ನವದೆಹಲಿ: ಚಂದ್ರಯಾನ -2 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯುವ ಕೊನೆಯ ಕ್ಷಣದಲ್ಲಿ ಸಂಪರ್ಕ ಕಡಿದುಕೊಂಡಿದ್ದು, ಐತಿಹಾಸಿಕ ಕ್ಷಣಕ್ಕೆ ಕುತೂಹಲದಿಂದ ಕಾಯುತ್ತಿದ್ದವರಿಗೆ ನಿರಾಸೆ ಉಂಟಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಮುಖ್ಯಸ್ಥ ಕೆ.ಶಿವನ್ ಹೊರಡಿಸಿದ ಹೇಳಿಕೆಯಲ್ಲಿ ಚಂದ್ರಯಾನ -2 ಚಂದ್ರನ ಮೇಲ್ಮೈಯಿಂದ 2.1 ಕಿ.ಮೀ ದೂರದಲ್ಲಿ ಸಂಪರ್ಕವನ್ನು ಕಳೆದುಕೊಂಡಿದೆ. ಡೇಟಾವನ್ನು ಅಧ್ಯಯನ ಮಾಡಲಾಗುತ್ತಿದೆ. ಆದಾಗ್ಯೂ, ನಿರೀಕ್ಷೆಗಳು ಇನ್ನೂ ಹಾಗೇ ಇವೆ ಎಂದು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ವಿಜ್ಞಾನಿಗಳಿಗೆ ವಿಶ್ವಾಸ ತುಂಬಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, 'ಜೀವನದಲ್ಲಿ ಏರಿಳಿತಗಳು ಇದ್ದದ್ದೇ. ಸಂಪರ್ಕ ಕಡಿದುಕೊಂಡಾಗ ಎಲ್ಲರಿಗೂ ಬೇಸರವಾಗಿರುವುದನ್ನು ನಾನು ನೋಡಿದೆ. ಇದು ಕ್ಷುಲ್ಲಕ ಸಾಧನೆಯಲ್ಲ. ದೇಶವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ, ನಿಮ್ಮ ಕಠಿಣ ಪರಿಶ್ರಮ ನಮಗೆ ಬಹಳಷ್ಟು ಕಲಿಸಿದೆ. 'ಹೋಪ್ ಫಾರ್ ದಿ ಬೆಸ್ಟ್'. ನೀವು ದೇಶಕ್ಕೆ ಸೇವೆ ಸಲ್ಲಿಸಿದ್ದೀರಿ, ವಿಜ್ಞಾನ ಸೇವೆ ಮಾಡಿದ್ದೀರಿ, ಮಾನವಕುಲಕ್ಕೆ ಸೇವೆ ಸಲ್ಲಿಸಿದ್ದೀರಿ. ನಿಮ್ಮ ನಾಯಕತ್ವದಲ್ಲಿ ನಾವು ಸಾಧನೆ ಮಾಡಲಿದ್ದೇವೆ. ಸಂಪರ್ಕವನ್ನು ಮರುಸಂಪರ್ಕಿಸಿದ ತಕ್ಷಣ, ಅದು ಇನ್ನೂ ಹೆಚ್ಚಿನ ಸಾಧನೆಯಾಗುತ್ತದೆ ಎಂದು ನಾವು ಭಾವಿಸುತ್ತೇವೆ. ನಾನು ನಿಮ್ಮೆಲ್ಲರೊಂದಿಗಿದ್ದೇನೆ ಎಂದು ಧೈರ್ಯ ತುಂಬಿದ್ದಾರೆ.



ಲ್ಯಾಂಡರ್ ವಿಕ್ರಮ್ ಇಂದು ಮುಂಜಾನೆ 1.55 ಕ್ಕೆ ಚಂದ್ರನ ಮೇಲ್ಮೈ ಮೇಲೆ ಇಳಿಯಬೇಕಿತ್ತು, ಆದರೆ ಅದರ ಸಮಯವನ್ನು ಮಧ್ಯಾಹ್ನ 1.45 ಕ್ಕೆ ಇಳಿಯಲಿದೆ ಎಂದು ಹೇಳಲಾಗಿತ್ತು. ಆದರೆ, ಬಳಿಕ ಲ್ಯಾಂಡರ್ ವಿಕ್ರಮ್‌ನ ಸಂಪರ್ಕ ಕಡಿದುಕೊಂಡಿದೆ. ಈ ಮಿಷನ್ ಇನ್ನೂ ಕಾರ್ಯಾಚರಣೆಯಲ್ಲಿದ್ದು ಇಸ್ರೋ ಅದನ್ನು ಮತ್ತೆ ಸಂಪರ್ಕಿಸಲು ಪ್ರಯತ್ನಿಸುತ್ತಿದೆ.


ಚಂದ್ರಯಾನ 2 ರ ಅಂತಿಮ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಶುಕ್ರವಾರ ತಡರಾತ್ರಿ ಪ್ರಧಾನಿ ಮೋದಿ ಅವರು ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿದ್ದರು. ಪೀಣ್ಯದ ಇಸ್ರೊ ಕೇಂದ್ರದಲ್ಲಿ ಶನಿವಾರ ಚಂದ್ರಯಾನ-2 ವ್ಯೋಮ ನೌಕೆಯ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿಯಂತೆ ಇಳಿದರೂ, ಸಂಪರ್ಕ ಕಳೆದುಕೊಂಡು ಅದರಿಂದ ಸಂದೇಶ ಬಾರದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಈ ಸಾಂತ್ವನದ ಮಾತುಗಳನ್ನು ಹೇಳಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಅವರೊಂದಿಗೆ ಫೋಟೋ ತೆಗೆಸಿಕೊಂಡರು.