ನವದೆಹಲಿ: ಆರೆಸ್ಸೆಸ್ ನ್ನು ತಾಲಿಬಾನ್ ಗೆ ಹೋಲಿಸಿರುವ ಚಿತ್ರ ಸಾಹಿತಿ ಜಾವೇದ್ ಅಖ್ತರ್ ನಡೆಯನ್ನು ಶಿವಸೇನೆ ತಪ್ಪು ಎಂದು ಹೇಳಿದೆ.


COMMERCIAL BREAK
SCROLL TO CONTINUE READING

'ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಮೆಚ್ಚುವವರು ತಾಲಿಬಾನಿ ಮನಸ್ಥಿತಿಯವರು ಎಂದು ನೀವು ಹೇಗೆ ಹೇಳಬಹುದು ನಾವು ಇದನ್ನು ಒಪ್ಪುವುದಿಲ್ಲ,"ಎಂದು ಶಿವಸೇನೆಯ ಮುಖವಾಣಿ 'ಸಾಮ್ನಾ ಸಂಪಾದಕೀಯ ಹೇಳಿದೆ.


"ನಾವು ಹಿಂದುತ್ವದ ಹೆಸರಿನಲ್ಲಿ ಹುಚ್ಚುತನವನ್ನು ಒಪ್ಪುವುದಿಲ್ಲ' ಭಾರತವು ಪ್ರಜಾಪ್ರಭುತ್ವ ಮತ್ತು ಸಹಿಷ್ಣುತೆಯ ದೇಶವಾಗಿದೆ ಮತ್ತು ಯಾವುದೇ ರೂಪದಲ್ಲಿ ಇಸ್ಲಾಮಿಸ್ಟ್ ಮೂಲಭೂತವಾದಿಗೆ ಹೋಲಿಸಲು ಸಾಧ್ಯವಿಲ್ಲ ಎಂದು ಸಾಮ್ನಾ ಸಂಪಾದಕೀಯದಲ್ಲಿ ವಿವರಿಸಿದೆ ಅಷ್ಟೇ ಅಲ್ಲದೆ ಆರ್‌ಎಸ್‌ಎಸ್ ಮತ್ತು ಇತರ ಅಂಗಸಂಸ್ಥೆಗಳನ್ನು ರಾಷ್ಟ್ರ ನಿರ್ಮಾಣಕಾರರು ಎಂದು ವಿವರಿಸಿದೆ.


ಜಾವೇದ್ ಅಖ್ತರ್ (Javed Akhtar) ಇತ್ತೀಚೆಗೆ ಸುದ್ದಿ ವಾಹಿನಿಯೊಂದರಲ್ಲಿ ಪ್ರಪಂಚದಾದ್ಯಂತದ ಬಲಪಂಥೀಯ ಸಂಘಟನೆಗಳು ಅಸಾಧಾರಣವಾದ ಸಾಮ್ಯತೆಯನ್ನು ಹೊಂದಿವೆ ಎಂದು ವಿವರಿಸಿದ್ದರು. "ತಾಲಿಬಾನಿಗಳು ಇಸ್ಲಾಮಿಕ್ ರಾಜ್ಯವನ್ನು ಬಯಸಿದಂತೆ, ಹಿಂದೂ ರಾಷ್ಟ್ರವನ್ನು ಬಯಸುವವರೂ ಇದ್ದಾರೆ.ಈ ಜನರು ಒಂದೇ ಮನಸ್ಥಿತಿಯವರಾಗಿದ್ದಾರೆ - ಅದು ಮುಸ್ಲಿಂ, ಕ್ರಿಶ್ಚಿಯನ್, ಯಹೂದಿಗಳು ಅಥವಾ ಹಿಂದೂಗಳು" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್) ಹೆಸರಿಸದೆ ಹೇಳಿದರು.


ಇದನ್ನೂ ಓದಿ:"ಜಾವೇದ್ ಅಖ್ತರ್ ಒಳಗೊಂಡ ಯಾವುದೇ ಚಿತ್ರವನ್ನು ಪ್ರದರ್ಶಿಸಲು ಅನುಮತಿಸುವುದಿಲ್ಲ"


ಬಿಜೆಪಿ ಶಾಸಕ ಮತ್ತು ರಾಜ್ಯ ಪಕ್ಷದ ವಕ್ತಾರ ರಾಮ್ ಕದಮ್ ಜಾವೇದ್ ಅಖ್ತರ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರು. ಇನ್ನೂ ಮುಂದುವರೆದು ಅಖ್ತರ್ ಒಳಗೊಂಡ ಯಾವುದೇ ಚಿತ್ರವನ್ನು ಅವರು ಕ್ಷಮೆ ಕೇಳುವವರೆಗೆ ದೇಶದಲ್ಲಿ ಪ್ರದರ್ಶಿಸಲು ಅನುಮತಿಸಲಾಗುವುದಿಲ್ಲ ಎಂದು ಹೇಳಿದ್ದರು.ಏತನ್ಮಧ್ಯೆ, ಮುಂಬೈನ ಜಾವೇದ್ ಅಖ್ತರ್ ನಿವಾಸದ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.


ಇದನ್ನೂ ಓದಿ: Defamation Case: ಹೈಕೋರ್ಟ್ ಗೆ ಮೊರೆಹೋದ ನಟಿ ಕಂಗನಾ ರನೌತ್


ಜುಹು ಪ್ರದೇಶದ ಇಸ್ಕಾನ್ ದೇವಾಲಯದ ಬಳಿ ಅಖ್ತರ್ ನಿವಾಸದ ಹೊರಗೆ ಸಾಕಷ್ಟು ಪೊಲೀಸ್ ಬಂದೋಬಸ್ತ್ ಇರಿಸಲಾಗಿತ್ತು, ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು, ಮಹಿಳಾ ಕಾನ್ಸ್ಟೇಬಲ್ ಸೇರಿದಂತೆ ಭದ್ರತಾ ಸಿಬ್ಬಂದಿಯನ್ನು ಅವರ ಮನೆಯ ಹೊರಗೆ ನಿಯೋಜಿಸಲಾಗಿದೆ ಎಂದು ಹೇಳಿದರು.


ಇದನ್ನೂ ಓದಿ-PM Kisan Yojana: ಪಿಎಂ ಕಿಸಾನ್ ಫಲಾನುಭವಿಗಳಿಗೆ ಕಡಿಮೆ ದರದಲ್ಲಿ ಸಿಗಲಿದೆ Loan, ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.