ನವದೆಹಲಿ: ಕರೋನ ವೈರಸ್ ಪ್ರಕೋಪದ ಅವಧಿಯಲ್ಲಿ ಜನರು ಸಮಯ ಕಳೆಯಲು ವಿಭಿನ್ನ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಜನರನ್ನು ರಂಜಿಸಲು ಐಆರ್‌ಸಿಟಿಸಿ ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತಮಾಷೆಯ ಪ್ರಶ್ನೆಗಳನ್ನು ಕೇಳುತ್ತದೆ. ಈಗ ಐಆರ್‌ಸಿಟಿಸಿ ಪಾಸ್ತಾ ಪ್ರಿಯರಿಗಾಗಿ ಸ್ವಾರಸ್ಯಕರ ಪ್ರಶ್ನೆಯೊಂದನ್ನು ಕೇಳಿದೆ. ಒಂದು ವೇಳೆ ನೀವೂ ಕೂಡ ಪಾಸ್ತಾ ಪ್ರಿಯರಾಗಿದ್ದಾರೆ ಮತ್ತು ಉತ್ತರವನ್ನು ತಿಳಿದಿದ್ದರೆ, ನಿಮ್ಮ ಉತ್ತರವನ್ನು ಕಾಮೆಂಟ್ ಬಾಕ್ಸ್‌ನಲ್ಲಿ ಬರೆಯಬಹುದು.


COMMERCIAL BREAK
SCROLL TO CONTINUE READING

ಈ ಕುರಿತು ತನ್ನ ಟ್ವೀಟ್ ನಲ್ಲಿ ಬರೆದು ಕೊಂಡಿರುವ IRCTC, "ನೀವು ಪಾಸ್ತಾ ಪ್ರಿಯರೆ..? ಹಾಗಿದ್ದರೆ ಈ ಒಗಟಿನ ಉತ್ತರ ನೀಡುವುದು ನಿಮಗೆ ಸುಲಭವಾಗಬಹುದು. ನೀವು ನಿಮ್ಮ ಉತ್ತರವನ್ನು ಕಾಮೆಂಟ್ ಬಾಕ್ಸ್ ನಲ್ಲಿ ಬರೆಯಬಹುದು" ಎಂದಿದೆ. ಇದಕ್ಕೆ ಸಂಬಂಧಪಟ್ಟಂತೆ ಫೋಟೋವೊಂದನ್ನು ಹಂಚಿಕೊಂಡಿರುವ IRCTC, ಇದು ಯಾವ ವರೈಟಿಯ ಪಾಸ್ತಾ ಇದೆ ಗುರುತಿಸಿ ಎಂದು ಹೇಳಿ ನಾಲ್ಕು ಆಯ್ಕೆಗಳನ್ನು ಕೂಡ IRCTC ನೀಡಿದೆ.



ಸದ್ಯ ಸಾಮಾಜಿಕ ಮಾಧ್ಯಮ ಬಳಕೆದಾರರು ಐಆರ್‌ಸಿಟಿಸಿಯ ಈ ಪೋಸ್ಟ್‌ ಗೆ ತಮ್ಮ ಪ್ರತ್ಯುತ್ತರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೂ ಮುನ್ನ ಐಆರ್‌ಸಿಟಿಸಿ ಗೋವಾಗೆ ಸಂಬಂಧಿಸಿದ ಒಂದು ಪ್ರಶ್ನೆಯನ್ನು ಕೇಳಿತ್ತು.  ಐಆರ್‌ಸಿಟಿಸಿಯ ಪ್ರಶ್ನೆ ಹೀಗಿತ್ತು - ಗೋವಾದ ಅಧಿಕೃತ ಭಾಷೆ ಯಾವುದು? ಇದಕ್ಕಾಗಿ ನಾಲ್ಕು ಆಯ್ಕೆಗಳನ್ನು ಸಹ ಅವರಿಗೆ ನೀಡಲಾಯಿತು.
1. ಮರಾಠಿ
2. ಕೊಂಕಣಿ
3. ಪೋರ್ಚುಗೀಸ್
4. ಗೋನ್
ಗೋವಾ ರಾಜ್ಯದ ಅಧಿಕೃತ ಭಾಷೆ ಕೊಂಕಣಿ ಭಾಷೆಯಾಗಿದೆ ಎಂಬುದು ಇದರ ಉತ್ತರ.