ಮುಂಬೈ: ದೇಶದ ಆರ್ಥಿಕ ಹಿಂಜರಿಕೆಗೆ ಸಂಬಂಧಿಸಿದಂತೆ ಶಿವಸೇನೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೇಲೆ ದಾಳಿ ಮಾಡಿದೆ. ಈ ಕುರಿತು ಶಿವಸೇನೆ ಮುಖವಾಣಿ 'ಸಾಮ್ನಾ'ದಲ್ಲಿ ಬರೆಯಲಾಗಿದ್ದು, 370 ನೇ ವಿಧಿಯನ್ನು ತೆಗೆದುಹಾಕುವ ಮೂಲಕ ಸರ್ಕಾರ ದಿಟ್ಟ ಹೆಜ್ಜೆ ಮುಂದಿಟ್ಟಿದೆ ಮತ್ತು ಅದರ ಬಗ್ಗೆ ದೇಶವು ಸಂತೋಷವಾಗಿದೆ. ಆದರೆ ಕಾಶ್ಮೀರ ಮತ್ತು ಆರ್ಥಿಕ ಖಿನ್ನತೆ ಎರಡು ವಿಭಿನ್ನ ವಿಷಯಗಳಾಗಿವೆ. ಕಾಶ್ಮೀರದ ರಸ್ತೆಯಲ್ಲಿರುವ ಬಂಡುಕೋರರನ್ನು ಗನ್‌ನ ಬಲದಿಂದ ಹಿಂದಕ್ಕೆ ತಳ್ಳಬಹುದು, ಆದರೆ ಆರ್ಥಿಕ ಹಿಂಜರಿತಕ್ಕೆ ನೀವು ಬಂದೂಕು ಹಿಡಿದು ಸರಿಪಡಿಸಲು ಸಾಧ್ಯವಾಗುತ್ತದೆಯೇ? ಆರ್ಥಿಕ ಹಿಂಜರಿತದಿಂದಾಗಿ ನಿರುದ್ಯೋಗ ಹೆಚ್ಚಾಗುತ್ತದೆ ಮತ್ತು ಜನರು ಹಸಿವಿನಿಂದಾಗಿ ರಸ್ತೆಗೆ ಬರುತ್ತಾರೆ. ಆಗ ನೀವು ಅವರನ್ನೂ ಶೂಟ್ ಮಾಡುತ್ತೀರಾ? ಆರ್ಥಿಕ ಹಿಂಜರಿತದ ಬಗ್ಗೆ ಭಕ್ತರು ಎಷ್ಟೇ ತಲೆಕೆಳಗಾಗಿ ಹೇಳಿದರೂ, ಸತ್ಯ ಮರೆನಾಚಲಾಗದು. ಮೌನಿ ಬಾಬಾ ಮನಮೋಹನ್ ಅವರು ಸೌಮ್ಯ ಪದಗಳಲ್ಲಿ ಹೇಳಿದ ಸತ್ಯವೂ ಸ್ಫೋಟಗೊಂಡಿದೆ…


COMMERCIAL BREAK
SCROLL TO CONTINUE READING

.... ಆರ್ಥಿಕತೆಗೆ ಹೊಡೆತ ಬಿದ್ದಿದೆ. ದೇಶದ ಆರ್ಥಿಕ ನಾಡಿಮಿಡಿತವನ್ನು ಹಿಡಿದಿಟ್ಟುಕೊಂಡು ರಾಜಕೀಯ ವ್ಯವಸ್ಥೆಯನ್ನು ಅನಿಯಂತ್ರಿತವಾಗಿಸುವುದು ಅಪಾಯಕಾರಿ. ಉದ್ಯಮ ಮತ್ತು ಉದ್ಯಮಿಗಳ ಕುತ್ತಿಗೆಗೆ ಚಾಕು ಹಿಡಿಯುವುದರಿಂದ(ಉದ್ಯೋಗ ಕಡಿತ) ರಾಜಕೀಯ ಪಕ್ಷಗಳಿಗೆ ತಕ್ಷಣದ ಲಾಭಗಳು ದೊರೆಯುತ್ತವೆ, ಆದರೆ ದೇಶ ಕುಸಿಯುತ್ತಿದೆ ಎಂದು ಶಿವಸೇನೆ ಎಚ್ಚರಿಸಿದೆ.


