡಬಹುದು. ಆದರೆ, IRCTCಯಲ್ಲಿ ನೀವು ಅಧಿಕೃತ ಖಾತೆ ಹೊಂದಿದ್ದರೆ ಮಾತ್ರ ನೀವು ಟಿಕೆಟ್ ಅನ್ನು ಬುಕ್ ಮಾಡಬಹುದು. IRCTC ಅರ್ಥಶಾಸ್ತ್ರ ಪ್ರೈವೇಟ್ ಲಿಮಿಟೆಡ್ ನ ಪೈಲಟ್ ಯೋಜನೆಯಾಗಿರುವ ಇ-ಪೇಲೇಟರ್ ಜೊತೆಗೆ ಒಡಂಬಡಿಕೆಯೊಂದನ್ನು ಮಾಡಿಕೊಂಡಿದೆ. ಇದರ ಅಡಿ ನೀವು ಟಿಕೆಟ್ ಬುಕ್ ಮಾಡಿದ 14 ದಿನಗಳ ಬಳಿಕ ಹಣವನ್ನು ಪಾವತಿಸಬಹುದು. ಇದರರ್ಥ ನೀವು ಬುಕ್ ಮಾಡಿರುವ ಟಿಕೆಟ್ ಹಣವನ್ನು ಪಾವತಿಸಲು ನಿಮಗೆ 14 ದಿನಗಳ ಕಾಲಾವಕಾಶ ಸಿಗಲಿದೆ.
ಏನಿದು ePayLater
ಈ ಪ್ರಾಜೆಕ್ಟ್ ನಲ್ಲಿ ಯಾವುದೇ ಗ್ರಾಹರರು IRCTC ವೆಬ್ಸೈಟ್ ನಿಂದ ಯಾವುದೇ ಹಣ ನೀಡದೆ ಆನ್ಲೈನ್ ನಲ್ಲಿ ticket ಅನ್ನು ಕಾಯ್ದಿರಿಸಬಹುದಾಗಿದೆ. ಅಷ್ಟೇ ಅಲ್ಲ ಟಿಕೆಟ್ ಕಾಯ್ದಿರಿಸಿದ ಬಳಿಕ ಮುಂದಿನ 14 ದಿನಗಳ ಅವಧಿಯಲ್ಲಿ ನೀವು ಹಣ ಪಾವತಿಸಬಹುದು. ಈ ಯೋಜನೆಯ ಲಾಭ ಪಡೆದ ಗ್ರಾಹಕರು ಹಣ ಪಾವತಿಸುವ ವೇಳೆ ಶೇ.3.5ರಷ್ಟು ಸರ್ವಿಸ್ ಚಾರ್ಜ್ ನೀಡಬೇಕು. ಆದರೆ,14 ದಿನಗಳ ಅವಧಿಯ ಒಳಗೆ ಒಂದು ವೇಳೆ ಗ್ರಾಹಕರು ಹಣವನ್ನು ಮರುಪಾವತಿಸಿದರೆ, ಅವರಿಗೆ ಯಾವುದೇ ಹೆಚ್ಚುವರಿ ಟ್ಯಾಕ್ಸ್ ಬೀಳುವುದಿಲ್ಲ. ಈ ಯೋಜನೆಯ ವಿಶೇಷತೆ ಎಂದರೆ, ಸಮಯಕ್ಕೆ ಹಣ ಪಾವತಿಸುವ ಗ್ರಾಹಕರ ಕ್ರೆಡಿಟ್ ಲಿಮಿಟ್ ಕೂಡ ಏರಿಕೆಯಾಗಲಿದೆ.
ಹೌದು, ನಿಮಗೆ ಕ್ರೆಡಿಟ್ ಲಿಮಿಟ್ ಕೂಡ ಸಿಗಲಿದೆ
IRCTCಯ ಈ ಯೋಜನೆಯಲ್ಲಿ ನಿಮಗೆ ನಿಮ್ಮ ಅಕೌಂಟ್ ನಲ್ಲಿ ಕ್ರೆಡಿಟ್ ಲಿಮಿಟ್ ಕೂಡ ಸಿಗುತ್ತದೆ. ಆದರೆ, ವಿಭಿನ್ನ ಗ್ರಾಹಕರಿಗೆ ಈ ಲಿಮಿಟ್ ಭಿನ್ನ-ಭಿನ್ನವಾಗಿದೆ. ಟಿಕೆಟ್ ಬುಕಿಂಗ್ ಮಾಡುವ ವೇಳೆ ಗ್ರಾಹಕರು ಅವರ ಬುಕ್ ಮಾಡಲಿರುವ ಟಿಕೆಟ್ ಮೊತ್ತ ಕ್ರೆಡಿಟ್ ಲಿಮಿಟ್ ಒಳಗೆ ಇರಬೇಕು ಎಂಬುದರ ಕಡೆಗೆ ಗಮನಹರಿಸುವುದು ಅವಶ್ಯಕವಾಗಿದೆ. ಒಂದು ವೇಳೆ ನೀವು ಸಮಯಕ್ಕೆ ಸರಿಯಾಗಿ ಟಿಕೆಟ್ ಬುಕಿಂಗ್ ಹಣವನ್ನು ಮರುಪಾವತಿಸಿದರೆ ನಿಮ್ಮ ಕ್ರೆಡಿಟ್ ಲಿಮಿಟ್ ಹೆಚ್ಚಾಗಲಿದೆ. ಇನ್ನೊಂದೆಡೆ ಸಮಯಕ್ಕೆ ಸರಿಯಾಗಿ ಪೇಮೆಂಟ್ ಮಾಡದೆ ಇರುವ ಗ್ರಾಹಕರ ಕ್ರೆಡಿಟ್ ಲಿಮಿಟ್ ಕಡಿಮೆ ಕೂಡ ಆಗಲಿದೆ.
