ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಿ 35-ಎರ ಸಿಂಧುತ್ವವನ್ನು ಪ್ರಶ್ನಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯ ಸೋಮುವಾರದ ವಿಚಾರಣೆಯನ್ನು ರಾಜ್ಯಪಾಲ ಎನ್.ಎನ್. ವೊಹ್ರಾ ಅವರು ರಾಜ್ಯದ ವಿಚಾರಣಾ ಮಂಡಳಿಯ ಮೂಲಕ ಸುಪ್ರೀಂ ಕೋರ್ಟಗೆ ವಿಚಾರಣೆಯನ್ನು ಮುಂದೂಡಲು ಮನವಿ ಮಾಡಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಈ ವಿಚಾರವಾಗಿ ಈಗ ರಾಜ್ಯ ಸರಕಾರವು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ಗೆ ಅರ್ಜಿಯನ್ನು ಸಲ್ಲಿಸಿದೆ. ಅರ್ಜಿಯಲ್ಲಿ ಮುಂಬರುವ ಪಂಚಾಯತ್ ಮತ್ತು ನಗರ ಸ್ಥಳೀಯ ಮಂಡಳಿ ಮತ್ತು ಪುರಸಭೆಯ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿರುವುದರಿಂದ ವಿಚಾರಣೆಯನ್ನು ಮುಂದೂಡಬೇಕೆಂದು ಮನವಿ ಮಾಡಿಕೊಂಡಿದೆ.


ವಿಧಿ 35ರ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಿಂದ ಹೊರಗಿರುವ ಜನರು ರಾಜ್ಯದ ಯಾವುದೇ ಸ್ಥಿರ ಆಸ್ತಿಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಕಾನೂನು ಹೇಳುತ್ತದೆ.ಆದ್ದರಿಂದ ಈ ಅರ್ಜಿಯನ್ನು ವಿರೋಧಿಸಿ ಈಗ ಸುಪ್ರಿಂಕೋರ್ಟ್ ನಲ್ಲಿ ಪಿಐಎಲ್ ಅರ್ಜಿ ಸಲ್ಲಿಸಲಾಗಿದೆ.


ಸುಪ್ರಿಂ ಕೋರ್ಟ್ ನ ವಿಚಾರಣೆಗೂ ಮುನ್ನ ಭಾನುವಾರ ಮತ್ತು ಸೋಮವಾರದಂಡು  ಪ್ರತ್ಯೇಕತಾವಾದಿ ಸಂಘಟನೆ ಜೆಆರ್ಎಲ್ ಎರಡು ದಿನಗಳ ಕಾಲ ಇಡಿ ಕಾಶ್ಮೀರವನ್ನು ಸಂಪೂರ್ಣವಾಗಿ  ಸ್ಥಗಿತಗೊಳಿಸುವಂತೆ ಕರೆ ನೀಡಿದೆ. ಇದರಿಂದಾಗಿ ಕಣಿವೆಯಾದ್ಯಂತ ಅಂಗಡಿ ಮುಗ್ಗಟ್ಟುಗಳು ಮುಚ್ಚಲ್ಪಟ್ಟಿವೆ, ಮತ್ತು ಎಲ್ಲಾ ರೀತಿಯ ಸಾರಿಗೆಯು ಕೂಡ ಸ್ಥಗಿತಗೊಂಡಿದೆ.ಇನ್ನು ಜಮ್ಮುನಲ್ಲಿ ನಡೆಯುತ್ತಿರುವ ಅಮರನಾಥ ಯಾತ್ರೆ ಕೂಡಯನ್ನು ಬಂದ ಮಾಡಲಾಗಿದೆ.