IRCTC ticket booking new rules: ನಿಮ್ಮ ಸ್ನೇಹಿತರು ಅಥವಾ ಅಪರಿಚಿತರಿಗೆ ನಿಮ್ಮ ವೈಯಕ್ತಿಕ IRCTC ಐಡಿಯ ಮೂಲಕ ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್ ಬುಕ್‌ ಮಾಡ್ತೀರಾ? ಹಾಗಿದ್ರೆ ನೀವು ಎಚ್ಚರವಾಗಿರಬೇಕು.. ನೀವು ಹೀಗೆ ಯಾರ್ಯಾರಿಗೋ ನಿಮ್ಮ ಐಡಿಯಲ್ಲಿ ಟಿಕೆಟ್‌ ಬುಕ್ ಮಾಡಿದರೆ ಜೈಲು ಶಿಕ್ಷೆ ಮತ್ತು ಭಾರೀ ಮೊತ್ತದ ದಂಡವನ್ನು ವಿಧಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ಹೌದು, ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಕೆಲವು ಹೊಸ ನಿಯಮಗಳನ್ನು ತಂದಿದೆ. ರೈಲ್ವೆ ಕಾಯ್ದೆಯ ಸೆಕ್ಷನ್ 143ರ ಪ್ರಕಾರ, ಇನ್ಮುಂದೆ ಅಧಿಕೃತ ಏಜೆಂಟರು ಮಾತ್ರ 3ನೇ ವ್ಯಕ್ತಿಯ ಹೆಸರಿನಲ್ಲಿ ಕಾಯ್ದಿರಿಸುವ ಟಿಕೆಟ್ ಬುಕ್‌ ಮಾಡಬಹುದು.


ಇದನ್ನೂ ಓದಿ: Shocking News: ನೇಣು ಬಿಗಿದುಕೊಂಡು ಕಾಂಗ್ರೆಸ್‌ ಶಾಸಕನ ಪತ್ನಿ ಆತ್ಮಹತ್ಯೆ..!


ನಿಮ್ಮ ವೈಯಕ್ತಿಕ ಐಡಿ ಹೆಸರಿನಲ್ಲಿ ನಿಮ್ಮ ಕುಟುಂಬ ಸದಸ್ಯರು, ನಿಮ್ಮ ಉಪನಾಮ ಹೊಂದಿರುವವರು ಮತ್ತು ರಕ್ತ ಸಂಬಂಧಿಗಳಿಗೆ ಮಾತ್ರ ಕಾಯ್ದಿರಿಸುವ ಟಿಕೆಟ್‌ಗಳನ್ನು ಬುಕ್‌ ಮಾಡಬಹುದು. ಅದು ಬಿಟ್ಟು ನಿಮಗೆ ಗೊತ್ತಿಲ್ಲದ ಅಪರಿಚಿತರಿಗೆ ನಿಮ್ಮ ಐಡಿಯಲ್ಲಿ ಟಿಕೆಟ್‌ ಬುಕ್‌ ಮಾಡಿದರೆ ಖಂಡಿತ ನಿಮಗೆ ಸಂಕಷ್ಟ ಎದುರಾಗುತ್ತದೆ. 


IRCTC ಜಾರಿಗೆ ತಂದಿರುವ ಹೊಸ ನಿಯಮಗಳನ್ನು ಉಲ್ಲಂಘಿಸುವವರಿಗೆ 10,000 ರೂ.ಗಳ ದಂಡ ಮತ್ತು ೩ ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಲಾಗುತ್ತದೆ. ಇನ್ಮುಂದೆ ತಮ್ಮ ಐಡಿಗಳನ್ನು ಬೇರೆ ಯಾರಿಗೂ ನೀಡದಂತೆ ರೈಲ್ವೆ ನಾಗರಿಕರಿಗೆ ಮನವಿ ಮಾಡಿದೆ. IRCTC ಐಡಿಯೊಂದಿಗೆ ಆಧಾರ್ ಲಿಂಕ್ ಮಾಡಿದವರಿಗೆ ತಿಂಗಳಿಗೆ 24 ಟಿಕೆಟ್‌ಗಳು ಮತ್ತು ಲಿಂಕ್ ಮಾಡದವರಿಗೆ 12 ಟಿಕೆಟ್‌ಗಳನ್ನು ಬುಕ್‌ ಮಾಡುವ ಸೌಲಭ್ಯವನ್ನು IRCTC ಪರಿಚಯಿಸಿದೆ.


ಇದನ್ನೂ ಓದಿ: Viral: ಮಾವುತನ ಪ್ರಾಣ ತೆಗೆದ ಮರಿ ಆನೆ, ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಬೀಕರ ದೃಶ್ಯ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.