ಇವಾಂಕ ಟ್ರಂಪ್ ಆಧಾರ್ ಕಾರ್ಡ್ ಪಡೆಯಲು ಭಾರತಕ್ಕೆ ಬಂದಿದ್ದಂತೆ !
ನವದೆಹಲಿ: ಇತ್ತೀಚಿಗೆ ವಿಶ್ವದ ದೊಡ್ಡಣ್ಣ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ ಮಗಳು ಇವಾಂಕಾ ಟ್ರಂಪ್ ಭಾರತಕ್ಕೆ ಹೈದರಾಬಾದ್ ನಲ್ಲಿ ಜಾಗತಿಕ ಉದ್ಯಮಿಗಳ ಸಮಾವೇಶವನ್ನು ಉಧ್ಘಾಟಿಸಲು ಭೇಟಿ ನೀಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಈಗ ನೀವು ನಂಬುತ್ತಿರೋ ಬಿಡುತ್ತಿರೋ ಗೊತ್ತಿಲ್ಲ ಇವಾಂಕ ಟ್ರಂಪ್ ಆಧಾರ್ ಕಾರ್ಡ್ ಪಡೆಯಲು ಭಾರತಕ್ಕೆ ಬಂದಿದ್ದರು ಎನ್ನುವ ಸಂಗತಿ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ.
ಈಗ ಟ್ವಿಟ್ಟರ್ ನಲ್ಲಿ ಈ ಭೇಟಿಗೆ ಸಂಬಂಧಿತ ಹಲವು ವ್ಯಂಗ ಮಿಶ್ರಿತ ಟ್ವೀಟ್ ಗಳು ವೈರಲ್ ಆಗಿದ್ದು ಅದರಲ್ಲಿ ಪ್ರಮುಖವಾಗಿ ಜೋಸ್ ಕೊವಾಕೋ ಎನ್ನುವರು ಎಡಿಟ್ ಮಾಡಿದ ವಿಡಿಯೋ, ಸೋಸಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ.ಇದರಲ್ಲಿ ಇವಾಂಕ ಭಾರತದ ಪ್ರತಿನಿಧಿಗಳಿಗೆ ತನ್ನ ಈ ಮೂರು ದಿನಗಳ ಪ್ರವಾಸವು ಆಧಾರಕಾರ್ಡ್ ನ್ನು ಪಡೆಯಲು ಎಂದು ಹೇಳುತ್ತಿರುವ ವಿಡಿಯೋ ವೈರಲ್ ಆಗಿ ಸುಮಾರು 2000 ಸಾವಿರ ಮರುಟ್ಟ್ವೀಟ್ ಗಳ ಪ್ರತಿಕ್ರಿಯೆಯನ್ನು ಈ ವಿಡಿಯೋ ಗಳಿಸಿದೆ.
ಇನ್ನೊಂದು ಸಂಗತಿ ಏನೆಂದರೆ ಇದಕ್ಕೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಆಧಾರ ಪ್ರಾಧಿಕಾರವು ಅವಳು ಭಾರತೀಯ ನಿವಾಸಿಯಾಗದ ಕಾರಣ ಅವಳಿಗೆ ಅದು ಅನ್ವಯವಾಗುವದಿಲ್ಲ ಎಂದು ತಿಳಿಸಿದೆ.