ತನ್ನ ಯಾತ್ರಿಗಳಿಗೆ ವಿಶೇಷ ಅಲರ್ಟ್ ಜಾರಿಗೊಳಿಸಿದೆ IRCTC
IRCTC ALERT: ತನ್ನ ಯಾತ್ರಿಗಳಿಗೆ ವಿಶೇಷ ಅಲರ್ಟ್ ಜಾರಿಗೊಳಿಸಿರುವ IRCTC ತಮ್ಮ ಸಾಮಾಜಿಕ ಮಾಧ್ಯಮಗಳ ಪ್ಲಾಟ್ಫಾರ್ಮ್ ಗಳ ಮೇಲೆ PNR ಸ್ಟೇಟಸ್, ಟ್ರಾನ್ಸ್ಯಾಕ್ಶನ್ ಐಡಿ ಹಾಗೂ ಇತರೆ ಯಾವುದೇ ಮಾಹಿತಿ ಹಂಚಿಕೊಳ್ಳದಂತೆ ಸೂಚಿಸಿದೆ.
ನವದೆಹಲಿ: ಒಂದು ವೇಳೆ ನೀವೂ ಕೂಡ ರೈಲಿನಲ್ಲಿ ಪ್ರಯಾಣ ನಡೆಸಲು ಯೋಚಿಸುತ್ತಿದ್ದರೆ IRCTC ನೀಡಿರುವ ಈ ಎಚ್ಚರಿಕೆಗೆ ನೀವು ಗಮನ ನೀಡಲೇ ಬೇಕು. IRCTC ತನ್ನ ಅಧಿಕೃತ ಟ್ವಿಟ್ಟರ್ ಹಾಗೂ ಫೇಸ್ ಬುಕ್ ಗಳಂತಹ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಹಲ ಮೇಲೆ ತನ್ನ ಯಾತ್ರಿಗಳಿಗೆ ಹಲವು ಸೂಚನೆಗಳನ್ನು ಜಾರಿಗೊಳಿಸಿದೆ. ಈ ಸೂಚನೆಗಳ ಪ್ರಕಾರ ಯಾತ್ರಿಗಳು IRCTCಯ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಮೇಲೆ ತಮ್ಮ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬಾರದು ಎಂದು ಹೇಳಿದೆ. ಅಷ್ಟೇ ಅಲ್ಲ ಭಾರತೀಯ ರೇಲ್ವೆಯ ಸೋಸಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಗಳ ಮೇಲೆ ನೇರ ಮಾಹಿತಿಯನ್ನು ಸಹ ಹಂಚಿಕೊಳ್ಳದಂತೆ ಸೂಚಿಸಿದೆ.
ಯಾತ್ರಿಗಳಿಗೆ ತನ್ನ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಈ ಕುರಿತು ಮನವಿ ಮಾಡಿರುವ IRCTC ಶಂಕಿತ ಕರೆ ಹಾಗೂ ಲಿಂಕ್ ಗಳಿಗೆ ಪ್ರತಿಕ್ರಿಯೆ ನೀಡದಿರಲು ಸೂಚಿಸಿದೆ.ಇದರಿಂದ ನೀವು ಆರ್ಥಿಕ ವಂಚನೆಗೆ ಒಳಗಾಗಬಹುದು ಹಾಗೂ ನೀವು ನಿಮ್ಮ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂತಹ ಕರೆಗಳು ನಿಮಗೆ ಬಂದರೆ ಅವುಗಳ ಕುರಿತು ಎಚ್ಚರಿಕೆ ವಹಿಸುವ ಅಗತ್ಯತೆ ಇದೆ ಎಂದು IRCTC ಹೇಳಿದೆ.
ತನ್ನ ಯಾತ್ರಿಗಳಿಗೆ ವಿಶೇಷ ಅಲರ್ಟ್ ಜಾರಿಗೊಳಿಸಿರುವ IRCTC ತಮ್ಮ ಸಾಮಾಜಿಕ ಮಾಧ್ಯಮಗಳ ಪ್ಲಾಟ್ಫಾರ್ಮ್ ಗಳ ಮೇಲೆ PNR ಸ್ಟೇಟಸ್, ಟ್ರಾನ್ಸ್ಯಾಕ್ಶನ್ ಐಡಿ ಹಾಗೂ ಇತರೆ ಯಾವುದೇ ಮಾಹಿತಿ ಹಂಚಿಕೊಳ್ಳದಂತೆ ಸೂಚಿಸಿದೆ. ತಮ್ಮ ರಿಫಂಡ್ ಸಿಸ್ಟಮ್ ಸಂಪೂರ್ಣ ಆಟೋಮ್ಯಾಟಿಕ್ ಆಗಿದ್ದು, ಇದರಲ್ಲಿ ಯಾರೊಬ್ಬರು ಅಡ್ಡಿಪಡಿಸುವ ಅಗತ್ಯತೆ ಇಲ್ಲ ಎಂದು ಸಂಸ್ಥೆ ಹೇಳಿದೆ.
ಹಲವು ಬಾರಿ ಯಾತ್ರಿಗಳು ಪ್ರವಾಸದ ವೇಳೆ ಯಾವುದೇ ಒಂದು ಸಮಸ್ಯೆಯ ಕುರಿತು ದೂರು ದಾಖಲಿಸುವ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಮಾಹಿತಿಯನ್ನು ಭಾರತೀಯ ರೈಲಿನ ಟ್ವಿಟ್ಟರ್ ಹಾಗೂ ಫೇಸ್ ಬುಕ್ ಗಳಂತಹ ಪ್ಲಾಟ್ಫಾರ್ಮ್ ಗಳ ಮೇಲೆ ಹಂಚಿಕೊಳ್ಳುತ್ತಾರೆ. ಇದರಿಂದ ಅವರ ವೈಯಕ್ತಿಕ ಮಾಹಿತಿ ಸಾರ್ವಜನಿಕವಾಗಿ ಹಂಚಿಕೆಯಾಗಿ ಯಾತ್ರಿಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಇದರಿಂದ ಈ ಕೆಲಸದಿಂದ ದೂರವಿರಲು IRCTC ಮನವಿ ಮಾಡಿದೆ.
ಇಲ್ಲಿ ದೂರು ದಾಖಲಿಸಿ
ತನ್ನ ಯಾತ್ರಿಗಳ ಸೌಕರ್ಯಕ್ಕಾಗಿ IRCTC ದೂರು ದಾಖಲಿಸುವ ಸೌಲಭ್ಯವನ್ನು ಒದಗಿಸಿದೆ. ಒಂದು ವೇಳೆ IRCTCಯ iMudra ಅಕೌಂಟ್ ನಲ್ಲಿ ಯಾವುದೇ ಶಂಕಿತ ಚಟುವಟಿಕೆ ನಿಮ್ಮ ಗಮನಕ್ಕೆ ಬಂದರೆ, ಕೂಡಲೇ 07556610661 ಸಂಖ್ಯೆಯನ್ನು ಡೈಲ್ ಮಾಡಿ ನೀವು ದೂರು ದಾಖಲಿಸಬಹುದು ಎಂದು ಇದರಲ್ಲಿ ಹೇಳಲಾಗಿದೆ.