ಜೈನ ಮುನಿ ಶ್ರೀ ತರುಣ ಸಾಗರ ವಿಧಿವಶ
ದೆಹಲಿಯ ಕೃಷ್ಣಾ ನಗರ ಪ್ರದೇಶದ ರಾಧಾಪುರಿ ಜೈನ ಮಂದಿರದಲ್ಲಿ ಬೆಳಿಗ್ಗೆ 3 ಗಂಟೆ ಸಮಯದಲ್ಲಿ ಕೊನೆಯುಸಿರೆಳೆದಿದ್ದಾರೆ.
ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಜೈನ ಮುನಿ ಶ್ರೀ ತರುಣ ಸಾಗರ ಅವರು ಶನಿವಾರ ಮುಂಜಾನೆ ನಿಧನರಾಗಿದ್ದಾರೆ.
ದೆಹಲಿಯ ಕೃಷ್ಣಾ ನಗರ ಪ್ರದೇಶದ ರಾಧಾಪುರಿ ಜೈನ ಮಂದಿರದಲ್ಲಿ ಬೆಳಿಗ್ಗೆ 3 ಗಂಟೆ ಸಮಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರಿಗೆ 51 ವರ್ಷ ವಯಸ್ಸಾಗಿತ್ತು. ಅವರ ಅಂತ್ಯ ಸಂಸ್ಕಾರ ಉತ್ತರ ಪ್ರದೇಶದ ಮುರಾದ್ ನಗರದ ತರುಣಸಾಗರಂ ನಲ್ಲಿ ಇಂದು ಮಧ್ಯಾಹ್ನ ನಡೆಯಲಿದೆ.
ಮಧ್ಯಪ್ರದೇಶದ ದಾಹೋಹ್ ಜಿಲ್ಲೆಯಲ್ಲಿ ಜೂನ್ 26, 1967 ರಲ್ಲಿ ಜನಿಸಿದ ತರುಣ ಸಾಗರ ಅವರ ಮೂಲ ಹೆಸರು ಪವನ್ ಕುಮಾರ್ ಜೈನ್. 1981 ಮಾರ್ಚ್ 8 ರಂದು ಮನೆ ಬಿಟ್ಟು ಹೊರಬಂದ ಅವರು ಸನ್ಯಾಸ ಸ್ವೀಕರಿಸಿದ್ದರು. ಜೈನ ಸಮುದಾಯದಲ್ಲಿ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದ್ದ ತರುಣ್ ಸಾಗರ್ ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಯಿಂದ ಬಂದ ನಂತರ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು ಎನ್ನಲಾಗಿದೆ. ಅಲ್ಲದೆ ಸಲ್ಲೇಖನ ವ್ರತವನ್ನು ಸಹ ಅವರು ಕೈಗೊಂಡಿದ್ದರು.