ನವದೆಹಲಿ: ವಿಶ್ವದ ಶ್ರೀಮಂತ ಜನರ ಪಟ್ಟಿಯಲ್ಲಿರುವ ಮುಕೇಶ್ ಅಂಬಾನಿ ತನ್ನ ಪುತ್ರನ ನಿಶ್ಚಿತಾರ್ಥದ ಬಳಿಕ ಈಗ ಪುತ್ರಿಯ ನಿಶ್ಚಿತಾರ್ಥದಲ್ಲಿ ನಿರತರಾಗಿದ್ದಾರೆ. ಇಶಾ ಅಂಬಾನಿ ಅವರ ನಿಶ್ಚಿತಾರ್ಥ ಇಟಲಿಯಲ್ಲಿ ಶುಕ್ರವಾರ (ಸೆಪ್ಟೆಂಬರ್ 21) ನಡೆಯಲಿದ್ದು, ಅಜಯ್ ಪಿರಮಲ್ ಅವರ ಪುತ್ರ ಆನಂದ್ ಪಿರಾಮಾಲ್ ಅವರೊಂದಿಗೆ ಈ ನಿಶ್ಚಿತಾರ್ಥ ನಡೆಯಲಿದೆ. ಈ ಕ್ಷಣಗಳನ್ನು ಅತ್ಯಂತ ಸುಂದರ ಮತ್ತು ಸ್ಮರಣೀಯವಾಗಿಸಲು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಸೆಪ್ಟೆಂಬರ್ 21 ರಿಂದ ಪ್ರಾರಂಭವಾಗುವ ಈ ಗ್ರಾಂಡ್ ನಿಶ್ಚಿತಾರ್ಥವು ಮೂರು ದಿನಗಳವರೆಗೆ ನಡೆಯಲಿದೆ.


COMMERCIAL BREAK
SCROLL TO CONTINUE READING

ನಿಶ್ಚಿತಾರ್ಥದ ಎಲ್ಲಾ ಆಚರಣೆಗಳು ಇಟಲಿಯ ಲೇಕ್ ಕೊಮೊ, ಲೊಂಬಾರ್ಡಿನಲ್ಲಿ ನಡೆಯಲಿದೆ. ಇದು ಅಂಬಾನಿ ಕುಟುಂಬಕ್ಕೆ ಇದು ಬಹಳ ವಿಶೇಷವಾದ ಸಂಭ್ರಮವಾಗಿದೆ. ಮಾಹಿತಿಯ ಪ್ರಕಾರ, ನಿಶ್ಚಿತಾರ್ಥದ ಆಚರಣೆಯು ಮೂರು ದಿನಗಳು ಅಂದರೆ 23 ನೇ ಸೆಪ್ಟೆಂಬರ್ ವರೆಗೂ ನಡೆಯಲಿದೆ. ಈ ಆಚರಣೆಯಲ್ಲಿ ಎಲ್ಲಾ ಧಾರ್ಮಿಕ ಕ್ರಿಯೆಗಳನ್ನು ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಇದರಲ್ಲಿ ನೃತ್ಯದಿಂದ ಹಿಡಿದು ಭೋಜನದವರೆಗೆ ಎಲ್ಲಾ ವಿಶೇಷವಾಗಿದೆ.



ಶುಕ್ರವಾರದಂದು (ಸೆಪ್ಟೆಂಬರ್ 21) ಸಂಜೆ 5 ಗಂಟೆಗೆ, ಲೇಕ್ ಬಲ್ಬೂವಿನ ವಿಲ್ಲಾ ಬಾಲ್ಬಿಯಾನೋದಲ್ಲಿ(Villa Balbiano) ಅತಿಥಿಗಳ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಘಟನೆ, ಉಪಹಾರದಿಂದ ಊಟದವರೆಗೆ ಕಾರ್ಯಕ್ರಮದಲ್ಲಿ ವಿಶೇಷ ಹೆಸರನ್ನು ನೀಡಲಾಗಿದೆ. ಸ್ವಾಗತ ಊಟಕ್ಕೆ 'ಬೆವೆನುತಿ ಎ ಕೊಮೊ'('Benvenuti A Como') ಎಂದು ಹೆಸರಿಸಲಾಗಿದೆ, ಕೊಮೊ ಎಂದರೆ ಸ್ವಾಗತ. ಡಿನ್ನರ್ 'ಅಮೋರ್ ಇ ಬೆಲೆಜ್ಜಾ'('Amore E Bellezza') ಎಂದು ಹೆಸರಿಸಲ್ಪಟ್ಟಿದೆ, ಅಂದರೆ 'ಲವ್ ಅಂಡ್ ಬ್ಯೂಟಿ'.



