ನವದೆಹಲಿ: ರಫೇಲ್ ಯುದ್ದ ವಿಮಾನ ಖರೀದಿ ಒಪ್ಪಂದದಲ್ಲಿ ರಿಲಯನ್ಸ್ ಹೆಸರನ್ನು ಸೂಚಿಸಿದ್ದೆ ಮೋದಿ ಸರ್ಕಾರ ಎಂದು ಫ್ರಾನ್ಸ್ ಮಾಜಿ ಅಧ್ಯಕ್ಷ  ಹೊಲಾಂಡ್ ಹೇಳಿದ್ದಾರೆ.ಆ ಮೂಲಕ ಈಗ  ಅವರ ಹೇಳಿಕೆ ದೇಶದ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.


COMMERCIAL BREAK
SCROLL TO CONTINUE READING

ಫ್ರೆಂಚ್ ಸರ್ಕಾರಕ್ಕೆ  ಯಾವುದೇ ರೀತಿಯಿಂದಲೂ ಭಾರತೀಯ ಕಂಪನಿಗಳನ್ನು ಆಯ್ಕೆ ಅವಕಾಶವಿರಲಿಲ್ಲ ಆದರೆ ಮೋದಿ ಸರ್ಕಾರವೇ ಡಸಾಲ್ಟ್ ನ ದೇಶಿಯ ಪಾಲುದಾರಲಾಗಲು ರಿಲಯನ್ಸ್ ಹೆಸರನ್ನು ಸೂಚಿಸಿತು.ಇದ್ದರಿಂದಾಗಿ ನಂತರ ನಮಗೆ ಬೇರೆ ಕಂಪನಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ಅವಕಾಶವೇ ಇಲ್ಲದಂತಾಯಿತು ಎಂದು ಅವರು ತಿಳಿಸಿದ್ದಾರೆ.



ದಸಾಲ್ಟ್ ಮತ್ತು ರಿಲಯನ್ಸ್ ಪಾಲುದಾರಿಕೆಯೊಂದಿಗೆ ಒಟ್ಟು 58 ಸಾವಿರಕೋಟಿ ರೂ ಮೌಲ್ಯದ ಈ ಒಪ್ಪಂದ ಈಗ ಚರ್ಚೆಗೆ ಕಾರಣವಾಗಿದೆ. ಈ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಲವಾರು ಬಾರಿ ಸಾರ್ವಜನಿಕ ವೇದಿಕೆಗಳ ಮೇಲೆ ಮೋದಿ ಸರ್ಕಾರದ ವಿರುದ್ದ ಟೀಕಾ ಪ್ರಹಾರ ನಡೆಸಿದ್ದರು. 


ಈಗ ಸಂಪೂರ್ಣ ವರದಿಯನ್ನು ಮೀಡಿಯಾಪಾರ್ಟ್ ಎನ್ನುವ ಫ್ರೆಂಚ್ ಪಬ್ಲಿಕೇಶನ್ ಪ್ರಕಟಣೆ ಮಾಡಿದೆ.ಈಗ ಫ್ರಾನ್ಸ್ ಮಾಜಿ ಅಧ್ಯಕ್ಷರ ಹೇಳಿಕೆಯಿಂದ ಭಾರಿ ಮುಜುಗರಕ್ಕೆ ಒಳಗಾಗಿರುವ ಕೇಂದ್ರ ಸರ್ಕಾರದಿಂದ ಇದುವರೆಗೂ ಸಹ ಅಧಿಕೃತವಾದ ಹೇಳಿಕೆ ಬಿಡುಗಡೆ ಮಾಡಿಲ್ಲ ಎನ್ನಲಾಗಿದೆ.


ಈಗ ಕುರಿತಾಗಿ ಟ್ವೀಟ್ ಮೂಲಕ ಮೋದಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ " ಪ್ರಧಾನಿ ವೈಯಕ್ತಿಕವಾಗಿ ಮಾತುಕತೆ ನಡೆಸಿ ರಫೇಲ್ ಒಪ್ಪಂದವನ್ನು ಗುಪ್ತವಾಗಿ ಬದಲಾವಣೆ ಮಾಡಿದ್ದಾರೆ.ಇದರ ಬಹಿರಂಗಪಡಿಸಿದ ಹೊಲಾಂಡ್ ಅವರಿಗೆ ಧನ್ಯವಾದಗಳು.ಈಗ ನಮಗೆ ಮೋದಿ ಹೇಗೆ ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದವನ್ನು ಹೇಗೆ ಅಂಬಾನಿಗೆ ತಲುಪಿಸಿದ್ದಾರೆ ತಿಳಿದಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.