ಪೇಮೆಂಟ್ ಮಾಡದೆ ಟಿಕೆಟ್ ಬುಕ್ ಮಾಡುವುದು ಹೇಗೆ?
ಟಿಕೆಟ್ ಬುಕ್ ಮಾಡಲು ನೀವು ನಿಮ್ಮ IRCTC ಅಧಿಕೃತ ಖಾತೆಯಿಂದ ಲಾಗಿನ್ ಆಗಬೇಕು. ಒಂದು ವೇಳೆ ಅಕೌಂಟ್ ಇಲ್ಲದೆ ಹೋದಲ್ಲಿ ಹೊಸ ಅಕೌಂಟ್ ತೆರೆಯಿರಿ. ಟಿಕೆಟ್ ಬುಕ್ ಮಾಡಲು ಮೊದಲು ಟ್ರೈನ್ ಆಯ್ಕೆ ಮಾಡಿ, ನಿಮ್ಮ ಮಾಹಿತಿಯನ್ನು ಸರಿಯಾಗಿ ಭರ್ತಿಮಾಡಿ. ಬಳಿಕ Book Now ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಮುಂದೆ ಹೊಸ ಪೇಜ್ ವೊಂದು ತೆರೆದುಕೊಳ್ಳಲಿದೆ. ಇದರಲ್ಲಿ ನೀವು ಪ್ಯಾಸಿಂಜರ್ ಮಾಹಿತಿ ಹಾಗೂ ಕ್ಯಾಪ್ಚಾ ಕೋಡ್ ಭರ್ತಿ ಮಾಡುವ ಆಪ್ಶನ್ ಸಿಗಲಿದೆ. ಇದನ್ನು ಪೂರ್ಣಗೊಳಿಸಿ, ಸಬ್ಮಿಟ್ ಮಾಡಿ. ಈಗ ನಿಮ್ಮ ಮುಂದೆ ಪೇಮೆಂಟ್ ಡೀಟೇಲ್ಸ್ ಪುಟ ತೆರೆದುಕೊಳ್ಳಲಿದೆ. ಇದರಲ್ಲಿ ನಿಮಗೆ ಕ್ರೆಡಿಟ್, ಡೆಬಿಟ್, ಭೀಮ್ ಆಪ್, ನೆಟ್ ಬ್ಯಾಂಕಿಂಗ್ ಇತ್ಯಾದಿ ಪೇಮೆಂಟ್ ಆಪ್ಶನ್ ಸಿಗಲಿವೆ. ಜೊತೆಗೆ ePayLater ಆಪ್ಶನ್ ಕೂಡ ಸಿಗಲಿದೆ.
ಹಣ ಮರುಪಾವತಿ ಮಾಡದೆ ಹೋದಲ್ಲಿ ಏನಾಗಲಿದೆ?
ಟಿಕೆಟ್ ಬುಕ್ ಮಾಡಿ 14 ದಿನಗಳ ಒಳಗೆ ಒಂದು ವೇಳೆ ನೀವು ಹಣ ಮರುಪಾವತಿ ಮಾಡದೆ ಹೋದಲ್ಲಿ, ನಿಮ್ಮಿಂದ ಬಡ್ಡಿ ಸಮೇತ ಹಣ ವಸೂಲಿ ಮಾಡಲಾಗುವುದು. ಅಷ್ಟೇ ಅಲ್ಲ ಇದನ್ನು ಕೂಡ ಪಾವತಿಸುವಲ್ಲಿ ನೀವು ವಿಳಂಬ ನೀತಿ ಅನುಸರಿಸಿದಲ್ಲಿ IRCTC ನಿಮ್ಮ ಖಾತೆಯನ್ನು ಬಂದ್ ಮಾಡಿ, ಕಾನೂನಾತ್ಮಕ ಕ್ರಮ ಕೈಗೊಳ್ಳಲಿದೆ.