ಎಸ್ಪಿ ಟಿಕೆಟ್ ನಲ್ಲಿ ಪತ್ನಿ ಪೂನಂ ಸ್ಪರ್ಧೆ; ಪತಿಯಾಗಿ ಪತ್ನಿ ಬೆಂಬಲಿಸುವುದು ನನ್ನ ಕರ್ತವ್ಯ-ಶತ್ರುಘ್ನ ಸಿನ್ಹಾ
ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ-ಆರ್ಎಲ್ಡಿ ಅಭ್ಯರ್ಥಿಯಾಗಿ ಲಕ್ನೋದಿಂದ ಶತ್ರುಘ್ನ ಸಿನ್ಹಾ ಪತ್ನಿ ಪೂನಂ ಸ್ಪರ್ಧಿಸುತ್ತಿದ್ದಾರೆ. ಈಗ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಪತಿ ಶತ್ರುಘ್ನ ಸಿನ್ಹಾ ಕುಟುಂಬದ ಸದಸ್ಯರಿಗೆ ಬೆಂಬಲಿಸುವುದು ತಮ್ಮ ಕರ್ತವ್ಯವೆಂದು ತಿಳಿಸಿದ್ದಾರೆ.
ನವದೆಹಲಿ: ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ-ಆರ್ಎಲ್ಡಿ ಅಭ್ಯರ್ಥಿಯಾಗಿ ಲಕ್ನೋದಿಂದ ಶತ್ರುಘ್ನ ಸಿನ್ಹಾ ಪತ್ನಿ ಪೂನಂ ಸ್ಪರ್ಧಿಸುತ್ತಿದ್ದಾರೆ. ಈಗ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಪತಿ ಶತ್ರುಘ್ನ ಸಿನ್ಹಾ ಕುಟುಂಬದ ಸದಸ್ಯರಿಗೆ ಬೆಂಬಲಿಸುವುದು ತಮ್ಮ ಕರ್ತವ್ಯವೆಂದು ತಿಳಿಸಿದ್ದಾರೆ.
"ಕುಟುಂಬದ ಮುಖ್ಯಸ್ಥನಾಗಿ ಮತ್ತು ಪತಿಯಾಗಿ ನನ್ನ ಕುಟುಂಬವನ್ನು ಬೆಂಬಲಿಸುವುದು ತಮ್ಮ ಕರ್ತವ್ಯ" ಎಂದು ನಟ-ರಾಜಕಾರಣಿ ಶತ್ರುಘ್ನ ಸಿನ್ಹಾ ತಿಳಿಸಿದ್ದಾರೆ. ಬಿಜೆಪಿ ಪಕ್ಷವನ್ನು ತೋರೆದು ಇತ್ತೀಚಿಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಲ್ಲದೆ ಬಿಹಾರದ ಪಾಟ್ನಾ ಸಾಹೇಬ್ ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.ಈಗ ಪತ್ನಿ ಪರ ಪ್ರಚಾರ ಮಾಡುತ್ತಿರುವುದಕ್ಕೆ ಕಾಂಗ್ರೆಸ್ ನ ಆಚಾರ್ಯ ಪ್ರಮೋದ್ ಕೃಷ್ಣನ್ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ಕುರಿತು ಪ್ರಶ್ನಿಸಿದಾಗ ಪತಿಯಾಗಿ ಪತ್ನಿಗೆ ಬೆಂಬಲಿಸುವುದು ಕರ್ತವ್ಯವೆಂದು ಹೇಳಿದರು.
ಶತ್ರುಘ್ನ ಸಿನ್ಹಾ ಕಳೆದ ಮೂರು ದಶಕಗಳಿಂದ ಬಿಜೆಪಿ ಪಕ್ಷದಲ್ಲಿ ಕ್ರಿಯಾಶೀಲವಾಗಿದ್ದರು.ಪ್ರಸಕ್ತ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಕ್ಷದಲ್ಲೇ ಇದ್ದುಕೊಂಡು ಟೀಕಾರೋಪ ಮಾಡುತ್ತಿದ್ದರು ಈ ಹಿನ್ನಲೆಯಲ್ಲಿ ಈ ಬಾರಿ ಬಿಜೆಪಿ ಪಕ್ಷವು ಪಾಟ್ನಾ ಸಾಹೇಬ್ ನಿಂದ ಅವರಿಗೆ ಟಿಕೆಟ್ ನಿರಾಕರಿಸಿತ್ತು. ಈಗ ಪೂನಂ ಅವರು ಲಕ್ನೋದಲ್ಲಿ ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರ 1991 ರಿಂದಲೋ ಬಿಜೆಪಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡು ಬಂದಿದೆ.ಆದರೆ ಈ ಬಾರಿ ಮೈತ್ರಿಕೂಟದ ಅಭ್ಯರ್ಥಿ ಪೂನಂ ಈ ಕ್ಷೇತ್ರದಿಂದ ಗೆಲ್ಲುತಾರೆ ಇಲ್ಲವೋ ಎನ್ನವುದಕ್ಕೆ ನಾವಿನ್ನೂ ಕಾಯ್ದು ನೋಡಬೇಕಾಗಿದೆ.