ಪಾಕ್ ಉಗ್ರ ಚಟುವಟಿಕೆ ನಿಲ್ಲಿಸದಿದ್ದಲ್ಲಿ ನಾವು ಒಳಗೆ ನುಗ್ಗಿ ಶಿಬಿರ ನಾಶಪಡಿಸುತ್ತೇವೆ-ಕಾಶ್ಮೀರ ರಾಜ್ಯಪಾಲ
ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಸೋಮವಾರ ಭಾರತದ ವಿರುದ್ಧ ಯಾವುದೇ ದುಸ್ಸಾಹಸ ಮಾಡುವ ಬಗ್ಗೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದು, ಪಾಕಿಸ್ತಾನ ಉಗ್ರ ಚಟುವಟಿಕೆ ತಡೆಯದಿದ್ದಲ್ಲಿ ಭಾರತೀಯ ಸೇನೆಯು ಒಳಕ್ಕೆ ಹೋಗಿ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸುತ್ತದೆ ಎಂದು ಹೇಳಿದ್ದಾರೆ.
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಸೋಮವಾರ ಭಾರತದ ವಿರುದ್ಧ ಯಾವುದೇ ದುಸ್ಸಾಹಸ ಮಾಡುವ ಬಗ್ಗೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದು, ಪಾಕಿಸ್ತಾನ ಉಗ್ರ ಚಟುವಟಿಕೆ ತಡೆಯದಿದ್ದಲ್ಲಿ ಭಾರತೀಯ ಸೇನೆಯು ಒಳಕ್ಕೆ ಹೋಗಿ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸುತ್ತದೆ ಎಂದು ಹೇಳಿದ್ದಾರೆ.
'ಪಾಕಿಸ್ತಾನ ಈ ಭಯೋತ್ಪಾದಕ ಶಿಬಿರಗಳನ್ನು ನಿಲ್ಲಿಸಬೇಕು.ಇಲ್ಲದಿದ್ದಲ್ಲಿ, ನಾವು ಒಳಗೆ ಹೋಗಿ ಈ ಶಿಬಿರಗಳನ್ನು ನಾಶಪಡಿಸುತ್ತೇವೆ ಎಂದು ಮಲಿಕ್ ಹೇಳಿದ್ದಾರೆ. ಈಗ ಅವರ ಹೇಳಿಕೆ ಪ್ರಮುಖವಾಗಿ ಕಾಶ್ಮೀರ ಕಣಿವೆಯ ತಂಗ್ಧರ್ ಪ್ರದೇಶದ ಎದುರು ಗಡಿ ನಿಯಂತ್ರಣ ರೇಖೆಯಲ್ಲಿನ ವಿವಿಧ ಸ್ಥಳಗಳಲ್ಲಿ ಹಲವಾರು ಉಗ್ರಗಾಮಿ ಶಿಬಿರಗಳನ್ನು ನಾಶಪಡಿಸಿದ ಒಂದು ದಿನದ ನಂತರ ಬಂದಿವೆ.
ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸದಿದ್ದರೆ ಭಾರತ ಭಾನುವಾರಕ್ಕಿಂತ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಮಲಿಕ್ ಹೇಳಿದ್ದಾರೆ. ಈ ಹಿಂದಿನ ದಿನ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಾಕಿಸ್ತಾನಕ್ಕೆ ಒಳನುಸುಳುವ ಪ್ರಯತ್ನಗಳಿಗೆ ಸೂಕ್ತ ಉತ್ತರ ನೀಡಿದರು, ಪಾಕ್ ಒಳನುಸುಳುವಿಕೆಯನ್ನು ನಿಲ್ಲಿಸದಿದ್ದರೆ ಅಂತಹ ಕ್ರಮಗಳು ಮುಂದುವರಿಯುತ್ತವೆ ಎಂದು ಹೇಳಿದ್ದರು.