ಮುಕೇಶ್ ಅಂಬಾನಿ ಅವರ ಮಗಳು ಇಶಾ ಅಂಬಾನಿ ಅವರ ಮದುವೆಗಾಗಿ ಆನಂದ ಪೀರ್ಮಾಲ್ ಅವರನ್ನು ಆಯ್ಕೆ ಮಾಡಿದರು. ಮೇ ತಿಂಗಳಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಎರಡೂ ಕುಟುಂಬಗಳ ಉಪಸ್ಥಿತಿಯಲ್ಲಿ ಆಚರಣೆಯು ನಡೆಯಿತು. ಇಶಾ ಅವರ ಸಹೋದರ ಆಕಾಶ್ ಅಂಬಾನಿ ಅವರ ನಿಶ್ಚಿತಾರ್ಥವು ಶ್ಲೋಕ ಮೆಹ್ತಾ ಅವರೊಂದಿಗೆ ನಡೆದಿದೆ. ಈ ನಿಶ್ಚಿತಾರ್ಥದ ನಂತರ, ಅಂಬಾನಿ ಕುಟುಂಬ ಮಗಳ ಮದುವೆಯನ್ನು ಘೋಷಿಸಿದರು. ಆನಂದ್ ಪಿರಾಮಾಲ್ ಅವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ನ ಪದವೀಧರರಾಗಿದ್ದು, ಈಗ ಅವರು ಪಿರಾಮಾಲ್ ಎಂಟರ್ಪ್ರೈಸಸ್ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.



ಲೇಕ್ ಕೊಮೊ ಇಟಲಿಯ ಮೂರನೇ ಅತಿ ದೊಡ್ಡ ಮತ್ತು ಅತ್ಯಂತ ಸುಂದರವಾದ ಸರೋವರವಾಗಿದೆ. ಈ ಸ್ಥಳವನ್ನು ಹಾಲಿವುಡ್ನ ಪ್ರಸಿದ್ಧ ವ್ಯಕ್ತಿಗಳ ಸ್ಥಳ ಎಂದು ಪರಿಗಣಿಸಲಾಗುತ್ತದೆ. ಇದು ಆಲ್ಪ್ಸ್ ಸರೋವರದ ತಪ್ಪಲಿನಲ್ಲಿದ್ದು, ಪ್ರಕೃತಿಯ ಸೌಂದರ್ಯವನ್ನು ಜನರಿಗೆ ನೀಡುತ್ತದೆ. ಇಟಲಿಯಲ್ಲಿ ಮೂರನೇ ಅತಿದೊಡ್ಡ ಸರೋವರವಾದ ಲೇಕ್ ಕೊಮೊ 146 ಚದರ ಕಿಲೋಮೀಟರುಗಳಷ್ಟು ವ್ಯಾಪಿಸಿದೆ. ಈ ಸರೋವರದ ಸುಮಾರು 1,300 ಅಡಿ ಆಳವಿದೆ, ಇದು ಯುರೋಪ್ನ ಆಳವಾದ ಸರೋವರಗಳಲ್ಲಿ ಒಂದಾಗಿದೆ. ಸರೋವರದ ಸುತ್ತಮುತ್ತ ಹಚ್ಚ ಹಸಿರಿನಿಂದ ಆವೃತವಾದ ಸುಂದರ ಬೆಟ್ಟಗಳು ಮತ್ತು ವರ್ಣಮಯ ಹೂವುಗಳಿಂದ ತುಂಬಿರುತ್ತದೆ.


ಇಟಲಿಯ ಲೇಕ್ ಕೊಮೊದಲ್ಲಿ ವಿಲ್ಲಾ ಡೆಲ್ ಬಾಲ್ಬಿನೆಲ್ಲೊದಲ್ಲಿ ವಿಶ್ವದ ವಿಐಪಿಗಳು ಮತ್ತು ಅನೇಕ ಪ್ರಸಿದ್ಧ ಕ್ರೀಡಾ ಆಟಗಾರರು ವಿವಾಹವಾಗಿದ್ದಾರೆ. ಹಾಟ್ ಬಾಲಿವುಡ್ ದಂಪತಿ ದೀಪಿಕಾ ಮತ್ತು ರಣವೀರ್ ಅವರ ಮದುವೆ ಕುರಿತು ಚರ್ಚೆ ನಡೆಯುತ್ತಿರುವಾಗ ಲೆಕ್ ಕೊಮೊ ಹೆಸರನ್ನು ಇತ್ತೀಚೆಗೆ ಚರ್ಚಿಸಲಾಗಿದೆ.