ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ (Pulwama terror attack) ನಿನ್ನೆ ತಡರಾತ್ರಿ ಪ್ರಾರಂಭವಾದ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವಿನ ಮುಖಾಮುಖಿ ಇನ್ನೂ ಮುಂದುವರೆದಿದೆ. ಘರ್ಷಣೆಯಲ್ಲಿ ಒಬ್ಬ ಭಯೋತ್ಪಾದಕ  (Terrorist) ಹತನಾಗಿದ್ದು, ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಸ್ಥಳದಲ್ಲಿ ನಾಲ್ಕು ಜನ ಭಯೋತ್ಪಾದಕರು ಬೀಡು ಬಿಟ್ಟಿದ್ದಾರೆ  ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಒಬ್ಬ ಭಯೋತ್ಪಾದಕ ಹತ :
ಭಯೋತ್ಪಾದಕರ ಜೊತೆಗಿನ ಕಾಳಗದಲ್ಲಿ ಒಬ್ಬ ಯೋಧ ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆ ದೃಢಪಡಿಸಿದೆ. ಕಾಶ್ಮೀರ ವಲಯದ ಪೊಲೀಸ್ ಅಧಿಕಾರಿಗಳ ಪ್ರಕಾರ, ಎನ್ಕೌಂಟರ್ (Encounter) ಸಮಯದಲ್ಲಿ ಯೋಧನಿಗೆ ಗುಂಡು ತಗಲಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಎನ್‌ಕೌಂಟರ್‌ನಲ್ಲಿ ಓರ್ವ ಭಯೋತ್ಪಾದಕ (Terrorist) ಕೂಡ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ : ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಭೇಟಿ ಬಗ್ಗೆ ಶರದ್ ಪವಾರ್ ಹೇಳಿದ್ದೇನು ?


ಶೋಧ ಕಾರ್ಯದ ವೇಳೆ ಗುಂಡಿನ ದಾಳಿ : 
ಪುಲ್ವಾಮಾ ಜಿಲ್ಲೆಯ ರಾಜ್‌ಪೋರಾ ಪ್ರದೇಶದ ಹಂಜನ್ ಬಾಲಾದಲ್ಲಿ ಭಯೋತ್ಪಾದಕರು ಬೀಡುಬಿಟ್ಟಿರುವ ಮಾಹಿತಿ ಆಧಾರದಲ್ಲಿ ಭದ್ರತಾ ಪಡೆಗಳು  ಗುರುವಾರ ತಡವಾಗಿ ಶೋಧ ಕಾರ್ಯಾಚರಣೆ ಆರಂಭಿಸಿತ್ತು.  ಈ ಸಮಯದಲ್ಲಿ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಭಯೋತ್ಪಾದಕ ದಾಳಿಗೆ ಭದ್ರತಾ ಪಡೆಗಳು ಕೂಡಾ ಪ್ರತಿದಾಳಿ ಮೂಲಕ ಸೂಕ್ತ ಉತ್ತರವನ್ನೇ  ನೀಡಿವೆ. 


ಮೂರು ದಿನಗಳ ಹಿಂದೆ, ಜಮ್ಮು ಮತ್ತು ಕಾಶ್ಮೀರದ (Kashmir terror attack) ಪರಿಂಪೋರಾ ಪ್ರದೇಶದಲ್ಲಿ ನಡೆದ ಘರ್ಷಣೆ ವೇಳೆ ಕೂಡಾ  ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಅವರಲ್ಲಿ  ಒಬ್ಬ ಲಷ್ಕರ್-ಎ-ತೈಬಾ (LET) ಕಮಾಂಡರ್ ನದೀಮ್ ಅಬ್ರಾರ್ ಮತ್ತು ಇನ್ನೊಬ್ಬ ಭಯೋತ್ಪಾದಕ ಪಾಕಿಸ್ತಾನದ ಪ್ರಜೆ ಎನ್ನಲಾಗಿದೆ. 


ಇದನ್ನೂ ಓದಿ : ಶೀಘ್ರದಲ್ಲೇ ಮೋದಿ ಸಚಿವ ಸಂಪುಟದಲ್ಲಿ ಮೇಜರ್ ಸರ್ಜರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.