ಈ ಬಾರಿ ಬಿಜೆಪಿ 280 ಸ್ಥಾನ ಗಳಿಸುವುದು ಕಷ್ಟಕರ- ಶಿವಸೇನಾ ವಕ್ತಾರ ಸಂಜಯ್ ರಾವತ್
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಗಳಿಸುವುದು ಕಷ್ಟ ಎಂದು ಶಿವಸೇನಾ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.ಬಿಜೆಪಿ ನಾಯಕ ರಾಮ್ ಮಾಧವ್ ಈ ಬಾರಿ ಬಿಜೆಪಿ ಎನ್ ಡಿಎ ಮೈತ್ರಿಕೂಟದ ಸಹಾಯದಿಂದ ಸರ್ಕಾರ ರಚಿಸಲಿದೆ ಎಂದು ಹೇಳಿದ್ದರು.ಈ ಹಿನ್ನಲೆಯಲ್ಲಿ ಈಗ ಸಂಜಯ್ ರಾವತ್ ಹೇಳಿಕೆ ಬಂದಿದೆ.
ನವದೆಹಲಿ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಗಳಿಸುವುದು ಕಷ್ಟ ಎಂದು ಶಿವಸೇನಾ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.ಬಿಜೆಪಿ ನಾಯಕ ರಾಮ್ ಮಾಧವ್ ಈ ಬಾರಿ ಬಿಜೆಪಿ ಎನ್ ಡಿಎ ಮೈತ್ರಿಕೂಟದ ಸಹಾಯದಿಂದ ಸರ್ಕಾರ ರಚಿಸಲಿದೆ ಎಂದು ಹೇಳಿದ್ದರು. ಈ ಹಿನ್ನಲೆಯಲ್ಲಿ ಈಗ ಸಂಜಯ್ ರಾವತ್ ಹೇಳಿಕೆ ಬಂದಿದೆ.
"ರಾಮ್ ಮಾಧವ್ ಹೇಳಿರುವುದರಲ್ಲಿ ಸರಿ ಇದೆ. ಎನ್ ಡಿ ಎ ಮುಂದಿನ ಬಾರಿ ಸರ್ಕಾರ ರಚನೆ ಮಾಡಲಿದೆ. ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಸದ್ಯದ ಪರಿಸ್ಥಿತಿ ನೋಡಿದಲ್ಲಿ ಬಿಜೆಪಿ 280-282 ರ ಗಡಿ ತಲುಪುವುದು ಕಷ್ಟ. ಆದರೆ ಎನ್ ಡಿ ಎ ಒಕ್ಕೂಟ ಬಹುಮತದ ಗಡಿ ದಾಟಲಿದೆ" ಎಂದು ಸಂಜಯ್ ರಾವತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ನರೇಂದ್ರ ಮೋದಿ ಪ್ರಧಾನಿಯಾದರೆ ತಮಗೆ ಸಂತೋಷವೆಂದು ತಿಳಿಸಿದರು.
ಬಿಜೆಪಿ ನಾಯಕ ರಾಮ್ ಮಾಧವ್ ಬ್ಲೂಮ್ ಬರ್ಗ್ ಗೆ ನೀಡಿರುವ ಸಂದರ್ಶನದಲ್ಲಿ " ಒಂದು ವೇಳೆ ನಮಗೆ 271 ಸ್ಥಾನಗಳು ದೊರೆತರೆ ಸಂತೋಷ, ಆದರೆ ಎನ್ಡಿಎ ಸಹಾಯದಿಂದ ನಾವು ಪೂರ್ಣ ಬಹುಮತವನ್ನು ಗಳಿಸುತ್ತೇವೆ" ಎಂದು ಹೇಳಿದ್ದರು. ಸದ್ಯ ಲೋಕಸಭೆಯಲ್ಲಿ ಶಿವಸೇನಾ ಪಕ್ಷವು 18 ಸ್ಥಾನಗಳನ್ನು ಹೊಂದಿದ್ದು. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಭಾಗವಾಗಿದೆ.