Health Insurance ಹೊಂದಿದ ಗ್ರಾಹಕರಿಗೆ ನೆಮ್ಮದಿಯ ಸುದ್ದಿ ನೀಡಿದ IRDAI
ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಎಲ್ಲಾ ಆರೋಗ್ಯ ವಿಮಾ ನೀಡುವ ಕಂಪನಿಗಳಿಗೆ ತಮ್ಮ ಗ್ರಾಹಕರಿಗೆ ಕಂತುಗಳಲ್ಲಿ ಪ್ರೀಮಿಯಂ ಪಾವತಿಸುವ ಆಯ್ಕೆಯನ್ನು ನೀಡುವಂತೆ ಕೇಳಿದೆ. ಹೀಗಾಗಿ ಗ್ರಾಹಕರು ಮುಂದಿನ ಒಂದು ವರ್ಷದ ಅವಧಿಗೆ ತಮ್ಮ ಆರೋಗ್ಯ ವಿಮಾ ಪ್ರೀಮಿಯಂ ಅನ್ನು ಕಂತುಗಳಲ್ಲಿ ಜಮಾ ಮಾಡಬಹುದು ಎಂದು ಇರ್ಡಾ ಹೇಳಿದೆ. ಈ ಸೌಲಭ್ಯವನ್ನು ಮಾರ್ಚ್ 21, 2021 ರವರೆಗೆ ಸುಮಾರು ಒಂದು ವರ್ಷದ ಅವಧಿಗೆ ನೀಡಲಾಗಿದೆ.
ಕೊರೊನಾ ವೈರಸ್ ಮಹಾಮಾರಿಯ ಹಿನ್ನೆಲೆ ಸದ್ಯ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿಮಾ ನಿಯಂತ್ರಕ ಪ್ರಾಧಿಕಾರ ಅಂದರ IRDAI ಆರೋಗ್ಯ ವಿಮೆ ಪಡೆದಿರುವ ಎಲ್ಲಾ ಗ್ರಾಹಕರಿಗೆ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ಹೌದು, ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಮುಂದಿನ ಒಂದು ವರ್ಷಗಳ ಅವಧಿಗೆ ಗ್ರಾಹಕರು ತಮ್ಮ ಪ್ರಿಮಿಯಂ ಅನ್ನು ಕಂತುಗಳಲ್ಲಿ ಪಾವತಿಸಬಹುದು ಎಂದು ಇರ್ಡಾ ಹೇಳಿದೆ. ಈ ಸೌಲಭ್ಯವನ್ನು ಮಾರ್ಚ್ 21, 2021 ರವರೆಗೆ ಕಲ್ಪಿಸಲಾಗಿದೆ.
ಅಷ್ಟೇ ಅಲ್ಲ ಈ ಕುರಿತು ಎಲ್ಲಾ ಆರೋಗ್ಯ ವಿಮಾ ಕಂಪನಿಗಳಿಗೆ ನಿರ್ದೇಶನಗಳನ್ನು ನೀಡಿರುವ ಇರ್ಡಾ, ಕಂಪನಿಗಳು ತಮ್ಮ ಎಲ್ಲಾ ಗ್ರಾಹಕರಿಗೆ ಕಂತುಗಳಲ್ಲಿ ಪ್ರಿಮಿಯಂ ಪಾವತಿಸುವ ಆಯ್ಕೆ ನೀಡಬೇಕು ಎಂದು ಕೇಳಿಕೊಂಡಿದೆ.
IRDAI ನೆದಿರುವ ನಿರ್ದೇಶನದ ಪ್ರಕಾರ ವಿಮಾದಾರರು ತನ್ನ ಅನುಕೂಲಕ್ಕೆ ತಕ್ಕಂತೆ 2021 ಮಾರ್ಚ್ಕ್ 31ರಾರೆಗೆ ಪ್ರಿಮಿಯಂ ಮೊತ್ತವನ್ನು ಮಾಸಿಕ, ಮೂರು ತಿಂಗಳ ಅಥವಾ 6 ತಿಂಗಳ ಕಂತುಗಳಲ್ಲಿ ಪಾವತಿಸಬಹುದಾಗಿದೆ ಎಂದು ಹೇಳಿದೆ.