'ಕಳೆದ ಹಲವು ವರ್ಷಗಳಿಂದ ಆರ್ಥಿಕತೆಯ ಸಂಬಂಧವು ಪಕ್ಷದ ನಿಧಿಗಳು(ಪಾರ್ಟಿ ಫಂಡ್), ಚುನಾವಣೆಗಳನ್ನು ಗೆಲ್ಲುವುದು, ಕುದುರೆ ವ್ಯಾಪಾರ ಇತ್ಯಾದಿಗಳ ಮಟ್ಟಿಗೆ ಸೀಮಿತಗೊಂಡಿದೆ. ಇದು 'ದೇಶದ ವ್ಯವಸ್ಥೆಯನ್ನು ನಾಶಪಡಿಸುತ್ತಿದೆ' ಎಂದು ಶಿವಸೇನೆ ತನ್ನ ಮುಖವಾಣಿಯಲ್ಲಿ ಬರೆದಿದ್ದಾರೆ. 


"ಆರ್ಥಿಕ ಹಿಂಜರಿತದ ಬಗ್ಗೆ ರಾಜಕೀಯ ಮಾಡಬೇಡಿ ಮತ್ತು ತಜ್ಞರ ಸಹಾಯದಿಂದ ದೇಶಕ್ಕೆ ಸಹಾಯ ಮಾಡಿ, ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ಅವರಂತಹ ಬುದ್ಧಿವಂತ ವ್ಯಕ್ತಿ ಈ ಕರೆ ನೀಡಿದ್ದಾರೆ. ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವುದು ರಾಷ್ಟ್ರದ ಹಿತಾಸಕ್ತಿ" ಎಂದು ಸಾಮ್ನಾ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. 


'ಮನಮೋಹನ್ ಸಿಂಗ್ ಅವರು ದೇಶದಲ್ಲಿ ಆರ್ಥಿಕ ಕುಸಿತಕ್ಕೆ ನೋಟು ಅಮಾನೀಕರಣ ಮತ್ತು ಜಿಎಸ್ಟಿ ಮುಂತಾದ ನಿರ್ಧಾರಗಳು ಕಾರಣವಾಗುತ್ತಿವೆ ಎಂದು ಹೇಳುತ್ತಿದ್ದಾರೆ. ದೇಶದ ಬೆಳವಣಿಗೆಯ ದರ ಕುಸಿಯುತ್ತಿದೆ. ಉತ್ಪಾದನಾ ಕ್ಷೇತ್ರದ ಬೆಳವಣಿಗೆ ಕಡಿಮೆಯಾಗಿದೆ ಮತ್ತು ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಆದರೂ ಈ ಪರಿಸ್ಥಿತಿ ಸರ್ಕಾರಕ್ಕೆ ಭಯ ಹುಟ್ಟಿಸುವಂತಿಲ್ಲ, ಅಂತಹ ಪರಿಸ್ಥಿತಿ ಆಘಾತಕಾರಿ. ದೇಶದ ಮೊದಲ ಮಹಿಳಾ ರಕ್ಷಣಾ ಸಚಿವೆ ಸೀತಾರಾಮನ್ ಅವರನ್ನು ಮೊದಲು ಪ್ರಶಂಸಿಸಲಾಯಿತು. ಆದರೆ ಒಬ್ಬ ಸಮರ್ಥ ಮಹಿಳೆ ಮತ್ತು ದೇಶದ ಆರ್ಥಿಕತೆಯನ್ನು ಮತ್ತೆ ಹಾದಿಗೆ ತರುವುದರ ನಡುವೆ ವ್ಯತ್ಯಾಸವಿದೆ' .... ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.


ಅಷ್ಟೇ ಅಲ್ಲದೆ, ನಮ್ಮ ಮೊದಲ ಮಹಿಳಾ ಹಣಕಾಸು ಮಂತ್ರಿ ಅವರ ಪ್ರಕಾರ, ಎಲ್ಲಿಯೂ ಯಾವುದೇ ಆರ್ಥಿಕ ಕುಸಿತವನ್ನು ಕಾಣುವುದಿಲ್ಲ ಮತ್ತು ದೇಶದಲ್ಲಿ ಎಲ್ಲವೂ ಸಮರ್ಥವಾಗಿದೆ. ಆರ್ಥಿಕ ಹಿಂಜರಿತದ ಬಗ್ಗೆ ದೇಶದ ಮೊದಲ ಮಹಿಳಾ ವಿತ್ತ ಸಚಿವರು ಹೆಚ್ಚಾಗಿ ಮೌನವಾಗಿರುತ್ತಾರೆ ಎಂದು ಟೀಕಿಸಲಾಗಿದೆ.