ನವದೆಹಲಿ: ಭಾರತೀಯ ಸೇನಾ ಪಡೆಗೆ ಮುಖ್ಯವಾಗಿ ವಾಯುಪಡೆಗೆ ನೆರವಾಗುವ GSAT-7A ಉಪಗ್ರಹವನ್ನು ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಯಶಸ್ವಿಯಾಗಿ ಉಡಾವಣೆ ಮಾಡಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಭಿವೃದ್ಧಿಪಡಿಸಿರುವ 2,250 ಕೆ.ಜಿ ತೂಕದ ಈ ಉಪಗ್ರಹ, ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್‌ ಧವನ್‌ ಬಾಹ್ಯಕಾಶ ಕೇಂದ್ರದಿಂದ ಬುಧವಾರ ಸಂಜೆ 4.10ಕ್ಕೆ ಈ ಉಪಗ್ರಹ ಉಡಾವಣೆಯಾಯಿತು.  ಜಿಎಸ್‌ಎಲ್‌ವಿ-ಎಫ್‌11 ರಾಕೆಟ್‌ ಮೂಲಕ ಇದನ್ನು ಅಂತರಿಕ್ಷಕ್ಕೆ ಸೇರಿಸಲಾಗುವುದು.


ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸುವ ಈ ಉಪಗ್ರಹವು  ಭಾರತೀಯ ಭೂ ಪ್ರದೇಶದಲ್ಲಿ ಗ್ರಾಹಕರಿಗೆ ಕ್ಯು-ಬ್ಯಾಂಡ್ ಸೇವೆಯನ್ನು ಕಲ್ಪಿಸುವಲ್ಲಿ ನೆರವಾಗಲಿದೆ. ಅಲ್ಲದೆ ಈ ಉಪಗ್ರಹವು ಕೆ-ಯು ಬ್ಯಾಂಡ್ ಸಂವಹನ ಸಾಮರ್ಥ್ಯಗಳನ್ನು ಒದಗಿಸುತ್ತದೆ. 


GSAT-7A ಏರ್ ಫೋರ್ಸ್ (ಐಎಎಫ್) ಗೆ ಸಮರ್ಪಿತವಾಗಿದೆ. ರೇಡಾರ್ ಸ್ಟೇಷನ್ಸ್ ಗಳ, ಏರ್ ಬೊರ್ನ್ ವಾರ್ನಿಂಗ್ ಅಂಡ್ ಕಂಟ್ರೋಲ್ ಏರ್ ಕ್ರಾಫ್ಟ್ ಮತ್ತು ವಾಯುನೆಲೆಗಳ ಮಧ್ಯೆ ಸುಧಾರಿತ ಸಂಪರ್ಕ ಜಾಲ ಒದಗಿಸಲು ಸೇನೆಗೆ ನೆರವಾಗಲಿದೆ ಎಂದು ಇಸ್ರೋ ತಿಳಿಸಿದೆ.