ಆಂಬುಲೆನ್ಸ್ ಇರುವುದು ಜನಸೇವೇಗೋ? ಪಾನಸೇವೆಗೋ?
ಮೀರತ್ನ ಲಾಲಾ ಲಜಪತ್ ರಾಯ್ ಮೆಡಿಕಲ್ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಹಿರಿಯ ವಿದ್ಯಾರ್ಥಿಗಳ ಕೂಟಕ್ಕಾಗಿ ಈ ಸಿದ್ಧತೆ ನಡೆಸಲಾಗಿತ್ತು.
ಉತ್ತರ ಪ್ರದೇಶದ ಮೀರತ್ ನಲ್ಲಿರುವ ಸರ್ಕಾರಿ ಸ್ವಾಮ್ಯದ ವೈದ್ಯಕೀಯ ಕಾಲೇಜಿನ ಆಂಬುಲೆನ್ಸ್ ಒಂದು ರಷ್ಯಾದಿಂದ ಬಂದಿದ್ದ ಮದ್ಯದ ಬಾಟಲಿಗಳ ಬಾಕ್ಸ್ಗಳು ಮತ್ತು ಬೆಳ್ಳಿ ಡ್ಯಾನ್ಸರ್ ಗಳನ್ನೂ ಹೊತ್ತೊಯ್ದ ಘಟನೆಯೊಂದು ಸಾರ್ವಜನಿಕರ ಹುಬ್ಬೇರಿಸುವಂತೆ ಮಾಡಿದೆ.
ಹೌದು, ಮೀರತ್ನ ಲಾಲಾ ಲಜಪತ್ ರಾಯ್ ಮೆಡಿಕಲ್ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಹಿರಿಯ ವಿದ್ಯಾರ್ಥಿಗಳ ಕೂಟಕ್ಕಾಗಿ ಈ ಸಿದ್ಧತೆ ನಡೆಸಲಾಗಿತ್ತು.
ANI ಈ ಚಿತ್ರವನ್ನು ಸೆರೆಹಿಡಿದಿದ್ದು, ನೋಂದಣಿ ಸಂಖ್ಯೆ ಯುಪಿ 15 ಸಿಟಿ 2860 ಆಂಬುಲೆನ್ಸ್ನಲ್ಲಿ 100 ಪಿಪರ್ಸ್ ಲೇಬಲ್ನ ಮದ್ಯ ಬಾಟಲಿಗಳ ಪೆಟ್ಟಿಗೆಗಳನ್ನು ಮತ್ತು ಬೆಲ್ಲಿ ಡ್ಯಾನ್ಸರ್ ಗಳನ್ನೂ ಕರೆದೊಯ್ಯುತ್ತಿರುವ ದೃಶ್ಯವನ್ನು ಬಿಡುಗಡೆಗೊಳಿಸಿದೆ. ಅಲ್ಲದೆ, ಇನ್ನೊಂದು ಚಿತ್ರ ಬೆಲ್ಲಿ ಡ್ಯಾನ್ಸರ್ ಗಳು ನೃತ್ಯ ಪ್ರದರ್ಶನ ನೀಡುತ್ತಿರುವುದಾಗಿದೆ. ANI ಬಿಡುಗಡೆ ಮಾಡಿದ ಮೂರನೇ ಚಿತ್ರದಲ್ಲಿ, ಅಲುಮ್ನಿ ಸದಸ್ಯರು ನೃತ್ಯವನ್ನು ವೀಕ್ಷಿಸುತ್ತಿದ್ದಾರೆ.
ವರದಿಗಳ ಪ್ರಕಾರ, ಈ ಕಾರ್ಯಕ್ರಮ ಸೋಮವಾರ ನಡೆದಿದ್ದು, ನಂತರ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಘಟನೆಯ ಬಗ್ಗೆ ತನಿಖೆಗೆ ಆದೇಶ ನೀಡಿದ್ದಾರೆ.
ಬೆಳ್ಳಿಯ ಮಹೋತ್ಸವದ ಆಚರಣೆಯ ಸಂದರ್ಭದಲ್ಲಿ ಕಾಲೇಜು ಆವರಣದಲ್ಲಿ ಎಲ್ಲರಿಗೂ ಮದ್ಯಪಾನ ಸರಬರಾಜು ಮಾಡಲಾಗಿತ್ತೆಂದು ವರದಿಗಳು ತಿಳಿಸಿವೆ.