ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ಟ್ರಿಪಲ್ ತಲಾಖ್ ಪ್ರಕರಣದ ಅರ್ಜಿದಾರರಾದ ಕೋಲ್ಕತಾದ ಬಿಜೆಪಿ ಸದಸ್ಯೆ ಇಶ್ರತ್ ಜಹಾನ್ ಅವರು ಹಿಜಾಬ್‌ನಲ್ಲಿ ಹನುಮಾನ್ ಚಾಲೀಸಾ ಪಠಣಕ್ಕೆ ಹಾಜರಾಗಿದ್ದಕ್ಕಾಗಿ ಬೆದರಿಕೆ ಮತ್ತು ನಿಂದನೆಗೆ ಗುರಿಯಾಗಿರುವುದಾಗಿ ಆರೋಪಿಸಿ ಪೊಲೀಸ್ ರಿಗೆ ದೂರು ದಾಖಲಿಸಿದ್ದಾಳೆ.


COMMERCIAL BREAK
SCROLL TO CONTINUE READING

ಇಶ್ರತ್ ಜಹಾನ್ ಹೌರಾದ ಗೋಲಬಾರಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ, ತನ್ನ ಸೋದರ ಮಾವ ಮತ್ತು ಭೂಮಾಲೀಕರು ಹಿಂದೂ ಧಾರ್ಮಿಕ ಸಮಾರಂಭವೊಂದರಲ್ಲಿ ಭಾಗವಹಿಸಿದ್ದಕ್ಕಾಗಿ ಬೆದರಿಕೆ ಮತ್ತು ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಹೌರಾದ ಎಸಿ ಮಾರುಕಟ್ಟೆಯ ಮುಂದೆ ಬಿಜೆಪಿ ಆಯೋಜಿಸಿದ್ದ 'ಹನುಮಾನ್ ಚಾಲಿಸಾ ಪಾಥ್' ನಲ್ಲಿ ಭಾಗವಹಿಸಿದ್ದಾಗಿ ಹೇಳಿದ್ದಾರೆ. 


ಬುಧವಾರ ತನ್ನ ಮಗನನ್ನು ಶಾಲೆಯಿಂದ ಎತ್ತಿಕೊಂಡು ಮನೆಗೆ ಹಿಂದಿರುಗಿದ ನಂತರ ಸುಮಾರು 100 ಜನರು ತಮ್ಮನ್ನು ಸುತ್ತುವರೆದರು ಮತ್ತು ಹಿಜಾಬ್ ನಲ್ಲಿ ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಆಕ್ಷೇಪಿಸಿದರು ಎಂದು ಜಹಾನ್ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ."ಮನೆಯಿಂದ ನಾನು ಸ್ವಇಚ್ಚೆಯಿಂದ ಹೊರಹೋಗಬೇಕು, ಇಲ್ಲದಿದ್ದರೆ ತಮ್ಮನ್ನು ಬಲವಂತವಾಗಿ ಮನೆಯಿಂದ ಹೊರಗೆ ತಳ್ಳಲಾಗುತ್ತದೆ ಎಂದು ಹೇಳಿದ್ದಾರೆ.ನನಗೆ ಮಾರಣಾಂತಿಕ ಬೆದರಿಕೆಗಳು ಬರುತ್ತಿವೆ. ಆದ್ದರಿಂದ ನಾನು ರಕ್ಷಣೆ ಕೋರುತ್ತೇನೆ. ಮಗನೊಂದಿಗೆ ನಾನು ಏಕಾಂಗಿಯಾಗಿ ವಾಸಿಸುತ್ತಿದ್ದೇನೆ.ನನಗೆ ಯಾವಾಗ ಬೇಕಾದಾಗ ಏನಾದರೂ ಆಗಬಹುದು" ಎಂದು ಇಶ್ರತ್ ಜಹಾನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.


ಈಗ ಈ ದೂರಿನ ವಿಚಾರವಾಗಿ ಪ್ರತಿಕ್ರಿಯಿಸಿರುವ ಗೊಳಬಾರಿ ಪೋಲಿಸ್ ಠಾಣೆಯ ಅಧಿಕಾರಿ 'ಈಗ ನಾವು ದೂರಿನ ಬಗ್ಗೆ ತನಿಖೆ ಪ್ರಾರಂಭಿಸಿದ್ದೇವೆ ಮತ್ತು ಅಗತ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ. "ದೇಶದ ಉತ್ತಮ ಪ್ರಜೆಯಾಗಿ ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ. ನಾನು ಜಾತ್ಯತೀತ ವ್ಯಕ್ತಿಯಾಗಿದ್ದೇನೆ. ಆದಾಗ್ಯೂ, ನನ್ನ ಕುಟುಂಬ ಸದಸ್ಯರಿಂದ ನಾನು ಜೀವ ಬೆದರಿಕೆಗಳನ್ನು ಎದುರಿಸುತ್ತಿದ್ದೇನೆ" ಎಂದು ಇಶ್ರತ್ ಜಹಾನ್ ಆರೋಪಿಸಿದ್ದಾರೆ.