Jammu & Kashmir: ಭದ್ರತಾಪಡೆಗಳ ಮೇಲೆ ಉಗ್ರರ ದಾಳಿ, ಮೂವರು ಯೋಧರು ಹುತಾತ್ಮ
ಈ ಉಗ್ರ ದಾಳಿಯಲ್ಲಿ ಓರ್ವ SPO ಹಾಗೂ ಇಬ್ಬರು CRPF ಜವಾನರು ಸೇರಿದಂತೆ ಒಟ್ಟು ಮೂರು ಜನ ಹುತಾತ್ಮರಾಗಿದ್ದಾರೆ.
ಜಮ್ಮು:ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಉಗ್ರ ದಾಳಿ(Terror Attack) ನಡೆದ ಕುರಿತು ವರದಿಯಾಗಿದೆ. ಈ ದಾಳಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ (ಎಸ್‌ಪಿಒ) ಮತ್ತು ಇಬ್ಬರು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಸೇರಿದಂತೆ ಒಟ್ಟು ಮೂವರು ಭದ್ರತಾ ಸಿಬ್ಬಂದಿಗಳು ಹುತಾತ್ಮ ರಾಗಿದ್ದಾರೆ. ಬಾರಾಮುಲ್ಲಾದ ಕ್ರೆರಿ ಪ್ರಾಂತ್ಯದಲ್ಲಿ ಈ ಉಗ್ರ ದಾಳಿ ನಡೆದಿದೆ ಎನ್ನಲಾಗಿದೆ.
ಪ್ರದೇಶವನ್ನು ಸುತ್ತುವರೆಯಲಾಗಿದೆ
ಇಂದು ಬೆಳಗ್ಗೆ ಬಾರಾಮುಲ್ಲಾ ಜಿಲ್ಲೆಯ ಕ್ರೆರಿ ಪ್ರಾಂತ್ಯದಲ್ಲಿ ಪ್ರದೇಶದಲ್ಲಿ ಸಿಆರ್ಪಿಎಫ್ ಮತ್ತು ಪೊಲೀಸರ ಜಂಟಿ ನಾಕಾ ಪಾರ್ಟಿ ಮೇಲೆ ಉಗ್ರರು ಕೆಲವು ಸುತ್ತು ಗುಂಡು ಹಾರಿಸಿದ್ದಾರೆ. ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದಾರೆ . ಪ್ರಸ್ತುತ ಭಯೋತ್ಪಾದಕರನ್ನು ಶೋಧಕ್ಕಾಗಿ ಈ ಪ್ರದೇಶವನ್ನುಸುತ್ತುವರೆಯಲಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ. ಇದಕ್ಕೂ ಮೊದಲು ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಯೋಧರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಹುತಾತ್ಮರಾಗಿದ್ದಾರೆ. ದಾಳಿಯ ವೇಳೆ ಉಗ್ರರು ಯೋಧರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಸಹ ಲೂಟಿ ಮಾಡಿದ್ದಾರೆ ಎನ್ನಲಾಗಿದೆ ಆದರೆ, ಇದುವರೆಗೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಲಾಗಿಲ್ಲ.
ಇದಕ್ಕೂ ಮೊದಲು ಆಗಸ್ಟ್ 14 ರಂದು ನೌಗಮ್ ಪ್ರದೇಶದಲ್ಲಿ ಪೊಲೀಸ್ ಪಾರ್ಟಿ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಇದರಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿದ್ದರು. ಇದೆ ವೇಳೆ ಆಗಸ್ಟ್ 12 ರಂದು ಪುಲ್ವಾಮಾದಲ್ಲಿ ಭದ್ರತಾ ಪಡೆಗಳಿಂದ ನಡೆಸಲಾಗಿದ್ದ ದಾಳಿಯಲ್ಲಿ ಓರ್ವ ಉಗ್ರನನ್ನು ಮಟ್ಟಹಾಕಲಾಗಿತ್ತು. ಹತ್ಯೆಗೀಡಾದ ಉಗ್ರನನ್ನು ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ) ನ ಉನ್ನತ ಕಮಾಂಡರ್ ಆಜಾದ್ ಲಲಹರಿ ಎಂದು ಗುರುತಿಸಲಾಗಿತ್ತು ಈ ಎನ್ಕೌಂಟರ್ ವೇಳೆ ಭಾರತೀಯ ಸೇನೆಯ ಓರ್ವ ಯೋಧ ಕೂಡ ಹುತಾತ್ಮರಾಗಿದ್ದರು.