ಚೆನ್ನೈ: ಆದಾಯ ತೆರಿಗೆ (Income Tax) ಇಲಾಖೆಯ ವಿಶೇಷ ತನಿಖಾ ತಂಡ (ಎಸ್‌ಐಟಿ) ಸೋಮವಾರ ಬೆಳಿಗ್ಗೆ ಎಐಎಡಿಎಂಕೆ (AIADMK) ಶಾಸಕ ಆರ್. ಚಂದ್ರಶೇಖರ್ (R Chandrashekhar) ಅವರ ಚಾಲಕ ಅಲಗರಸಾಮಿ ಮನೆಯ ಮೇಲೆ ದಾಳಿ ನಡೆಸಿ 1 ಕೋಟಿ ರೂ. ಹಣವನ್ನು ವಶಕ್ಕೆ ಪಡೆದಿದೆ. ಇದಲ್ಲದೆ ಶಾಸಕರ ಮತ್ತಿಬ್ಬರು ಸಹಚರರಾದ ತಂಗಪಾಂಡಿ ಮತ್ತು ಆನಂದ್ ಎಂಬುವವರ ನಿವಾಸಗಳ ಮೇಲೂ ದಾಳಿ ನಡೆಸಲಾಗಿದೆ.


COMMERCIAL BREAK
SCROLL TO CONTINUE READING

ಎಐಎಡಿಎಂಕೆ (AIADMK) ಶಾಸಕ ಆರ್. ಚಂದ್ರಶೇಖರ್ (R Chandrasekar) ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ಮನಪ್ಪರೈ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅಲಗರಸಾಮಿ ಕಳೆದ ಒಂಬತ್ತು ವರ್ಷಗಳಿಂದ ಶಾಸಕರೊಂದಿಗೆ ಕೆಲಸ ಮಾಡುತ್ತಿದ್ದು ಅವರ ನಿವಾಸದಲ್ಲಿ 500 ರೂ. ಮುಖಬೆಲೆಯ ಲೆಕ್ಕವಿಲ್ಲದ 1 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ. 


2008 ರಿಂದ ಮನಪ್ಪರೈ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಆರ್. ಚಂದ್ರಶೇಖರ್ ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu Election 2021) ಮತ್ತೆ ಇದೇ ಕ್ಷೇತ್ರದಿಂದ ಎಐಎಡಿಎಂಕೆ (AIADMK) ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.  ಇದೇ ಕ್ಷೇತ್ರದಲ್ಲಿ ಮಣಿತನಾಯ ಮಕ್ಕಲ್ ಕಚ್ಚಿಯ (ಎಂಕೆಎಂ) ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಅಬ್ದುಲ್ ಸಮದ್ ಅವರು ಚಂದ್ರಶೇಖರ್ ವಿರುದ್ಧ  ಡಿಎಂಕೆ ಮೈತ್ರಿ ಜೊತೆಗೆ ಸ್ಪರ್ಧಿಸುತ್ತಿದ್ದಾರೆ.


ಇದನ್ನೂ ಓದಿ - Sharad Pawar Health Update: ಹೊಟ್ಟೆ ನೋವು ಹಿನ್ನೆಲೆ ಶರದ್ ಪವಾರ್ ಆಸ್ಪತ್ರೆಗೆ ದಾಖಲು


ಚುನಾವಣಾ ದಿನಾಂಕಗಳನ್ನು ಘೋಷಿಸಿದಾಗಿನಿಂದ, ತಮಿಳುನಾಡಿನ ವಿವಿಧ ಭಾಗಗಳಿಂದ ಬೃಹತ್ ಮೊತ್ತದ ಹಣವನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮಾರ್ಚ್ 15 ರಂದು ಮಕ್ಕಲ್ ನಿಧಿ ಮಾಯಂ ಖಜಾಂಚಿಯ ಕಚೇರಿ ಮತ್ತು ನಿವಾಸದಿಂದ 11.5 ಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ.


ಇದನ್ನೂ ಓದಿ - Gadchiroli Naxal Encounter: ಮಹಾರಾಷ್ಟ್ರದ ಗಡಚಿರೋಲಿಯಲ್ಲಿ ಪೊಲೀಸರಿಗೆ ಭಾರಿ ಯಶಸ್ಸು, ಎನ್ಕೌಂಟರ್ ನಲ್ಲಿ ಐವರು ನಕ್ಸಲರ ಹತ್ಯೆ


ತಮಿಳುನಾಡು ಚುನಾವಣಾ ದಿನಾಂಕ:
ತಮಿಳುನಾಡಿನಲ್ಲಿ ಏಪ್ರಿಲ್ 6 ರಂದು ವಿಧಾನಸಭೆಯ 234 ಸ್ಥಾನಗಳಲ್ಲಿ ಮತದಾನ ನಡೆಯಲಿದೆ. ಮೇ 2 ರಂದು ಮತ ಎಣಿಕೆ ನಡೆಯಲಿದೆ. ಈ ಬಾರಿ ಕೇವಲ ಒಂದು ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ.  ಇದರೊಂದಿಗೆ ಮತದಾನದ ಸಮಯವನ್ನೂ ಒಂದು ಗಂಟೆ ಹೆಚ್ಚಿಸಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.