ರಷ್ಯಾ ಉಕ್ರೇನ್ ಯುದ್ಧ ಪ್ರಾರಂಭವಾಗಿ ಒಂದು ವರ್ಷಕ್ಕಿಂತ ಹೆಚ್ಚು ದಿನಗಳೇ ಕಳೆದಿದೆ. ಈ ಯುದ್ಧದಲ್ಲಿ ರಷ್ಯಾ ನಿರೀಕ್ಷಿಸಿದ ಯಶಸ್ಸನ್ನು ಪಡೆಯಲು ಸಾಧ್ಯವಾಗಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಭಾರತ ಮತ್ತು ಮ್ಯಾನ್ಮಾರ್‌ ನಿಂದ ತನ್ನ ಶಸ್ತ್ರಾಸ್ತ್ರಗಳನ್ನು ಹಿಂಪಡೆಯಲು ಯೋಚಿಸುತ್ತಿದೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ‘ನಿಕ್ಕಿ ಏಷ್ಯಾ’ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕ್ಯಾಥ್ ಲ್ಯಾಕ್-ಎಕೊ ಕಾರ್ಡಿಯೋಗ್ರಾಫರ್ ಹುದ್ದೆಗೆ ಅರ್ಜಿ ಆಹ್ವಾನ


ವರದಿಯ ಪ್ರಕಾರ, ರಷ್ಯಾವು ದೀರ್ಘಾವಧಿಯ ಮಿಲಿಟರಿ ಸಂಬಂಧಗಳನ್ನು ಹೊಂದಿರುವ ದೇಶಗಳಿಂದ ಈ ಶಸ್ತ್ರಾಸ್ತ್ರಗಳನ್ನು ಹಿಂದಕ್ಕೆ ಪಡೆಯುತ್ತದೆ. ಫೆಬ್ರವರಿ 2022 ರಲ್ಲಿ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಪ್ರಾರಂಭವಾದಾಗಿನಿಂದ ಯುಎಸ್, ಯುರೋಪಿಯನ್ ರಾಷ್ಟ್ರಗಳು ಮತ್ತು ಜಪಾನ್ ರಷ್ಯಾಕ್ಕೆ ಸಂಭಾವ್ಯ ಮಿಲಿಟರಿ ಬಳಕೆಯೊಂದಿಗೆ ಸರಕುಗಳ ರಫ್ತು ಮಾಡುವುದನ್ನು ನಿಷೇಧಿಸಿವೆ.


NPK KBM, ರಷ್ಯಾದ ಮೆಷಿನ್-ಬಿಲ್ಡಿಂಗ್ ಡಿಸೈನ್ ಬ್ಯೂರೋ ಕೂಡ ಭಾರತದಿಂದ ಕೆಲವು ಭಾಗಗಳನ್ನು ಖರೀದಿಸಿತು. ಈ ಕಂಪನಿಯು ಕ್ಷಿಪಣಿಗಳ ಉತ್ಪಾದನೆಗೆ ಸಂಬಂಧಿಸಿದೆ. ನೈಟ್ ವ್ಯೂವ್ ಅಗತ್ಯ ಕಾರಣದಿಂದ ಆಗಸ್ಟ್ ಮತ್ತು ನವೆಂಬರ್ 2022 ರಲ್ಲಿ $ 150,000 ಗೆ ಕೊಟ್ಟು ಭಾರತೀಯ ರಕ್ಷಣಾ ಸಚಿವಾಲಯದಿಂದ ಒಟ್ಟು ಆರು ಭಾಗಗಳನ್ನು ಖರೀದಿಸಲಾಯಿತು.


ಈ ಎಲ್ಲಾ ಕ್ಷಿಪಣಿಗಳು ರಾತ್ರಿಯಲ್ಲಿ ಮತ್ತು ಕಡಿಮೆ ಬೆಳಕಿನಲ್ಲಿಯೂ ಗುರಿಗಳನ್ನು ಹೊಡೆಯುತ್ತದೆ. ಈ ಭಾಗಗಳನ್ನು ಕೆಬಿಎಂ ತಯಾರಿಸಿದೆ. ಕಂಪನಿಯು ಫೆಬ್ರವರಿ 2013 ರಲ್ಲಿ ಭಾರತಕ್ಕೆ ಇದೇ ರೀತಿಯ ಭಾಗಗಳನ್ನು ರಫ್ತು ಮಾಡಿತ್ತು. ವರದಿಯ ಪ್ರಕಾರ, ಈ ಸಂಬಂಧ ಕೆಬಿಎಂ ಅಥವಾ ಭಾರತೀಯ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಷ್ಯಾಕ್ಕೆ ಟ್ಯಾಂಕ್ ತಯಾರಕ ಉರಲ್ ವ್ಯಾಗೊನ್‌ಜಾವೊಡ್, ಡಿಸೆಂಬರ್ 9, 2022 ರಂದು ಮ್ಯಾನ್ಮಾರ್ ಮಿಲಿಟರಿಯಿಂದ $ 24 ಮಿಲಿಯನ್‌ಗೆ ಮಿಲಿಟರಿ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ ಎಂದು ವರದಿಯಾಗಿದೆ. ಈ ಉತ್ಪನ್ನಗಳನ್ನು UralVagonZavod ತಯಾರಿಸಿದಂತೆ ನೋಂದಾಯಿಸಲಾಗಿದೆ.


ಇದನ್ನೂ ಓದಿ: Aloe Vera Juice: ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿದರೆ ಎಷ್ಟೆಲ್ಲಾ ಲಾಭ ಗೊತ್ತಾ?


ಜಪಾನ್‌ ನ ಹಿರೋಷಿಮಾದಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ, ಕಳೆದ ತಿಂಗಳು ಏಳು ನಾಯಕರ ಗುಂಪು ರಷ್ಯಾಕ್ಕೆ ಮಿಲಿಟರಿ ಬೆಂಬಲವನ್ನು ಕೊನೆಗೊಳಿಸುವಂತೆ ಇತರ ದೇಶಗಳ ಬಳಿ ಕೇಳಿಕೊಂಡಿದೆ. ಆದರೆ ರಷ್ಯಾ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಅವಲಂಬಿಸಿರುವ ದೇಶಗಳಿಂದ ಸಹಕಾರ ಪಡೆಯುವುದು ಕಷ್ಟ ಎಂದು ಟೋಕಿಯೊದ ಹಿಟೊತ್ಸುಬಾಶಿ ವಿಶ್ವವಿದ್ಯಾಲಯದ ಶಸ್ತ್ರಾಸ್ತ್ರ ನಿಯಂತ್ರಣ ಪ್ರಾಧ್ಯಾಪಕ ನೊಬುಮಾಸಾ ಅಕಿಯಾಮಾ ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