ಸೆಪ್ಟೆಂಬರ್ 1 ರಿಂದ ಈ ಸೇವೆಗೆ ಶುಲ್ಕ ವಿಧಿಸಲಿದೆ ರೈಲ್ವೆ ಇಲಾಖೆ
IRTCT ಸೆಪ್ಟೆಂಬರ್ 1 ರಿಂದ ಇ-ಟಿಕೆಟ್ನಲ್ಲಿ ಉಚಿತ ಪ್ರಯಾಣ ವಿಮಾ ಸೌಲಭ್ಯವನ್ನು ಒದಗಿಸುವುದಿಲ್ಲ.
ನವದೆಹಲಿ: ಒಂದು ವೇಳೆ ನೀವು ಕೂಡ ರೈಲುಗಳಲ್ಲಿ ರಿಸರ್ವೇಶನ್ ಮಾಡಿ ಪ್ರಯಾಣ ಮಾಡುವವರಾಗಿದ್ದರೆ ಈ ಸುದ್ದಿ ನಿಮಗೆ ಮುಖ್ಯವಾಗಿದೆ. IRCTC ಯಿಂದ ಉಚಿತವಾಗಿ ಒದಗಿಸಲಾಗುತ್ತಿದ್ದ ಸೌಲಭ್ಯಕ್ಕಾಗಿ ಈಗ ನಿಗದಿತ ಶುಲ್ಕವನ್ನು ವಿಧಿಸಲಾಗುವುದು. ಹೀಗಾಗಿ ನೀವು ಮೊದಲು ಬುಕಿಂಗ್ ಮಾಡುವಾಗ ಪಾವತಿಸುತ್ತಿದ್ದ ಹಣಕ್ಕಿಂತ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ವಾಸ್ತವವಾಗಿ, ಸೆಪ್ಟೆಂಬರ್ 1 ರಿಂದ, ಇ-ಟಿಕೆಟ್ನಲ್ಲಿ ನೀಡಬೇಕಾದ ಉಚಿತ ಟ್ರಾವೆಲ್ ವಿಮೆ ಸೌಲಭ್ಯವನ್ನು IRCTC ಒದಗಿಸುವುದಿಲ್ಲ. ಒಬ್ಬ ಪ್ರಯಾಣಿಕನು ವಿಮೆಯನ್ನು ತೆಗೆದುಕೊಳ್ಳಲು ಬಯಸಿದರೆ, ಅವರು ಇ-ಟಿಕೆಟಿಂಗ್ ಮಾಡಿದ ನಂತರ ಪ್ರಯಾಣ ವಿಮೆಗಾಗಿ ಪ್ರತ್ಯೇಕ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ಈ ವಿಮೆ ಆಯ್ಕೆ ಪ್ರಯಾಣಿಕರ ಇಚ್ಛೆಯನ್ನು ಅವಲಂಬಿಸಿರುತ್ತದೆ. ಡಿಸೆಂಬರ್ 2017 ರಿಂದ IRCTC ಯ ಉಚಿತ ವಿಮಾ ಸೌಲಭ್ಯವನ್ನು ಒದಗಿಸುತ್ತಿದೆ. ಡಿಜಿಟಲ್ ಸಂವಹನವನ್ನು ಉತ್ತೇಜಿಸಲು IRCTC ಇದನ್ನು ಮಾಡಿದೆ. ಇದಲ್ಲದೆ, IRCTC ಡೆಬಿಟ್ ಕಾರ್ಡಿನೊಂದಿಗೆ ಟಿಕೆಟ್ ಬುಕಿಂಗ್ನಲ್ಲಿ ಶುಲ್ಕವನ್ನು ರದ್ದು ಮಾಡಿದೆ.
ಯಾವುದೇ ವರ್ಗ(class) ನಲ್ಲಿ ಪ್ರಯಾಣಿಸುವ ಪ್ರವಾಸಿಗರಿಗೆ IRCTC ವಿಮಾ ಸೌಲಭ್ಯವನ್ನು ಒದಗಿಸುತ್ತಿತ್ತು. ಇದರ ಅಡಿಯಲ್ಲಿ ಗರಿಷ್ಠ 10 ಲಕ್ಷ ರೂ. ವರೆಗೆ ವಿಮೆಯ ಅನುಕೂಲ ದೊರೆಯಲಿದೆ. ಪ್ರಯಾಣಿಕರ ಪ್ರಯಾಣದ ಸಮಯದಲ್ಲಿ ಸಾವನ್ನಪ್ಪಿದರೆ, 10 ಲಕ್ಷ ರೂಪಾಯಿವರೆಗೂ ನೀಡಲಾಗುವುದು. ಶಾಶ್ವತ ಮತ್ತು ಭಾಗಶಃ ಅಂಗವೈಕಲ್ಯಕ್ಕಾಗಿ 7.5 ಲಕ್ಷ ರೂಪಾಯಿವರೆಗೂ ನೀಡಲಾಗುವುದು. ಗಾಯಗೊಂಡವರಿಗೆ ಎರಡು ಲಕ್ಷ ರೂಪಾಯಿವರೆಗೂ ನೀಡಲಾಗುವುದು. ಆದಾಗ್ಯೂ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಈ ವಿಮೆಗೆ ಒಳಪಡುವುದಿಲ್ಲ.
ರೈಲ್ವೆ ಪ್ರಯಾಣ ಮಾಡುವ ವೇಳೆ ಇದುವರೆಗೂ ಎಷ್ಟು ಜನರು ಈ ವಿಮೆ ಸೌಲಭ್ಯ ಪಡೆದಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಸೆಪ್ಟೆಂಬರ್ 1 ರ ನಂತರ ಪಾವತಿಸಬೇಕಾದ ವಿಮಾ ಶುಲ್ಕ ಎಷ್ಟು ಎಂಬುದನ್ನು IRCTC ಶೀಘ್ರವೇ ಘೋಷಿಸಲಿದೆ.