J-K DG Murder Case : ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ಹೇಮಂತ್ ಲೋಹಿಯಾ ಹತ್ಯೆ ಪ್ರಕರಣದಲ್ಲಿ ಇದೀಗ  ನೌಕರ  ಮತ್ತು ಒಬ್ಬ ಅಧಿಕಾರಿಯ ಸುತ್ತ ಅನುಮಾನ ಹುತ್ತ ಬೆಳೆದಿದೆ.  ಲೋಹಿಯಾ ಅವರನ್ನು ಅವರ ನಿವಾಸದಲ್ಲಿ ಹತ್ಯೆ ಮಾಡಲಾಗಿದ್ದು, ಹತ್ಯೆಯ ಹಿಂದೆ ನಾಪತ್ತೆಯಾಗಿರುವ ನೌಕರಣ ಕೈವಾಡದ ಸಂದೇಹ ವ್ಯಕ್ತವಾಗಿದೆ.   ಯಾಸಿರ್ ಎಂಬ ನೌಕರನ ಪತ್ತೆಗೆ ಇದೀಗ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಡಿಜಿಪಿ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ. ಕೊಲೆ ಮಾಡಿರುವ ವ್ಯಕ್ತಿಯು ಲೋಹಿಯಾ ದೇಹಕ್ಕೆ ಬೆಂಕಿ ಹಚ್ಚಲು ಯತ್ನಿಸಿದ್ದಾನೆ. 


COMMERCIAL BREAK
SCROLL TO CONTINUE READING

1992ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಲೋಹಿಯಾ ಅವರನ್ನು ನಗರದ ಹೊರವಲಯದಲ್ಲಿರುವ ಉದಯವಾಲಾ ನಿವಾಸದಲ್ಲಿ ಹತ್ಯೆ ಮಾಡಲಾಗಿದೆ. ಮೊದಲು ಕಟ್ಟು ಹಿಸುಕಿ ಹತ್ಯೆ ಮಾಡಲಾಗಿದ್ದು, ನಂತರ ಬಾಟಲಿಯಿಂದ  ಕುತ್ತಿಗೆ ಸೀಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ತಿಳಿಸಿದ್ದಾರೆ. ಅಲ್ಲದೆ,  ಲೋಹಿಯಾ ದೇಹದ ಮೇಲೆ ಸುಟ್ಟ ಗಾಯಗಳ ಗುರುತುಗಳು ಕೂಡಾ ಪತ್ತೆಯಾಗಿವೆ. 


ಇದನ್ನೂ ಓದಿ : KCR National Party : ಹೊಸ ರಾಷ್ಟ್ರೀಯ ಪಕ್ಷ ಘೋಷಿಸಲಿದ್ದಾರೆ ತೆಲಂಗಾಣ ಸಿಎಂ!


ಲೋಹಿಯಾ ಅವರ ನಿವಾಸದಲ್ಲಿದ್ದ ಭದ್ರತಾ ಸಿಬ್ಬಂದಿ ಲೋಹಿಯಾ ಅವರ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿದ್ದಾರೆ. ಆದರೆ ಒಳಗಿನಿಂದ ಬಾಗಿಲು ಹಾಕಿದ್ದರಿಂದ, ಬಾಗಿಲನ್ನು ಸುಲಭವಾಗಿ ತೆರೆಯುವುದು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ಬಾಗಿಲು ಮುರಿದು ಒಳಗೆ ಹೋಗಬೇಕಾಯಿತು ಎಂದು ಮುಖೇಶ್ ಸಿಂಗ್ ತಿಳಿಸಿದ್ದಾರೆ.  ನೌಕರ  ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ಮುಂದುವರೆದಿದೆ.  ಫೋರೆನ್ಸಿಕ್ ಮತ್ತು ಅಪರಾಧ ತಂಡಗಳು ಸ್ಥಳದಲ್ಲಿ ಬೀಡು ಬಿಟ್ಟಿವೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲೇ  ಮೊಕ್ಕಾಂ ಹೂಡಿದ್ದಾರೆ. 


ಇದನ್ನೂ ಓದಿ : ವಕೀಲೆಯ ಮೇಲೆ ಅತ್ಯಾಚಾರದ ಆರೋಪ ಹಿನ್ನೆಲೆ ಎಡಿಎ ಮೇಲೆ ಪ್ರಕರಣ ದಾಖಲು


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.