ನವದೆಹಲಿ: ಇನ್ಮುಂದೆ ತೆರಿಗೆ ಇಲಾಖೆಯಿಂದ ಆದಾಯ ತೆರಿಗೆ ಪಾವತಿದಾರರಿಗೆ ನೇರ ನೋಟೀಸ್ ಕಳುಹಿಸುವ ಯೋಜನೆಯನ್ನು ಸರ್ಕಾರ ಕೈಬಿಟ್ಟಿದ್ದು, ಇ-ಮೌಲ್ಯಮಾಪನ ಯೋಜನೆಯನ್ನು ಸಿದ್ಧಪಡಿಸಿದೆ. 


COMMERCIAL BREAK
SCROLL TO CONTINUE READING

ರಾಷ್ಟ್ರೀಯ ಇ-ಮೌಲ್ಯಮಾಪನ ಯೋಜನೆಯಡಿಯಲ್ಲಿ ಇ-ಮೌಲ್ಯಮಾಪನ ಕೇಂದ್ರಗಳನ್ನು ಸ್ಥಾಪಿಸಿ, ಅದರ ಮೂಲಕ ಆದಾಯ ತೆರಿಗೆ ಪಾವತಿದಾರರಿಗೆ ನೋಟಿಸ್ ಕಳುಹಿಸಲು ಸರ್ಕಾರ ನಿರ್ಧರಿಸಿದೆ.


ಪ್ರಸ್ತುತ ವ್ಯವಸ್ಥೆಯಲ್ಲಿ, ಆದಾಯ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಇಲಾಖೆಯಿಂದ ನೇರ ನೋಟಿಸ್ ಕಳುಹಿಸಲಾಗುತ್ತಿದ್ದು, ತೆರಿಗೆ ಪಾವತಿದಾರರು ಈ ಸೂಚನೆಗೆ ಉತ್ತರಿಸಬೇಕು. ಆದರೆ ಈಗ ಇ-ಮೌಲ್ಯಮಾಪನ ಕೇಂದ್ರವು ತೆರಿಗೆ ಪಾವತಿದಾರ ಮತ್ತು ಆದಾಯ ತೆರಿಗೆ ಇಲಾಖೆಯ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲಿದ್ದು, ತೆರಿಗೆ ಪಾವತಿದಾರರಿಗೆ ಸರ್ಕಾರದ ಪರವಾಗಿ ನೋಟಿಸ್ ಜಾರಿ ಮಾಡಲಿದೆ. 


ಆದಾಯ ತೆರಿಗೆಗೆ ಸಂಬಂಧಿಸಿದ ವಿಷಯಗಳ ಈ ಕೇಂದ್ರವು ಮೊದಲು ತನಿಖೆ ನಡೆಸಿ, ಬಳಿಕ ಸಂಬಂಧಪಟ್ಟ ತೆರಿಗೆ ಪಾವತಿದಾರರಿಂದ ನೋಟಿಸ್ ಪಡೆಯಲಾಗುತ್ತದೆ. ಆದಾಯ ಪಾವತಿಸುವವರು ತೃಪ್ತಿಕರ ಪ್ರತಿಕ್ರಿಯೆ ಪಡೆಯದಿದ್ದರೆ ತೆರಿಗೆ ಪಾವತಿದಾರರ ವಿರುದ್ಧವೂ ಕ್ರಮ ತೆಗೆದುಕೊಳ್ಳಬಹುದು.