ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ನಲ್ಲಿ, ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿ ಶುಕ್ರವಾರ ಬೆಳಿಗ್ಗೆ ಮುಂದುವರಿದಿದೆ. ಎನ್ಕೌಂಟರ್ ಸಂದರ್ಭದಲ್ಲಿ ಭದ್ರತಾ ಪಡೆಗಳು ಮೂರು ಉಗ್ರಗಾಮಿಗಳನ್ನು ವಶಕ್ಕೆ ಪಡೆದಿದ್ದಾರೆ. ಸುದ್ದಿ ಸಂಸ್ಥೆ ಎಎನ್ಐ ವರದಿಯ ಪ್ರಕಾರ ಅನಾಂತ್ನಾಗ್ನ ಕೋಕೆರ್ನಾಗ್ನಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಗುರುವಾರ (ಆಗಸ್ಟ್ 23) ರಾತ್ರಿ ಭದ್ರತಾ ಪಡೆಗಳಿಗೆ ಲಭಿಸಿದೆ. ಭಯೋತ್ಪಾದಕರು ಅಡಗಿರುವ ಮಾಹಿತಿ ಪಡೆದ ನಂತರ, ಸೈನ್ಯವು ಪೊಲೀಸ್ ಮತ್ತು ಸಿಆರ್ಪಿಎಫ್ ಜಾವಾನ್ಗಳು ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.


COMMERCIAL BREAK
SCROLL TO CONTINUE READING

ಸೇನಾ ಸಿಬ್ಬಂದಿ ಮೇಲೆ ಉಗ್ರರ ಗುಂಡಿನ ದಾಳಿ
ಉಗ್ರರು ಅಡಗಿರುವ ಮಾಹಿತಿ ಪಡೆದೊಡನೆ ಸೇನೆಯು ಆ ಪ್ರದೇಶವನ್ನು ಸುತ್ತುವರಿದಿದೆ. ಈ ಬಗ್ಗೆ ತಿಳಿದೊಡನೆ ಉಗ್ರರು ತಮ್ಮ ರಕ್ಷಣೆಗಾಗಿ ಸೇನಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರತೀಕಾರವಾಗಿ ಸೈನ್ಯದ ಸಿಬ್ಬಂದಿ ಕೂಡಾ ಗುಂಡಿನ ದಾಳಿ ಮುಂದುವರೆಸಿದ್ದಾರೆ.



ಅನಾಂತ್ನಾಗ್ನಲ್ಲಿ ಸೈನ್ಯ ಮತ್ತು ಉಗ್ರಗಾಮಿಗಳ ನಡುವಿನ ಗುಂಡಿನ ಕಾರಣ ಇಂಟರ್ನೆಟ್ ಸೇವೆಯ ಮೇಲೆ ಕೂಡಾ ಪರಿಣಾಮ ಬೀರಿದೆ. ಮುನ್ನೆಚ್ಚರಿಕಾ ಕ್ರಮವಾಗಿ, ಆಡಳಿತವು ಈ ಪ್ರದೇಶದಲ್ಲಿ ಇಂಟರ್ನೆಟ್ ಸೇವೆಯನ್ನು ನಿಷೇಧಿಸಿದೆ.


ಬಾರಾಮುಲ್ಲಾದಲ್ಲಿ ಓರ್ವ ಅರಣ್ಯ ಅಧಿಕಾರಿ ಹತ್ಯೆ
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಗುರುವಾರ ರಾತ್ರಿ ಅರಣ್ಯ ಇಲಾಖೆಯ ಅಧಿಕಾರಿಯ ಮೇಲೆ ಲಷ್ಕರ್-ಇ-ತೊಯ್ಬಾ ಭಯೋತ್ಪಾದಕರು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.  "ಸಾಯಂಕಾಲ ಭಯೋತ್ಪಾದಕರು ಟ್ಯಾಂಗ್ ಗರ್ಗ್ನ ಜಾಂಡ್ಪಾಲ್ ಪ್ರದೇಶದಲ್ಲಿ ತಾರಿಖ್ ಅಹ್ಮದ್ ಮಲಿಕ್ನ ಮನೆಗೆ ಪ್ರವೇಶಿಸಿ ಅವರನ್ನು ಗುಂಡಿಕ್ಕಿ ಕೊಂದರು" ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆರಂಭಿಕ ತನಿಖೆಯಲ್ಲಿ, ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಯೂಸುಫ್ ದಾರ್ ಅಲಿಯಾಸ್ ಕಂಟೊವೊ ಕೈವಾಡವಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.