ನವದೆಹಲಿ : ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾದ ಬಳಿಕ ಇದೇ ಮೊದಲ ಬಾರಿಗೆ ದೆಹಲಿಯಿಂದ 15 ರೈಲುಗಳನ್ನು ಮಂಗಳವಾರ ವಿವಿಧ ಸ್ಥಳಗಳಿಗೆ ಬಿಡುಗಡೆ ಮಾಡಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ. ಇದಕ್ಕಾಗಿ ಟಿಕೆಟ್ ಕಾಯ್ದಿರಿಸುವಿಕೆಯನ್ನು ಐಆರ್‌ಸಿಟಿಸಿಯ ವೆಬ್‌ಸೈಟ್‌ನಿಂದ ಪ್ರಾರಂಭವಾಗಿದೆ. ಆದರೆ ಇಂದು ಸಂಜೆ ನಾಲ್ಕು ಗಂಟೆಗೆ ವೆಬ್‌ಸೈಟ್ ಪ್ರಾರಂಭವಾದ ಕೂಡಲೇ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ.


COMMERCIAL BREAK
SCROLL TO CONTINUE READING

ಇದಕ್ಕೂ ಮೊದಲು ಕೇಂದ್ರ ಗೃಹ ಸಚಿವಾಲಯವು ರೈಲು ಪ್ರಯಾಣಕ್ಕಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಅನ್ನು ಬಿಡುಗಡೆ ಮಾಡಿತು. ಕೇವಲ ಕನ್ಫರ್ಮ್ ಟಿಕೆಟ್ ಹೊಂದಿದ ಹಾಗೂ ಸೋಂಕಿನ ಲಕ್ಷಣಗಳು ಕಂಡುಬರದ ಯಾತ್ರಿಗಳಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲು ಅನುವು ಮಾಡಿಕೊಡಲಾಗುವುದು ಎಂದು ಸಚಿವಾಲಯ ಈಗಾಗಲೇ ಸ್ಪಷ್ಟಪಡಿಸಿದೆ.


ಇಲಾಖೆ ಇದನ್ನೂ ಕೂಡ ಸ್ಪಷ್ಟಪಡಿಸಿದೆ 
- ವಿಶೇಷ ರೈಲುಗಳಲ್ಲಿ ಹವಾನಿಯಂತ್ರಿತ ವರ್ಗ ಬೋಗಿಗಳು ಮಾತ್ರ ಇರಲಿದ್ದು, ಸಾಮಾನ್ಯ ರಾಜಧಾನಿ ರೈಲಿನ ಪ್ರಕಾರ ಶುಲ್ಕವಿರುತ್ತದೆ.
- ಥರ್ಮಲ್ ಸ್ಕ್ರೀನಿಂಗ್ (ದೇಹದ ಉಷ್ಣತೆ ಪರಿಶೀಲನೆ) ಗಾಗಿ ಪ್ರಯಾಣಿಕರು ಕನಿಷ್ಠ ಒಂದೂವರೆ ಗಂಟೆಗಳ ಮುಂಚಿತವಾಗಿ ರೈಲ್ವೆ ನಿಲ್ದಾಣವನ್ನು ತಲುಪಬೇಕಾಗುತ್ತದೆ.
- ಎಲ್ಲಾ ಪ್ರಯಾಣಿಕರು ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಲು ಮತ್ತು ಬಳಸಲು ಸೂಚಿಸಲಾಗಿದೆ.
- ಪ್ರಯಾಣಿಕರು ತಮ್ಮ ಹೊದಿಕೆ, ಆಹಾರ ಮತ್ತು ನೀರನ್ನು ತರಬೇಕು. ಪ್ರಯಾಣದ ವೇಳೆ ರೈಲ್ವೆ ಇಲಾಖೆ ಯಾತ್ರಿಗಳಿಗೆ ರೆಡಿ ಟು ಈಟ್ ಆಹಾರ ಮತ್ತು ಬಿಸಿನೀರನ್ನು ಮಾತ್ರ ನೀಡಲಿದ್ದು, ಯಾತ್ರಿಗಳು ಇದಕ್ಕಾಗಿ ಹಣ ಪಾವತಿಸಬೇಕು.
- ಮುಂಗಡ ಕಾಯ್ದಿರಿಸುವಿಕೆಯು ಗರಿಷ್ಠ ಏಳು ದಿನಗಳವರೆಗೆ ಮಾತ್ರ ಇರುತ್ತದೆ, ಪ್ರಸ್ತುತ ಆರ್‌ಎಸಿ ಮತ್ತು ವೇಟಿಂಗ್ ಟಿಕೆಟ್ ನೀಡಲಾಗುವುದಿಲ್ಲ, ರೈಲಿನಲ್ಲಿ ಯಾವುದೇ ಟಿಕೆಟ್ ಮಾಡಲು ಟಿಟಿಇಗೆ ಅವಕಾಶವಿರುವುದಿಲ್ಲ.
- ರೈಲು ನಿರ್ಗಮಿಸುವ 24 ಗಂಟೆಗಳ ಮೊದಲು ಟಿಕೆಟ್ ರದ್ದುಗೊಳಿಸಬಹುದು, ರದ್ದತಿ ಶುಲ್ಕ ಶೇಕಡಾ 50 ರಷ್ಟು ಇರಲಿದೆ.