ISRO Recruitment 2021: 10 ಮತ್ತು 12ನೇ ತರಗತಿ ಪಾಸಾದವರಿಗೆ ISROದಲ್ಲಿ ಕೆಲಸ ಮಾಡುವ ಸುವರ್ಣಾವಕಾಶ ; ಅರ್ಜಿ ಸಲ್ಲಿಸಲು ನಾಳೆಯೇ ಕೊನೆ ದಿನ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಫೈರ್‌ಮ್ಯಾನ್ ಎ, ಫಾರ್ಮಸಿಸ್ಟ್ ಎ ಮತ್ತು ಲ್ಯಾಬ್ ಟೆಕ್ನಿಷಿಯನ್ ಎ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ISRO Recruitment 2021: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ (VSSC) ಫೈರ್‌ಮ್ಯಾನ್ ಎ, ಫಾರ್ಮಸಿಸ್ಟ್ ಎ ಮತ್ತು ಲ್ಯಾಬ್ ಟೆಕ್ನಿಷಿಯನ್ ಎ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನಾಂಕ. ಈ ಹುದ್ದೆಗಳಿಗೆ ಇನ್ನೂ ಅರ್ಜಿ ಸಲ್ಲಿಸದ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಾಳೆಯೊಳಗೆ ಅರ್ಜಿ ಸಲ್ಲಿಸಬಹುದು .
ಆಸಕ್ತರು ಇಸ್ರೋ (ISRO) ಅಧಿಕೃತ ವೆಬ್‌ಸೈಟ್ vssc.gov.in ಅಥವಾ isro.gov.in ಗೆ ಭೇಟಿ ನೀಡಿ ನಾಳೆ ಅಂದರೆ 05 ಏಪ್ರಿಲ್ 2021 ರೊಳಗೆ ಅರ್ಜಿ ಸಲ್ಲಿಸಬಹುದು. ಇದಲ್ಲದೆ, https://rmt.vssc.gov.in/RMT315/applyV1.jsp ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕವೂ ಅಭ್ಯರ್ಥಿಗಳು ಈ ಹುದ್ದೆಗಳಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದು. ಅಲ್ಲದೆ, ttps://rmt.vssc.gov.in/RMT315/advt315.html, ಲಿಂಕ್ ಕ್ಲಿಕ್ ಮಾಡುವ ಮೂಲಕ ಅಧಿಕೃತ ಅಧಿಸೂಚನೆಯನ್ನು ನೋಡಬಹುದು. ಈ ನೇಮಕಾತಿ ಪ್ರಕ್ರಿಯೆಯಡಿ ಒಟ್ಟು 13 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ : Chhattisgarh Naxal Attack Latest Updates: ಬಿಜಾಪುರ್-ಸುಕ್ಮಾ ಎನ್ಕೌಂಟರ್ ನಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ 22ಕ್ಕೆ ಏರಿಕೆ
ಇಸ್ರೋ ನೇಮಕಾತಿ 2021 ರ ಪ್ರಮುಖ ದಿನಾಂಕಗಳು :
ಆನ್‌ಲೈನ್ (Online)ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22 ಮಾರ್ಚ್ 2021
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05 ಏಪ್ರಿಲ್ 2021
ಇಸ್ರೋ ನೇಮಕಾತಿ 2021 ರ ಹುದ್ದೆಯ ವಿವರಗಳು:
ಫಾರ್ಮಾಸಿಸ್ಟ್ ಎ: 03 ಹುದ್ದೆಗಳು
ಲ್ಯಾಬ್ ತಂತ್ರಜ್ಞ ಎ: 02 ಹುದ್ದೆಗಳು
ಫೈರ್‌ಮ್ಯಾನ್ ಎ: 08 ಹುದ್ದೆಗಳು
ಇಸ್ರೋ ನೇಮಕಾತಿ 2021 ಗೆ ಅರ್ಹತಾ ಮಾನದಂಡ:
ಫಾರ್ಮಸಿಸ್ಟ್ ಎ: ಅಭ್ಯರ್ಥಿಯು 10/12 ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರಬೇಕು ಮತ್ತು ಫಾರ್ಮಸಿಯಲ್ಲಿ (Pharmacy) ಪ್ರಥಮ ವಿಭಾಗದಲ್ಲಿ ಡಿಪ್ಲೊಮಾ ಪಡೆದಿರಬೇಕು.
ಲ್ಯಾಬ್ ತಂತ್ರಜ್ಞ ಎ: ಅಭ್ಯರ್ಥಿಯು 10/12 ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನದಲ್ಲಿ ಪ್ರಥಮ ವಿಭಾಗದಲ್ಲಿ ಡಿಪ್ಲೊಮಾ (Diploma) ಹೊಂದಿರಬೇಕು.
ಫೈರ್‌ಮ್ಯಾನ್ ಎ: ಅಭ್ಯರ್ಥಿಯು 10/12 ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ನಿಗದಿತ ದೈಹಿಕ ಸಾಮರ್ಥ್ಯ ಮತ್ತು ದೈಹಿಕ ದಕ್ಷತೆ ಪರೀಕ್ಷಾ ಮಾನದಂಡಗಳನ್ನು ಪೂರೈಸಬೇಕು.
ಇದನ್ನೂ ಓದಿ : Corona ನಿಯಂತ್ರಣ ಹೇಗೆ? ಪ್ರಧಾನಿ ಮೋದಿಯಿಂದ ಉನ್ನತ ಮಟ್ಟದ ಸಭೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.