ರೈಲಿನಲ್ಲಿ ಚಹಾ, ತಿಂಡಿ ಸೇವಿಸುವ ಮುನ್ನ ಈ ಸುದ್ದಿ ಓದಿ
ರೈಲ್ವೆಯಲ್ಲಿ ಆಹಾರ ಮತ್ತು ಪಾನೀಯಗಳನ್ನು ಪೂರೈಸುವ ಜವಾಬ್ದಾರಿ ಐಆರ್‌ಸಿಟಿಸಿಗೆ ಇದೆ. ಐಆರ್ಸಿಟಿಸಿ ಈ ಸೇವೆಯನ್ನು ಗುತ್ತಿಗೆ ಆಧಾರದ ಮೇಲೆ ನೀಡುತ್ತದೆ.
ನವದೆಹಲಿ/ ಕೋಲ್ಕತಾ:ದೆಹಲಿ-ಕೋಲ್ಕತಾ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಜಿರಳೆ ಬಿದ್ದ ಚಹಾ ವಿತರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಈ ಕೆಳದರ್ಜೆಯ ಚಹಾ ಅನ್ನು ಭಾರತೀಯ ರೈಲು ವಿಭಾಗದ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) ಮಾರಾಟಗಾರರು ನೀಡುತ್ತಿದ್ದರು ಎಂಬುದು ಇಲ್ಲಿ ಗಮನಾರ್ಹ. ಇದರ ವಿಡಿಯೋ ಚಿತ್ರೀಕರಿಸಿದ ಪ್ರಯಾಣಿಕರು, ಜನವರಿ 5 ರಂದು ರೈಲ್ವೆ ಸಚಿವ, ಪೂರ್ವ ರೈಲ್ವೆ ಮತ್ತು ಐಆರ್‌ಸಿಟಿಸಿಗೆ ಟ್ವಿಟರ್‌ನಲ್ಲಿ ಟ್ಯಾಗ್ ಮಾಡಿದ್ದಾರೆ. ಈ ವೀಡಿಯೊವನ್ನು ಮಯೂಕ್ ರಂಜನ್ ಘೋಷ್ ಹಾಕಿದ್ದಾರೆ. ಇದನ್ನು ಗಮನಿಸಿರುವ ಐಆರ್‌ಸಿಟಿಸಿ, ಆಹಾರ ಸೇವಾ ಪೂರೈಕೆದಾರರಿಗೆ (ಗುತ್ತಿಗೆದಾರ) ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಜನವರಿ 7 ರಂದು ಐಆರ್‌ಸಿಟಿಸಿ ದಂಡ ವಿಧಿಸಿರುವ ಕುರಿತು ಮಾಹಿತಿ ಪ್ರಕಟಿಸಿದೆ.
ಗುತ್ತಿಗೆ ಆಧಾರದ ಮೇಲೆ ನೀಡಲಾಗುತ್ತದೆ ಆಹಾರ ಪೂರೈಕೆಯ ಜವಾಬ್ದಾರಿ
ರೈಲ್ವೆಯಲ್ಲಿ ಆಹಾರ ಮತ್ತು ಪಾನೀಯಗಳನ್ನು ಪೂರೈಸುವ ಜವಾಬ್ದಾರಿ ಐಆರ್‌ಸಿಟಿಸಿಗೆ ಇದೆ. ಐಆರ್ಸಿಟಿಸಿ ಈ ಸೇವೆಯನ್ನು ಗುತ್ತಿಗೆ ಆಧಾರದ ಮೇಲೆ ನೀಡುತ್ತದೆ. ಆದರೂ ಸಹ ಐಆರ್ಸಿಟಿಸಿ ಕಲ ಕಾಲಕ್ಕೆ ಈ ಆಹಾರದ ಗುಣಮಟ್ಟವನ್ನು ಪರಿಶೀಲಿಸುತ್ತಲೇ ಇರುತ್ತದೆ.
ಈ ಮೊದಲೂ ಕೂಡ ಹಳಸಿದ ಆಹಾರ ಸಪ್ಲೈ ಮಾಡಲಾಗಿತ್ತು
17 ನವೆಂಬರ್ 2019 ರಂದು ನವದೆಹಲಿಯಿಂದ ವಾರಣಾಸಿಗೆ ಹೋಗುವ ವಂದೇ ಭಾರತ್ ರೈಲಿನಲ್ಲಿ (ರೈಲು ಸಂಖ್ಯೆ 22435-36) ಹಳಸಿದ ಆಹಾರವನ್ನು ನೀದಲಾಗುತ್ತಿರುವುದರ ಬಗ್ಗೆ ದೂರು ದಾಖಲಾಗಿದೆ. ಹಳಸಿದ ಆಹಾರವನ್ನು ವಿತರಿಸುವ ಸೇವಾ ಪೂರೈಕೆದಾರರಿಗೆ 1 ಲಕ್ಷ ರೂ.ಗಳ ದಂಡ ವಿಧಿಸಲಾಗಿತ್ತು ಮತ್ತು ಅದರ ಬದಲಾಗಿ ಹೊಸ ಆಹಾರ ಸೇವಾ ಪೂರೈಕೆದಾರರನ್ನು ನೇಮಿಸಲಾಗಿತ್ತು.