ಆರ್ಥಿಕ ಚಟುವಟಿಕೆಗಳ ಮೇಲೆ ಕರೋನಾ ವೈರಸ್ ಸಾಂಕ್ರಾಮಿಕ ಬೀರಿರುವ ಪರಿಣಾಮದ ಮಧ್ಯೆ ನಿಯಂತ್ರಕ ಈ ಕ್ರಮವನ್ನು ಕೈಗೊಂಡಿದೆ. ವಿಮಾ ಕಂಪನಿಗಳು ತಮಗೆ ಸೂಕ್ತವೆನಿಸಿದ ತಮ್ಮ ಉತ್ಪನ್ನಗಳಿಗೆ ಕಂತುಗಳಲ್ಲಿ ಪ್ರೀಮಿಯಂಗಳನ್ನು ತೆಗೆದುಕೊಳ್ಳಬಹುದು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ವೈಯಕ್ತಿಕ ಆರೋಗ್ಯ ವಿಮಾ ಉತ್ಪನ್ನಗಳ ಸಂದರ್ಭದಲ್ಲಿ ಪ್ರಮಾಣೀಕರಣದ ಆಧಾರದ ಮೇಲೆ ವಿಮಾ ಕಂಪನಿಗಳಿಗೆ ಪ್ರೀಮಿಯಂ ಪಾವತಿ ಆಯ್ಕೆಯನ್ನು (ಹಲವಾರು ಕಂತುಗಳಲ್ಲಿ ಪ್ರೀಮಿಯಂ ಪಾವತಿ) ನೀಡಲು ಐಆರ್‌ಡಿಎ ಅನುಮತಿ ನೀಡಿತು. ಇದಕ್ಕಾಗಿ ಅವರು ಪ್ರಮಾಣಪತ್ರವನ್ನು ಪಡೆಯಬೇಕಾಗಿತ್ತು.
ಆದರೆ ಇನ್ನೊಂದೆಡೆ ವಿಮಾ ಪಾಲಸಿಯ ಮೂಲ ಪ್ರೀಮಿಯಂ ಮತ್ತು ಶುಲ್ಕ ರಚನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಐಆರ್‌ಡಿಎಐ ಸ್ಪಷ್ಟಪಡಿಸಿದೆ. ಪ್ರೀಮಿಯಂ ಪಾವತಿ ಮಾಸಿಕ, ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ರೂಪದಲ್ಲಿ ಪಾವತಿಸಬಹುದು. ಇನ್ನೊಂದೆಡೆ ಕಂತುಗಳಲ್ಲಿ ಪ್ರೀಮಿಯಂ ಪಾವತಿಸುವ ಸೌಲಭ್ಯವನ್ನು 12 ತಿಂಗಳ ತಾತ್ಕಾಲಿಕ ವ್ಯವಸ್ಥೆಯ ರೂಪದಲ್ಲಿ ನೀಡಬಹುದು ಎಂದು ವಿಮಾ ನಿಯಂತ್ರಕ ಪ್ರಾಧಿಕಾರ ಹೇಳಿದೆ. ಅಂದರೆ, ಮಾರ್ಚ್ 31, 2021 ರವರೆಗೆ ನವೀಕರಣದೊಂದಿಗೆ ಆರೋಗ್ಯ ವಿಮಾ ಪಾಲಿಸಿಗೆ ಈ ಸೌಲಭ್ಯವನ್ನು ನೀಡಬಹುದು ಎಂದು ಹೇಳಿದೆ.
ಇದಕ್ಕೆ ಸಂಬಂಧಿಸಿದಂತೆ ಸುದ್ದಿ ಸಂಸ್ಥೆ PTIಗೆ ಮಾಹಿತಿ ನೀಡಿರುವ ಪ್ರಾಧಿಕಾರ, ಕರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಆರೋಗ್ಯ ವಿಮಾ ಪ್ರೀಮಿಯಂ ಪಾವತಿಯನ್ನು ಸರಳೀಕೃತಗೊಳಿಸುವ ಅಗತ್ಯತೆಯನ್ನು ಪರಿಗಣಿಸಲಾಗಿದ್ದು, ಇದರ ಅಡಿ, ಎಲ್ಲಾ ವಿಮಾ ಕಂಪನಿಗಳಿಗೆ ಆರೋಗ್ಯ ವಿಮಾ ಪ್ರಿಮಿಯಂ ಅನ್ನು ಕಂತುಗಳಲ್ಲಿ ತೆಗೆದುಕೊಳ್ಳಲು ಅನುಮತಿಸಲಾಗಿದೆ. ಅಷ್ಟೇ ಅಲ್ಲ ಇದಕ್ಕಾಗಿ ಕಂಪನಿಗಳು ವಿವಿಧ ಪ್ರಕಾರದ ಉತ್ಪನ್ನಗಳನ್ನು ಆಯ್ಕೆ ಮಾಡಬಹುದು" ಎಂದು ಹೇಳಿದೆ.