ಶ್ರೀನಗರ: ಗುರುವಾರ ಜವಾಹರ್ ಟನೆಲ್ ಬಳಿ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಹಿಮಪಾತ ಸಂಭವಿಸಿದೆ. ಟನೆಲ್‌ ಗೆ ಸಮೀಪ ತನ್ನ ಠಾಣೆಯಲ್ಲಿ ವಿಪರೀತ ಹಿಮಪಾತದ ಪರಿಣಾಮವಾಗಿ ಸಿಕ್ಕಿ ಹಾಕಿಕೊಂಡಿರುವ ಹತ್ತು ಪೊಲೀಸರ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಕುಲಗಾಂವ್‌ ಜಿಲ್ಲೆಯ ಕಾಜೀಗಂದ್‌ ನಲ್ಲಿನ ಜವಾಹರ್‌ ಟನೆಲ್‌ ನ ಉತ್ತರ ಭಾಗದಲ್ಲಿ ಭಾರೀ ಹಿಮಪಾತ ಸಂಭವಿಸಿರುವ ಬಗ್ಗೆ ಪೊಲೀಸ್ ಅಧಿಕಾರಿ ತಿಳಿಸಿದ್ದು, ಹಿಮಪಾತ ಸಂಭವಿಸಿರುವ ತಾಣಕ್ಕೆ ಅತ್ಯಂತ ಸಮೀಪದವರೆಗೂ ರಕ್ಷಣಾ ತಂಡ ಸಾಗಿದ್ದು ಠಾಣೆಯೊಳಗೆ ಸಿಲುಕಿರುವ ಹತ್ತು ಪೊಲೀಸರನ್ನು ಪಾರುಗೊಳಿಸುವ ಕಾರ್ಯಾಚರಣೆ ಇದೀಗ ನಡೆಯುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ. 


ಗುರುವಾರ ಹಿಮಪಾತಕ್ಕೆ ಸಿಲುಕಿರುವ 10 ಪೊಲೀಸ್ ಸಿಬ್ಬಂದಿ. (ಫೋಟೋ:ANI) 


"ಪೊಲೀಸ್ ಪಾರುಗಾಣಿಕಾ ತಂಡ ಮತ್ತು ಇತರ ಸಂಬಂಧಿತ ಏಜೆನ್ಸಿಗಳು ಈ ಸ್ಥಳಕ್ಕೆ ತಲುಪಿದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ಪ್ರಕಾರ, ಕಾಶ್ಮೀರ ಕಣಿವೆಯಲ್ಲಿ ಬುಧವಾರದಿಂದ ಹಿಮಪಾತ ಸಂಭವಿಸುತ್ತಿದ್ದು, ಕುಲಗಾಂವ್‌ ಜಿಲ್ಲೆ ಕಳೆದ 24 ಗಂಟೆಗಳಲ್ಲಿ ಗರಿಷ್ಠ ಹಿಮಪಾತ ಸ್ವೀಕರಿಸಿದೆ. ಜಿಲ್ಲೆಯ ಕೆಲವು ಭಾಗಗಳಲ್ಲಿ 5 ಅಡಿಗಳಷ್ಟು ಹಿಮಪಾತ ಕಂಡುಬಂದಿದೆ ಎಂದಿದ್ದಾರೆ.