ಕೋಲ್ಕತಾ: ನಂದಿಗ್ರಾಮ್ನ ಬಿರುಲಿಯಾ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ನಡೆದ ಘಟನೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಾಯಗೊಂಡಿದ್ದಾರೆ.  ಮಮತಾ ಬ್ಯಾನರ್ಜಿ ಅವರ ಎಡಗಾಲಿಗೆ ಗಾಯವಾಗಿದ್ದು ಅವರನ್ನು ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಮತಾ ಬ್ಯಾನರ್ಜಿ ಇದನ್ನು ದಾಳಿ ಎಂದು ಬಣ್ಣಿಸಿದ್ದು, ಈ ಘಟನೆ ಒಂದು ಪಿತೂರಿ ಎಂದು ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಯಾರೂ ತಳ್ಳಲಿಲ್ಲ - ಪ್ರತ್ಯಕ್ಷದರ್ಶಿಗಳು
ಅಪಘಾತದ ಸಮಯದಲ್ಲಿ ಸ್ಥಳದಲ್ಲಿದ್ದ ವಿದ್ಯಾರ್ಥಿ ಸುಮನ್ ಮೈಟಿ, 'ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಲ್ಲಿಗೆ ಬಂದಾಗ ಅವರನ್ನು ನೋಡಲು ಅಪಾರ ಜನಸಮೂಹವು  ಸುತ್ತುವರೆದು ಎದ್ದುನಿಂತರು.  ಈ ಸಮಯದಲ್ಲಿ ಯಾರೂ ಅವರನ್ನು ತಳ್ಳಲಿಲ್ಲ. ಅವನ ಕಾರು ಕೂಡ ನಿಧಾನವಾಗಿ ಚಲಿಸುತ್ತಿತ್ತು ಎಂದು ಹೇಳಿದ್ದಾರೆ.


West Bengal assembly election) ವೇಳೆ ನಡೆದ ಘಟನೆಯಲ್ಲಿ ಹಾಜರಿದ್ದ ಮತ್ತೊಬ್ಬ ಪ್ರತ್ಯಕ್ಷದರ್ಶಿ ಚಿತ್ತರಂಜನ್ ದಾಸ್, "ನಾನು ಅಲ್ಲಿದ್ದೆ, ಅವರು (ಮಮತಾ ಬ್ಯಾನರ್ಜಿ) ತನ್ನ ಕಾರಿನೊಳಗೆ ಕುಳಿತಿದ್ದರು, ಆದರೆ ಬಾಗಿಲು ತೆರೆದಿತ್ತು" ಎಂದು ಹೇಳಿದರು. ಪೋಸ್ಟರ್ ಹೊಡೆದ ನಂತರ ಬಾಗಿಲು ಮುಚ್ಚಲಾಗಿದೆ. ಯಾರೂ ತಳ್ಳಲಿಲ್ಲ. ಆ ಸಮಯದಲ್ಲಿ ಬಾಗಿಲಿನ ಬಳಿ ಯಾರೂ ಇರಲಿಲ್ಲ ಎಂದವರು ತಿಳಿಸಿದ್ದಾರೆ.


Mamata Banerjee: ನಂದಿಗ್ರಾಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ..!


ಮಮತಾ ಬ್ಯಾನರ್ಜಿ ಅವರ ಆರೋಪ :
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ತಮ್ಮ ಕಾರಿನ ಬಳಿ ನಿಂತಾಗ 4-5 ಜನರು ಅವರನ್ನು ತಳ್ಳಿದರು ಮತ್ತು ಅವರ ಕಾಲಿಗೆ ಗಾಯವಾಯಿತು ಎಂದು ಹೇಳಿದರು. ಘಟನೆ ನಡೆದ ಸಮಯದಲ್ಲಿ ಸ್ಥಳೀಯ ಪೊಲೀಸರು ಇರಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಇದು ಅವರ ವಿರುದ್ಧದ ಪಿತೂರಿ ಮತ್ತು ಉದ್ದೇಶಪೂರ್ವಕವಾಗಿ ಈ ಘಟನೆ ನಡೆದಿದೆ ಎಂದವರು ಆರೋಪಿಸಿದ್ದಾರೆ.


ಮಮತಾ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರ ತಂಡ :
ನಂದಿಗ್ರಾಮ್ನಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಗಾಯಗೊಂಡ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಗ್ರೀನ್ ಕಾರಿಡಾರ್ ಮಾಡುವ ಮೂಲಕ ಕೋಲ್ಕತ್ತಾಗೆ ಕರೆತರಲಾಯಿತು. ಅವರನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ಯಾನರ್ಜಿಗೆ ಚಿಕಿತ್ಸೆ ನೀಡಲು ಐವರು ಹಿರಿಯ ವೈದ್ಯರ ತಂಡವನ್ನು ರಚಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ತಂಡವು ಹೃದ್ರೋಗ ತಜ್ಞರು, ಅಂತಃಸ್ರಾವಶಾಸ್ತ್ರಜ್ಞರು, ಸಾಮಾನ್ಯ ಶಸ್ತ್ರಚಿಕಿತ್ಸೆ ವೈದ್ಯರು, ಮೂಳೆ ತಜ್ಞರು ಮತ್ತು ಓರ್ವ ಮೆಡಿಸಿನ್ ವೈದ್ಯರನ್ನು ಒಳಗೊಂಡಿದೆ.


ಇದನ್ನೂ ಓದಿ - BJP: ಪ.ಬ ಎಲೆಕ್ಷನ್: ನಂದಿಗ್ರಾಮದಲ್ಲಿ ದೀದಿ ವಿರುದ್ಧ ಅಭ್ಯರ್ಥಿ ಹೆಸರು ಪ್ರಕಟಿಸಿದ ಬಿಜೆಪಿ!


ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಮತದಾನ ನಡೆಯಲಿದೆ:
ಪಶ್ಚಿಮ ಬಂಗಾಳದ (West Bengal) 294 ವಿಧಾನಸಭಾ ಸ್ಥಾನಗಳಿಗೆ 8 ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 27, 1 ಏಪ್ರಿಲ್, 6 ಏಪ್ರಿಲ್, 10 ಏಪ್ರಿಲ್, 17 ಏಪ್ರಿಲ್, 22 ಏಪ್ರಿಲ್, 26 ಏಪ್ರಿಲ್ ಮತ್ತು 29 ಏಪ್ರಿಲ್ನಲ್ಲಿ ರಾಜ್ಯದಲ್ಲಿ ಮತದಾನ ನಡೆಯಲಿದ್ದು, ಚುನಾವಣಾ ಫಲಿತಾಂಶಗಳು ಮೇ 2 ರಂದು ಬರಲಿವೆ. ಮೊದಲ ಮತ್ತು ಎರಡನೇ ಹಂತದಲ್ಲಿ 30-30 ಸ್ಥಾನಗಳು, ಮೂರನೇ ಹಂತದಲ್ಲಿ 31 ಸ್ಥಾನಗಳು, ನಾಲ್ಕನೇ ಹಂತದಲ್ಲಿ 44 ಸ್ಥಾನಗಳು, ಐದನೇ ಹಂತದಲ್ಲಿ 45 ಸ್ಥಾನಗಳು, ಆರನೇ ಹಂತದಲ್ಲಿ 43 ಸ್ಥಾನಗಳು, ಏಳನೇ ಹಂತದಲ್ಲಿ 36 ಸ್ಥಾನಗಳು ಮತ್ತು ಎಂಟನೇ ಹಂತದಲ್ಲಿ 35 ಸ್ಥಾನಗಳಿಗೆ  ಮತದಾನ ನಡೆಯಲಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.