ಇಮ್ರಾನ್ ಖಾನ್ ಜೊತೆ ಜೈಶ್ -ಇ-ಮೊಹಮ್ಮದ್ ಸಂಘಟನೆ ನಿಕಟ ಸಂಪರ್ಕ ಹೊಂದಿದೆ- ಮನೀಶ್ ತಿವಾರಿ
ಪುಲ್ವಾಮಾ ದಾಳಿಯ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಪಾಕ್ ವಿರುದ್ದ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.ಇದೇ ವೇಳೆ ಪುಲ್ವಾಮಾ ದಾಳಿಗೆ ಹೊಣೆ ಹೊತ್ತಿರುವ ಜೈಶ್ -ಇ-ಮೊಹಮ್ಮದ್ ಸಂಘಟನೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ತೆಹ್ರಿಕ್-ಇ-ಇನ್ಸಾಫ್ (ಪಿಟಿಐ)ಪಕ್ಷದ ಜೊತೆ ನಿಕಟ ಸಂಪರ್ಕವಿದೆ ಎಂದು ತಿಳಿಸಿದರು.
ನವದೆಹಲಿ: ಪುಲ್ವಾಮಾ ದಾಳಿಯ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಪಾಕ್ ವಿರುದ್ದ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.ಇದೇ ವೇಳೆ ಪುಲ್ವಾಮಾ ದಾಳಿಗೆ ಹೊಣೆ ಹೊತ್ತಿರುವ ಜೈಶ್ -ಇ-ಮೊಹಮ್ಮದ್ ಸಂಘಟನೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ತೆಹ್ರಿಕ್-ಇ-ಇನ್ಸಾಫ್ (ಪಿಟಿಐ)ಪಕ್ಷದ ಜೊತೆ ನಿಕಟ ಸಂಪರ್ಕವಿದೆ ಎಂದು ತಿಳಿಸಿದರು.
ಮುಂಬೈ ನಲ್ಲಿ ಶನಿವಾರದಂದು ಪುಸ್ತಕ ಬಿಡುಗಡೆಯೊಂದರಲ್ಲಿ ಮಾತನಾಡಿದ ತಿವಾರಿ, "ಇದೊಂದು ಭಯಾನಕ ದಾಳಿಯಾಗಿದೆ.ಇದರ ಹೊಣೆ ಹೊತ್ತಿರುವ ಜೈಶ್-ಎ-ಮೊಹಮ್ಮದ್ ಸಂಘಟನೆ ಇಮ್ರಾನ್ ಖಾನ್ ಅವರ ಪಕ್ಷ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಜೊತೆ ನಿಕಟ ಸಂಪರ್ಕ ಹೊಂದಿದೆ.ಆದ್ದರಿಂದ ಈ ದಾಳಿಗೆ ಪಾಕ್ ಸರ್ಕಾರವೇ ಹೊಣೆ ಭಾರತ ಸರ್ಕಾರವು ತಗೆದುಕೊಳ್ಳುವ ಯಾವುದೇ ಕ್ರಮಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದು ಮನೀಶ್ ತಿವಾರಿ ತಿಳಿಸಿದರು.
ಇದೇ ವೇಳೆ ಎನ್ ಡಿಎ ಸರ್ಕಾರವು 1999 ರ ಐಸಿ 814 ಹೈಜಾಕ್ ವಿಚಾರದಲ್ಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದ ವ್ಯಕ್ತಿಯೇ ಈ ದಾಳಿಯ ಹಿಂದಿದ್ದಾನೆ ಎಂದು ಅವರು ಹೇಳಿದರು.ಈ ದಾಳಿ ಏಕಾಯ್ತು, ಇದರಲ್ಲಾದ ಯಾವ ಲೋಪದೋಷಗಳನ್ನು ನಾವು ತನಿಖೆ ನಡೆಸಬೇಕು ಎನ್ನುವ ಬಗ್ಗೆ ವಿಚಾರಣೆ ಮಾಡಬೇಕು.ಈ ಹಿಂದೆ ಕಂದಹಾರ್ ನಲ್ಲಿ ಎನ್ ಡಿಎ ಸರ್ಕಾರವು ಬಿಡುಗಡೆ ಮಾಡಿದ ಮೌಲಾನಾ ಮಸೂದ್ ಅಜರ್ ಎನ್ನುವ ವ್ಯಕ್ತಿಯೇ ಈ ದಾಳಿಯ ಹಿಂದಿದ್ದಾನೆ ಎಂದು ತಿವಾರಿ ತಿಳಿಸಿದರು.