2018ರ ಮಾರ್ಚ್ 23ರಿಂದ `ಜನಲೋಕ್ಪಾಲ್ ಚಳುವಳಿ`- ಅಣ್ಣಾ ಹಜಾರೆ
ಮಹಾರಾಷ್ಟ್ರದ ಅಹ್ಮದ್ ನಗರ್ ಜಿಲ್ಲೆಯ ರಾಳೆಗಾವ್ ಸಿದ್ದಿ ಗ್ರಾಮದಲ್ಲಿ ಅವರ ಬೆಂಬಲಿಗರ ಸಭೆಯಲ್ಲಿ ಮಾತನಾಡುತ್ತಾ, `ಜನಲೋಕ್ಪಾಲ್, ರೈತರ ಸಮಸ್ಯೆ ಮತ್ತು ಚುನಾವಣೆಯ ಸುಧಾರಣೆಗಾಗಿ ಈ ಸತ್ಯಾಗ್ರಹ` ಎಂದು ಹಜಾರೆ ಹೇಳಿದರು.
ಮುಂಬೈ: ಸಾಮಾಜಿಕ ಕಾರ್ಯಕರ್ತರಾದ ಅಣ್ಣಾ ಹಜಾರೆ 2018ರ ಮಾರ್ಚ್ 23ರಿಂದ 'ಜನಲೋಕ್ಪಾಲ್ ಚಳುವಳಿ' ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಮಾರ್ಚ್ 23 'ಹುತಾತ್ಮರ ದಿನ'ವಾದ್ದರಿಂದ ಆ ದಿನವನ್ನು ಆಯ್ಕೆಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಮಹಾರಾಷ್ಟ್ರದ ಅಹ್ಮದ್ ನಗರ್ ಜಿಲ್ಲೆಯ ರಾಳೆಗಾವ್ ಸಿದ್ದಿ ಗ್ರಾಮದಲ್ಲಿ ಅವರ ಬೆಂಬಲಿಗರ ಸಭೆಯಲ್ಲಿ ಮಾತನಾಡುತ್ತಾ, "ಜನಲೋಕ್ಪಾಲ್, ರೈತರ ಸಮಸ್ಯೆ ಮತ್ತು ಚುನಾವಣೆಯ ಸುಧಾರಣೆಗಾಗಿ ಈ ಸತ್ಯಾಗ್ರಹ" ಎಂದು ಹಜಾರೆ ತಿಳಿಸಿದರು. ಈ ಸಮಸ್ಯೆಗಳ ಬಗ್ಗೆ ಪ್ರಧಾನ ಮಂತ್ರಿಗೆ ಹಲವಾರು ಪತ್ರಗಳನ್ನು ಬರೆದಿದ್ದರೂ, ಪ್ರಧಾನಿಯವರಿಂದ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ಸ್ವೀಕರಿಸಲಿಲ್ಲ ಎಂದು ಗಾಂಧಿವಾದಿ ಹಜಾರೆ ಹೇಳಿದರು.
"ಕಳೆದ 22 ವರ್ಷಗಳಲ್ಲಿ ಕನಿಷ್ಠ 12 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಅವಧಿಯಲ್ಲಿ ಎಷ್ಟು ಕೈಗಾರಿಕೋದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಾನು ತಿಳಿದುಕೊಳ್ಳಲು ಬಯಸುತ್ತೇನೆ." ಭ್ರಷ್ಟಾಚಾರವನ್ನು ನಿಲ್ಲಿಸಲು ಜನಲೋಕ್ಪಾಲ್ ರಚನೆ ಆಗಲೇ ಬೇಕು ಎಂದು ಹಜಾರೆ ಒತ್ತಾಯಿಸುತ್ತಿದ್ದಾರೆ. "ಲೋಕಸಭೆಯಲ್ಲಿ ಪ್ರಭಾವಿ ಪ್ರತಿಪಕ್ಷದ ನಾಯಕರಿಲ್ಲದ ಕಾರಣ ಜನಲೋಕ್ಪಾಲ್ ಸಮಿತಿಯನ್ನು ರಚಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಲೋಕಪಾಲ್ ನೇಮಕ ಮಾಡುವುದನ್ನು ಸಾಧ್ಯವಿಲ್ಲ' ಎಂದು ಹಜಾರೆ ಕಳವಳ ವ್ಯಕ್ತಪಡಿಸಿದ್ದಾರೆ.
ಗಾಂಧಿವಾದಿ ಹಜಾರೆ 2011 ರಲ್ಲಿ 12 ದಿನಗಳ ಕಾಲ ಈ ಚಳುವಳಿ ಕೈಗೊಂಡಿದ್ದರು. ಯುಪಿಎ ಸರ್ಕಾರವು ಸೈದ್ದಾಂತಿಕ ತತ್ವಗಳ ಆಧಾರದ ಮೇಲೆ ಈ ಬೇಡಿಕೆಯನ್ನು ಒಪ್ಪಿಕೊಂಡಿತ್ತು.
ಇದಾದ ನಂತರ, ಹಜಾರೆ ಉಪವಾಸ ಮಾಡಿದ್ದರು. ಆ ಸಮಯದಲ್ಲಿ ಇಡೀ ದೇಶದಿಂದ ಅವರಿಗೆ ಬೆಂಬಲ ವ್ಯಕ್ತವಾಗಿತ್ತು. ಇದರ ನಂತರ ಯುಪಿಎ ಸರ್ಕಾರವು ಲೋಕಪಾಲ್ ಮಸೂದೆಯನ್ನು ಅಂಗೀಕರಿಸಿತು. ಆದರೆ ಮೋದಿ ಸರ್ಕಾರ ಲೋಕಪಾಲರನ್ನು ನೇಮಕ ಮಾಡಿಲ್ಲ, 'ಇದಕ್ಕೆ ಸರ್ಕಾರ ನೀಡಿದ ಕಾರಣಗಳು ತಾಂತ್ರಿಕವಾಗಿವೆ' ಎಂದು ಹಜಾರೆ ಸಹೋದ್ಯೋಗಿ ತಿಳಿಸಿದ್ದಾರೆ.