ಮಣಿಪುರದ ಹಂಗಾಮಿ ರಾಜ್ಯಪಾಲರಾಗಿ ಜಗದೀಶ್ ಮುಖಿ ಪ್ರಮಾಣ ವಚನ ಸ್ವೀಕಾರ
ಇಂಫಾಲ್ : ಜಗದೀಶ್ ಮುಖಿ ಇಂದು ಮಣಿಪುರದ ಹಂಗಾಮಿ ರಾಜ್ಯಪಾಲರಾಗಿ ಮಣಿಪುರ ಹೈಕೋರ್ಟ ನ ಮುಖ್ಯ ನ್ಯಾಯಮೂರ್ತಿ ಎನ್ ಕೋಟಿಸ್ವರ್ ಸಿಂಗ್ ಅವರ ಸಮ್ಮುಖದಲ್ಲಿ ಅವರು ಪ್ರಮಾಣವಚನ ಸ್ವೀಕರಿಸಿದರು.
ಅಸ್ಸಾಂ ಮತ್ತು ಮೇಘಾಲಯ ರಾಜ್ಯಪಾಲರಾಗಿದ್ದ ಮುಖಿ, ರಾಜ್ಯಪಾಲೆ ನಜ್ಮಾ ಹೆಪ್ತಾಲಾ ಅವರ ಅನುಪಸ್ಥಿತಿಯಲ್ಲಿ ಅಧಿಕಾರ ವಹಿಸಲಿದ್ದಾರೆ ಎಂದು ಮಣಿಪುರ ಸರಕಾರ ತಿಳಿಸಿದೆ.
ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ವೈ. ಜಾಯ್ಕುಮಾರ್ ಸಿಂಗ್, ಸ್ಪೀಕರ್ ವೈ ಖೇಮ್ಚಂದ್ ಸಿಂಗ್, ರಾಜ್ಯಸಭಾ ಸದಸ್ಯ ಕೆ.ಎಚ್. ಭಾಬನಂದ ಸಿಂಗ್, ಸಚಿವ ಮಂಡಳಿ, ಮುಖ್ಯ ಕಾರ್ಯದರ್ಶಿ ಮತ್ತು ನಿರ್ದೇಶಕ ಜನರಲ್ ಆಫ್ ಪೊಲೀಸ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.