ದೆಹಲಿ ಕೋರ್ಟ್ ನಿಂದ ಜೈರಾಮ್ ರಮೇಶ್ ,ಕ್ಯಾರವಾನ್ ಸಂಪಾದಕನಿಗೆ ಸಮನ್ಸ್ ಜಾರಿ
ದೆಹಲಿ ಕೋರ್ಟ್ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕ್ಯಾರವಾನ್ ಮ್ಯಾಗಜಿನ್ ಸಂಪಾದಕ ಮತ್ತು ವರದಿಗಾರನ ಮೇಲೆ ಎನ್ಎಸ್ಎ ಅಜಿತ್ ದೋವಲ್ ಅವರ ಪುತ್ರ ವಿವೇಕ್ ಸಲ್ಲಿಸಿದ ಮಾನನಷ್ಟ ಮೊಕದ್ದಮೆ ವಿಚಾರವಾಗಿ ಸಮನ್ಸ್ ಜಾರಿ ಮಾಡಿದೆ.ಆದ್ದರಿಂದ ಅವರು ಎಪ್ರಿಲ್ 25 ರಂದು ಕೋರ್ಟ್ ಎದುರು ಹಾಜರಾಗಬೇಕಾಗಿದೆ.
ನವದೆಹಲಿ: ದೆಹಲಿ ಕೋರ್ಟ್ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕ್ಯಾರವಾನ್ ಮ್ಯಾಗಜಿನ್ ಸಂಪಾದಕ ಮತ್ತು ವರದಿಗಾರನ ಮೇಲೆ ಎನ್ಎಸ್ಎ ಅಜಿತ್ ದೋವಲ್ ಅವರ ಪುತ್ರ ವಿವೇಕ್ ಸಲ್ಲಿಸಿದ ಮಾನನಷ್ಟ ಮೊಕದ್ದಮೆ ವಿಚಾರವಾಗಿ ಸಮನ್ಸ್ ಜಾರಿ ಮಾಡಿದೆ.ಆದ್ದರಿಂದ ಅವರು ಎಪ್ರಿಲ್ 25 ರಂದು ಕೋರ್ಟ್ ಎದುರು ಹಾಜರಾಗಬೇಕಾಗಿದೆ.
ಏಪ್ರಿಲ್ 25 ರಂದು ನ್ಯಾಯಾಲಯಕ್ಕೆ ಹಾಜರಾಗಲು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮಾರ್ ವಿಶಾಲ್ ಸೂಚನೆ ನೀಡಿದ್ದಾರೆ.ವಿವೇಕ್ ದೊವಾಲ್ ಅವರು "ಕೇಮನ್ ದ್ವೀಪಗಳಲ್ಲಿನ ಹೆಡ್ಜ್ ಫಂಡ್ ಅನ್ನು ನಡೆಸುತ್ತಿದ್ದಾರೆ" ಇದು "ಸ್ಥಾಪಿತ ತೆರಿಗೆ ಧಾಮ" ಎಂದು ಕಾರವಾನ್ ತನ್ನ ಲೇಖನದಲ್ಲಿ ಆರೋಪಿಸಿತ್ತು. ಈ ಹಿನ್ನಲೆಯಲ್ಲಿ ಅವರು ಮಾನನಷ್ಟ ಮೊಕದ್ದಮೆ ಕೇಸ್ ಹಾಕಿದ್ದರು.
ಜನವರಿ 30 ರಂದು ನ್ಯಾಯಾಲಯದಲ್ಲಿ ವಿವೇಕ್ ತಮ್ಮ ಹೇಳಿಕೆಗಳನ್ನು ನ್ಯಾಯಾಲದಲ್ಲಿ ದಾಖಲಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ಜೈರಾಮ್ ರಮೇಶ್ ಆರೋಪ ಹಾಗೂ ಮ್ಯಾಗಜಿನ್ ನಲ್ಲಿ ಪ್ರಕಟವಾದ ಅಂಶಗಳು ಸುಳ್ಳು ಅವೆಲ್ಲವೂ ಕೂಡ ಆಧಾರರಹಿತವಾಗಿವೆ ಅಲ್ಲದೆ ಇದರಿಂದ ತಮ್ಮ ಕುಟುಂಬ ಸದಸ್ಯರು ಮತ್ತು ವೃತ್ತಿಪರರ ದೃಷ್ಟಿಯಲ್ಲಿ ತಮ್ಮ ಮಾನವನ್ನು ಹಾಳು ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.